ಮೈಸೂರು: ಫ್ರೀ ಕಾಶ್ಮೀರ ನಾಮಫಲಕ ಪ್ರದರ್ಶನ ಮಾಡಿದ್ದ ನಳಿನಿ ಮರಿದೇವಯ್ಯಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರಾಗಿದೆ. ಮೈಸೂರಿನ 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ನಿಂದ ಬೇಲ್ ಲಭಿಸಿದೆ. ಈ ಹಿಂದೆ ಮಧ್ಯಂತರ ಜಾಮೀನು ಪಡೆದಿದ್ದ ನಳಿನಿ ನಂತರ ಜಿಲ್ಲಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ನಳಿನಿ ಪರ ವಕಾಲತ್ತು ವಹಿಸದಂತೆ ಮೈಸೂರು ವಕೀಲರ ಸಂಘ ನಿರ್ಧಾರ ಕೈಗೊಂಡಿತ್ತು. ಕೆಲ ವಕೀಲರು ಬೆಂಗಳೂರಿನಿಂದ ಬಂದು ನಳಿನಿ ಪರ ವಕಾಲತ್ತು ವಹಿಸಿದ್ದರು. ಸದ್ಯ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ.
ನಳಿನಿಗೆ ನ್ಯಾಯಾಲಯ ನೀಡಿರುವ ಷರತ್ತುಗಳು:
-ತಲಾ 50 ಸಾವಿರ ರೂಪಾಯಿ ಮೌಲ್ಯದ ಬಾಂಡ್, ಒಬ್ಬರ ಶ್ಯೂರಿಟಿ.
-1 ತಿಂಗಳೊಳಗೆ ಪಾಸ್ಪೋರ್ಟ್ ಪೊಲೀಸರಿಗೆ ಒಪ್ಪಿಸಬೇಕು
-ಪ್ರಕರಣದ ತನಿಖೆಗೆ ಪೊಲೀಸರಿಗೆ ಸಹಕರಿಸುವಂತೆ ತಾಕೀತು ಮಾಡಲಾಗಿದೆ.
-ಬೆಳಗ್ಗೆ 10ರಿಂದ ಮಧ್ಯಾಹ್ನ 12ರೊಳಗೆ 15 ದಿನಗಳಿಗೊಮ್ಮೆ ಠಾಣೆಗೆ ಹಾಜರಾಗಿ ಸಹಿ ಹಾಕಬೇಕು.
ಜಾಮೀನು ಸಿಕ್ಕಿದ್ದರಿಂದ ನಳಿನಿ, ಮರಿದೇವಯ್ಯ ನಿರಾಳರಾಗಿದ್ದಾರೆ. ಜಯಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Published On - 8:22 pm, Mon, 27 January 20