ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ಮಳೆ ಅವಾಂತರ: ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದ 8 ರೈಲುಗಳ ಸಂಚಾರ ರದ್ದು

| Updated By: ಆಯೇಷಾ ಬಾನು

Updated on: Aug 03, 2022 | 10:11 PM

ಮೈಸೂರು ಬೆಂಗಳೂರು ನಡುವಿನ ರೈಲ್ವೇ ಸಂಚಾರ ರದ್ದು ಮಾಡಿ ನೈಋತ್ಯ ರೈಲ್ವೆ ಮೈಸೂರು ವಿಭಾಗ ಮಾಧ್ಯಮ ಪ್ರಕಟನೆ ಹೊರಡಿಸಿದೆ. ಸೇತುವೆ ಸಂಖ್ಯೆ 627 ಮದ್ದುರು ಹನ್ನಕೆರೆ ನಡುವೆ ಪ್ರವಾಹದ ಹಿನ್ನಲೆ ಮೈಸೂರಿನಿಂದ ಬೆಂಗಳೂರು ಮುಖ್ಯ ನಿಲ್ದಾಣಕ್ಕೆ ಬರುವ 8 ರೈಲುಗಳನ್ನು ರದ್ದು ಮಾಡಲಾಗಿದೆ.

ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ಮಳೆ ಅವಾಂತರ: ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದ 8 ರೈಲುಗಳ ಸಂಚಾರ ರದ್ದು
ಸಾಂದರ್ಭಿಕ ಚಿತ್ರ
Follow us on

ಮೈಸೂರು: ರಾಜ್ಯದಲ್ಲಿ ವರುಣನ(Karnataka Rains) ಅಬ್ಬರ ಮುಂದುವರಿದಿದೆ. ವಿವಿಧ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗ್ತಿದ್ದು ಗುಡ್ಡ ಕುಸಿತ ಸಂಭವಿಸುತ್ತಿದೆ. ರಸ್ತೆ, ಮನೆಗಳು, ಕೃಷಿ ಭೂಮಿ ಜಲಾವೃತವಾಗಿದೆ. ನದಿಗಳೆಲ್ಲಾ ಉಕ್ಕಿ ಹರಿಯುತ್ತಿದೆ. ಸೇತುವೆಗಳು ಮುಳುಗಿ ಹೋಗಿವೆ. ಅನಾಹುತಗಳು ಸಂಭವಿಸುತ್ತಿವೆ. ಜೊತೆಗೆ ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ಮಳೆಯ ಅವಾಂತರ ಹಿನ್ನಲೆ ಮೈಸೂರು ಬೆಂಗಳೂರು ನಡುವಿನ ರೈಲ್ವೇ ಸಂಚಾರ ರದ್ದು ಮಾಡಲಾಗಿದೆ.

ಮೈಸೂರು ಬೆಂಗಳೂರು ನಡುವಿನ ರೈಲ್ವೇ ಸಂಚಾರ ರದ್ದು ಮಾಡಿ ನೈಋತ್ಯ ರೈಲ್ವೆ ಮೈಸೂರು ವಿಭಾಗ ಮಾಧ್ಯಮ ಪ್ರಕಟನೆ ಹೊರಡಿಸಿದೆ. ಸೇತುವೆ ಸಂಖ್ಯೆ 627 ಮದ್ದುರು ಹನ್ನಕೆರೆ ನಡುವೆ ಪ್ರವಾಹದ ಹಿನ್ನಲೆ ಮೈಸೂರಿನಿಂದ ಬೆಂಗಳೂರು ಮುಖ್ಯ ನಿಲ್ದಾಣಕ್ಕೆ ಬರುವ 8 ರೈಲುಗಳನ್ನು ರದ್ದು ಮಾಡಲಾಗಿದೆ.

