ಮೈಸೂರು ಕೆ ಆರ್ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ; ದೂರುಗಳ ಸುರಿಮಳೆಗೆ ಡಿಸಿ ರೋಹಿಣಿ ಸಿಂಧೂರಿ ಹೇಳಿದ್ದೇನು?

ಇದೇ ವೇಳೆ ಬ್ಲ್ಯಾಕ್ ಫ್ಹಂಗಸ್ ರೋಗಿಗಳ ಆರೋಗ್ಯ ವಿಚಾರಿಸಲು ಕೆ.ಆರ್.ಆಸ್ಪತ್ರೆಯ ಬ್ಲ್ಯಾಕ್ ಫ್ಹಂಗಸ್ ರೋಗಿಗಳ ವಿಭಾಗಕ್ಕೆ ಸಹ ಡಿಸಿ ರೋಹಿಣಿ ಸಿಂಧೂರಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಮೈಸೂರು ಕೆ ಆರ್ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ; ದೂರುಗಳ ಸುರಿಮಳೆಗೆ ಡಿಸಿ ರೋಹಿಣಿ ಸಿಂಧೂರಿ ಹೇಳಿದ್ದೇನು?
ಮೈಸೂರು ಕೆ ಆರ್ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ; ದೂರುಗಳ ಸುರಿಮಳೆಗೆ ಡಿಸಿ ರೋಹಿಣಿ ಸಿಂಧೂರಿ ಹೇಳಿದ್ದೇನು?

Updated on: May 24, 2021 | 4:10 PM

ಮೈಸೂರು: ಕಳೆದ ವರ್ಷದಂತೆ ಮೈಸೂರಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಈ ಬಾರಿಯೂ ಪಿಪಿಇ‌ ಕಿಟ್ ಹಾಕಿಕೊಂಡು ಕೆ ಆರ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಆದರೆ ಅಲ್ಲಿ ಪರಿಸ್ಥಿತಿ ಕಳೆದ ವರ್ಷಕ್ಕಿಂತ ಭಿನ್ನವಾಗೇನೂ ಇಲ್ಲ. ರೋಗಿಗಳ ಪರದಾಟ ತಪ್ಪಿಲ್ಲ. ಸೋಂಕಿತರು, ರೋಗಿಗಳ ಸಂಬಂಧಿಕರು ಕೆ.ಆರ್.‌ಆಸ್ಪತ್ರೆಯ ಕೊರೊನಾ ವಾರ್ಡ್ ನಲ್ಲಿ ಕಣ್ಣಿಗೆ ರಾಚುತ್ತಿರುವ ಅವ್ಯವಸ್ಥೆಗಳ ಬಗ್ಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಗಮನಕ್ಕೆ ತಂದಿದ್ದಾರೆ.

ಕೆ.ಆರ್.‌ಆಸ್ಪತ್ರೆಯ ಕೊರೊನಾ ವಾರ್ಡ್ ನಲ್ಲಿ ಮೆಡಿಸಿನ್ ಇಲ್ಲ, ವಾರ್ಡ್ ಗಳಲ್ಲಿ ಸ್ವಚ್ಚತೆ ಇಲ್ಲ, ಸೆಕ್ಯೂರಿಟಿಗಳು ಸೌಜನ್ಯವಾಗಿ ವರ್ತಿಸಲ್ಲ‌ ಎಂದು ದೂರುಗಳ ಸರಮಾಲೆ ಹೊದ್ದುಕೊಂಡು ಮಲಗಿರುವ ಸೋಂಕಿತರನ್ನು ಕಂಡು ಪಿಪಿಇ‌ ಕಿಟ್ ಧಾರಿ ಡಿಸಿ ರೋಹಿಣಿ ಸಿಂಧೂರಿ ಮೌನವಾದರು. ಬಳಿಕ ಸಾವರಿಸಿಕೊಂಡು ನಾನಿದ್ದೇನೆ, ತಕ್ಷಣವೇ ಕಂಪ್ಲೇಂಟ್ ಬಾಕ್ಸ್ ಆರಂಭಿಸಿ. ಪ್ರತಿ ರೋಗಿಯ ಸಂಬಂಧಿ ಅದರಲ್ಲಿ ದೂರು ದಾಖಲಿಸಿ ಎಂದು ಫರ್ಮಾನು ಹೊರಡಿಸಿದ್ದಾರೆ. ಜೊತೆಗೆ, ಎಲ್ಲ ದೂರನ್ನು ಪ್ರತಿ ದಿನ ಸಂಜೆ ವೇಳೆಗೆ ನಾನೇ ಪರಿಶೀಲಿಸುತ್ತೇನೆ ಎಂದು ಹೇಳುವ ಮೂಲಕ ಆಸ್ಪತ್ರೆ ಸಿಬ್ಬಂದಿಗೆ ಡಿಸಿ ಬಿಸಿ ಮುಟ್ಟಿಸಿದ್ದಾರೆ.

ಮೈಸೂರು ಕೆ ಆರ್ ಆಸ್ಪತ್ರೆಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪಿಪಿಇ ಕಿಟ್​ ಧರಿಸಿ ಭೇಟಿ ನೀಡಿದ್ದರು

ಇದೇ ವೇಳೆ ಬ್ಲ್ಯಾಕ್ ಫ್ಹಂಗಸ್ ರೋಗಿಗಳ ಆರೋಗ್ಯ ವಿಚಾರಿಸಲು ಕೆ.ಆರ್.ಆಸ್ಪತ್ರೆಯ ಬ್ಲ್ಯಾಕ್ ಫ್ಹಂಗಸ್ ರೋಗಿಗಳ ವಿಭಾಗಕ್ಕೆ ಸಹ ಡಿಸಿ ರೋಹಿಣಿ ಸಿಂಧೂರಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

(Mysuru DC rohini sindhuri wearing ppe kit visited covid care ward in kr hospital)

Published On - 1:50 pm, Mon, 24 May 21