ಮೈಸೂರು: ಪೊಲೀಸ್ ಹೆಡ್ ಕಾನ್ಸಟೇಬಲ್‌ಗೆ (Police Head Constable) ಬೆದರಿಕೆ ಮತ್ತು ಹಲ್ಲೆ ಆರೋಪದಡಿ ಹುಣಸೂರು (Hunasuru) ನಗರಸಭೆ ಸದಸ್ಯನ (Municipal Council Member) ವಿರುದ್ಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮೈಸೂರು (Mysore) ನಗರಸಭೆ ಮೈದಾನದಲ್ಲಿ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಆಯೋಜಿಸಲಾಗಿತ್ತು. ಈ ವೇಳೆ ಆಯೋಜಕರ ಮನವಿಯಂತೆ ಸಾರ್ವಜನಿಕರನ್ನು ಅಂಕಣದಿಂದ ಹೊರಗೆ ಹೋಗಲು ಹೆಡ್ ಕಾನ್ಸಟೇಬಲ್ ಮಹೇಶ್ ಹೇಳಿದ್ದರು.
ಈ ಸಂದರ್ಭದಲ್ಲಿ ಹೆಡ್ ಕಾನ್ಸಟೇಬಲ್ ಮಹೇಶ್ ಅವರು ಹುಣಸೂರು ನಗರಸಭೆಯ 17 ನೇ ವಾಡ್ ೯ ಸದಸ್ಯ ಸದಸ್ಯ ಮನುವನ್ನು ಕ್ರೀಡಾಂಗಣದಿಂದ ಹೊರ ಹೋಗಲು ಸೂಚಿಸಿದ್ದರು. ಈ ವೇಳೆ ಮನು ಏಕವಚನದಲ್ಲಿ ಕೂಗಾಡಿದ್ದ ನಂತರ ಮಹೇಶ್‌ರನ್ನು ಎಳೆದಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದೀಗ ನಗರಸಭೆ ಸದಸ್ಯ ಮನು ವಿರುದ್ಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಠಾಣೆಗೆ ಕರೆತರುತ್ತಿದ್ದಾಗ ಆರೋಪಿಯಿಂದ ಮಹಿಳಾ ಹೆಡ್ ಕಾನ್ಸ್ಟೇಬಲ್ಗೆ ಡ್ರ್ಯಾಗರ್ ನಿಂದ ಇರಿತ
ಬೆಂಗಳೂರು: ಆರೋಪಿ ರೌಡಿ ಆಸಾಮಿಯನ್ನು ಠಾಣೆಗೆ ಕರೆತರಲು ಹೋಗಿದ್ದಾಗ ಆರೋಪಿ ಮಹಿಳಾ ಹೆಡ್ ಕಾನ್ಸ್ಟೇಬಲ್ಗೆ ಡ್ರ್ಯಾಗರ್ನಿಂದ ಇರಿದಿದ್ದಾನೆ. ವಿನುತಾ(45) ಇರಿತಕ್ಕೆ ಒಳಗಾದ ಮಹಿಳಾ ಪೊಲೀಸ್ ಹೆಡ್ಕಾನ್ಸ್ಟೇಬಲ್. ಆರೋಪಿ ರೌಡಿ ಆಸಾಮಿ ಶೇಕ್ ಶರೀಫ್ ಶರೀಫ್ (25) ನಿಂದ ಕೃತ್ಯ ನಡೆದಿದೆ. ಆರೋಪಿ ಮೇಲೆ ಕೊಲೆ ಹಾಗೂ ಕೊಲೆಯತ್ನ ಪ್ರಕರಣಗಳು ಎಚ್ ಎ ಎಲ್ ಠಾಣೆಯಲ್ಲಿ ದಾಖಲಾಗಿದ್ದವು.
ಆರೋಪಿ ಇತ್ತೀಚೆಗರ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಬಂದಿದ್ದನು. ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದನು. ಅಲ್ಲದೇ ಮತ್ತೆ ಕೊಲೆ ಮಾಡಲು ಸಂಚು ರೂಪಿಸಿರೋದಾಗಿ ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ಹಿನ್ನಲೆ ಆತನನ್ನು ಠಾಣೆಗೆ ಕರೆತರಲು ಆಗಸ್ಟ್ 5 ರಂದು ಮಹಿಳಾ ಹೆಡ್ ಕಾನ್ಸ್ಟೇಬಲ್ ವಿನುತಾ ಮತ್ತು ತಂಡ ಹೋಗಿತ್ತು.
ಪೊಲೀಸರಿಗೆ ಆರೋಪಿ ಜ್ಯೋತಿನಗರದಿಂದ ರೆಡ್ಡಿ ಪಾಳ್ಯಕ್ಕೆ ತೆರಳ್ತಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಮಾಹಿತಿ ಆಧಾರದ ಮೇಲೆ ರಾತ್ರಿ 9.30 ಕ್ಕೆ ಆತನನ್ನು ಕರೆದುಕೊಂಡು ಹೋಗಲು ತಂಡ ಮುಂದಾಗಿದೆ. ಈ ವೇಳೆ ಮಹಿಳಾ ಪೊಲೀಸ್ ಸಿಬ್ಬಂದಿಗೆ ಡ್ರ್ಯಾಗರ್ ನಿಂದ ಇರಿದು ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೆ ಸ್ಥಳೀಯರ ಸಹಾಯದಿಂದ ಆತನ್ನನ್ನು ಹಿಡಿದು ಪೊಲೀಸರು ಠಾಣೆಗೆ ಕರೆತಂದಿದ್ದಾರೆ.
ಗಾಯಾಳು ಮಹಿಳಾ ಹೆಡ್ ಕಾನ್ಸ್ಟೇಬಲ್ ಜೀವಿಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. ಘಟನೆ ಸಂಬಂದ ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಲ್ವರು ಅಂತಾರಾಜ್ಯ ಕಳ್ಳರನ್ನ ಬಂಧಿಸಿ ಹುಬ್ಬಳ್ಳಿ ಪೊಲೀಸ್
ಹುಬ್ಬಳ್ಳಿ: ಹುಬ್ಬಳ್ಳಿ ಶಹರ ಠಾಣೆ ಪೊಲೀಸರು ನಾಲ್ವರು ಅಂತಾರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ. ತಮಿಳುನಾಡು ಮೂಲದ ವೇಲೊರು ಗ್ರಾಮದ ರಕ್ಷಿತ, ಪಾವಗಡ ನಿವಾಸಿ ನಿತಿನ್, ಹೊಸಪೇಟೆ ನಿವಾಸಿಗಳಾದ ಮಂಜು ಅಲಿಯಾಸ್ ಡಾಲಿ ಹಾಗೂ ಅರುಣ ಬಂಧಿತ ಆರೋಪಿಗಳು. 10ಕ್ಕೂ ಹೆಚ್ಚು ಅಂಗಡಿಗಳ ಶೆಟರ್ಸ್ ಮುರಿದು ನಗದು ದೋಚಿದ್ದರು. ಈ ಚಾಲಾಕಿ ಕಳ್ಳರು ಹುಬ್ಬಳ್ಳಿ ಅಲ್ಲದೇ ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಪೊಲೀಸ್ ಠಾಣೆಗೆ ಬೇಕಾದವರು.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:47 am, Wed, 17 August 22