  1. ಮೆಮು ರೈಲ್ವೇ ಸಂಖ್ಯೆ 06525 ಬೆಂಗಳೂರು ದಿಂದ ಮೈಸೂರು ಸಂರ್ಪೂಣ ರದ್ದು
  2. ಮೆಮು ರೈಲ್ವೇ ಸಂಖ್ಯೆ 06526 ಮೈಸೂರು ದಿಂದ ಬೆಂಗಳೂರು ಸಂರ್ಪೂಣ ರದ್ದು
  3. ಮೆಮು ರೈಲ್ವೇ ಸಂಖ್ಯೆ 06255 ಬೆಂಗಳೂರು ದಿಂದ ಮೈಸೂರು ಸಂರ್ಪೂಣ ರದ್ದು
  4.  ರೈಲ್ವೇ ಸಂಖ್ಯೆ 07328 ಚಾಮರಾಜನಗರ ದಿಂದ ಮೈಸೂರು ಸಂರ್ಪೂಣ ರದ್ದು
  5. ರೈಲ್ವೇ ಸಂಖ್ಯೆ ಮೈಸೂರುನಿಂದ ಎಸ್ ಎಂ ವಿ ಬೈಯಪನಹಳ್ಳಿ ಎಕ್ಸ್ ಪ್ರಸ್ ರೈಲ್ವೆ ರದ್ದು
  6. ರೈಲ್ವೇ ಸಂಖ್ಯೆ ಎಸ್ ಎಂ ವಿ ಬೈಯಪನಹಳ್ಳಿ ನಿಂದ ಮೈಸೂರು ಎಕ್ಸ್ ಪ್ರಸ್ ರೈಲ್ವೆ ರದ್ದು
  7. ರೈಲ್ವೇ ಸಂಖ್ಯೆ 06560 ಮೈಸೂರು ನಿಂದ ಬೆಂಗಳೂರು ಸಂರ್ಪೂಣ ರದ್ದು
  8. ಮೆಮು ರೈಲ್ವೇ ಸಂಖ್ಯೆ 06255 ಬೆಂಗಳೂರು ನಿಂದ ಮೈಸೂರು ಸಂರ್ಪೂಣ ರದ್ದು

ಇನ್ನು ರೈಲ್ವೇ ಸಂಖ್ಯೆ 07346 ತುಮಕೂರು ದಿಂದ ಚಾಮರಾಜನಗರ ಪ್ಯಾಸೇಂಜರ್ ಕೂಡ ರದ್ದು ಮಾಡಲಾಗಿದೆ. ರೈಲ್ವೇ ಸಂಖ್ಯೆ 07346 ರಾಮನಗರದಿಂದ ಚಾಮರಾಜನಗರ ಪ್ಯಾಸೇಂಜರ್ ರೈಲು ರದ್ದಾಗಿದ್ದು ರೈಲ್ವೇ ಸಂಖ್ಯೆ 16227 ಮೈಸೂರು ದಿಂದ ತಾಳಗುಪ್ಪ ಎಕ್ಸ್ ಪ್ರಸ್ ರೈಲು ಮಾರ್ಗ ಬದಲಾವಣೆ ಮಾಡಲಾಗಿದೆ.

ಮಂಡ್ಯದಲ್ಲೂ ರೈಲು ಸಂಚಾರ ಸ್ಥಗಿತ

ಇನ್ನು ಮತ್ತೊಂದೆಡೆ ಮಂಡ್ಯದಲ್ಲಿ ಭಾರಿ ಮಳೆ ಹಿನ್ನಲೆ ಬೆಳಿಗ್ಗೆಯಿಂದ ಸುಮಾರು 10 ರೈಲುಗಳ ಸಂಚಾರ ಸ್ಥಗಿತಗೊಂಡಿದೆ. ಬಹುತೇಕ ಮೆಮೂ ಹಾಗೂ ಪ್ಯಾಸೆಂಜರ್ ರೈಲು ಸಂಚಾರ ಸ್ಥಗಿತಗೊಂಡಿದೆ. ಉಳಿದಂತೆ ಕೆಲವು ರೈಲುಗಳ ಸಂಚಾರದಲ್ಲಿ ಸಮಯ ವ್ಯತ್ಯಾಸ ಕಂಡು ಬಂದಿದೆ. ಮದ್ದೂರು ಹಾಗೂ ಹನ್ನಕೆರೆ ಬಳಿಯ 627 ನೇ ಬ್ರಿಡ್ಜ್ ನಲ್ಲಿ ಡೆಂಜರ್ ಜೋನ್ ನಲ್ಲಿ ನೀರು ಹರಿಯುತ್ತಿದೆ. ಈ ಕಾರಣದಿಂದ ರೈಲು ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ನಾಳೆ ಪರಿಸ್ಥಿತಿ ನೋಡಿಕೊಂಡು ರೈಲು ಸಂಚಾರ ಆರಂಭಿಸಲಾಗುವುದು. ಈಗಾಗಲೇ ಮಂಡ್ಯ ಮದ್ದೂರು ರಾಷ್ಟ್ರೀಯ ಹೆದ್ದಾರಿ ಕೂಡ ಸಂಚಾರ ಬಂದ್ ಆಗಿದೆ. ಬದಲಿ ಮಾರ್ಗದ ಮೂಲಕ ಸಂಚಾರ ಮಾಡಲು ವ್ಯವಸ್ಥೆ ಮಾಡಲಾಗಿದೆ.

Published On - 10:02 pm, Wed, 3 August 22