ಮೈಸೂರು: ದನಗಳಿಗೆ ಹುಲ್ಲು ತರಲು ಹಿತ್ತಲಿಗೆ ಹೋಗಿದ್ದ ವೇಳೆ ಕಾಡಾನೆ ದಾಳಿಗೆ ರೈತ ಬಲಿ

| Updated By: Digi Tech Desk

Updated on: Feb 03, 2022 | 10:19 AM

ನಾಗರಹೊಳೆ ವೀರನಹೊಸಹಳ್ಳಿ ಅರಣ್ಯ ವಲಯದಿಂದ ಕಾಡಾ‌ನೆ ಬಂದಿತ್ತು. ರೈತ ರಾಜೇಶ್ ಮನೆ ಹಿಂಭಾಗ ಹಿತ್ತಲಲ್ಲಿ ದನಗಳಿಗೆ ಹುಲ್ಲು ತರಲು ಹೋಗುವಾಗ ಪಕ್ಕದ ಜಮೀನಿನಲ್ಲಿ ನಿಂತಿದ್ದ ಒಂಟಿ ಸಲಗ ಏಕಾ ಏಕಿ ರಾಜೇಶ್ ಮೇಲೆ ದಾಳಿ ನಡೆಸಿದೆ.

ಮೈಸೂರು: ದನಗಳಿಗೆ ಹುಲ್ಲು ತರಲು ಹಿತ್ತಲಿಗೆ ಹೋಗಿದ್ದ ವೇಳೆ ಕಾಡಾನೆ ದಾಳಿಗೆ ರೈತ ಬಲಿ
ಮೈಸೂರು: ದನಗಳಿಗೆ ಹುಲ್ಲು ತರಲು ಹಿತ್ತಲಿಗೆ ಹೋಗಿದ ವೇಳೆ ಕಾಡಾನೆ ದಾಳಿಗೆ ರೈತ ಬಲಿ
Follow us on

ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ಕೊಳವಿಗೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ರೈತ ಬಲಿಯಾದ ಘಟನೆ ನಡೆದಿದೆ. ಕೊಳವಿಗೆ ಗ್ರಾಮದ ರೈತ ರಾಜೇಶ್(50) ಮೃತಪಟ್ಟವರು. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಗರಹೊಳೆ ವೀರನಹೊಸಹಳ್ಳಿ ಅರಣ್ಯ ವಲಯದಿಂದ ಕಾಡಾ‌ನೆ ಬಂದಿತ್ತು. ರೈತ ರಾಜೇಶ್ ಮನೆ ಹಿಂಭಾಗ ಹಿತ್ತಲಲ್ಲಿ ದನಗಳಿಗೆ ಹುಲ್ಲು ತರಲು ಹೋಗುವಾಗ ಪಕ್ಕದ ಜಮೀನಿನಲ್ಲಿ ನಿಂತಿದ್ದ ಒಂಟಿ ಸಲಗ ಏಕಾ ಏಕಿ ರಾಜೇಶ್ ಮೇಲೆ ದಾಳಿ ನಡೆಸಿದೆ.

ಮಚ್ಚಿನಿಂದ ಕೊಚ್ಚಿ ಮಹಿಳೆ ಬರ್ಬರ ಹತ್ಯೆ
ಮೈಸೂರಿನ ಕ್ಯಾತಮಾರನಹಳ್ಳಿಯ ಶಾಲೆ ಬಳಿ ಇಂತಹದೊಂದು ಘಟನೆ ನಡೆದಿದೆ. ಆರೋಪಿ ಗಿರೀಶ್ ಸುನಿತಾ(30) ಹತ್ಯೆಗೈದು ಪರಾರಿಯಾಗಿದ್ದಾನೆ. ಗಿರೀಶ್‌ನನ್ನ ತಡೆಯಲೆತ್ನಿಸಿದ ಸುನಿತಾ ತಾಯಿ ಭಾರತಿ ಮೇಲೂ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಗಾಯಾಳು ಭಾರತಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸುನೀತಾಗೆ ಪರಿಚಯಸ್ಥನಾಗಿದ್ದ ಗಿರೀಶ್, ಕಳೆದ ಮೂರು ತಿಂಗಳಿಂದ ತಮಿಳುನಾಡಿನಲ್ಲಿ ನೆಲೆಸಿದ್ದ. ಎರಡು ದಿನಗಳ ಹಿಂದಷ್ಟೇ ಮೈಸೂರಿಗೆ ಬಂದಿದ್ದ. ಈ ವೇಳೆ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

ಕೌಟುಂಬಿಕ ಕಲಹ, ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ
ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಚಿಕ್ಕನಾಯಕನಹಳ್ಳಿಯಲ್ಲಿ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ nಡೆಸಲಾಗಿದೆ. ಶಶಿಕಲಾ ಮೇಲೆ ಶಶಿಕಲಾ ಪತಿ ಪ್ರಕಾಶ್ ಬಾಬು ಸಂಬಂಧಿಕರಿಂದಲೇ ಹಲ್ಲೆ ನಡೆದಿದೆ. ಮಂಜುನಾಥ್, ರಮೇಶ್, ಧನಂಜಯ್, ತುಳಸಮ್ಮ, ಚಂದು, ಪಿಳ್ಳಮ್ಮ, ಗಾಯತ್ರಿ ಸೇರಿದಂತೆ ಹಲವರಿಂದ ಹಲ್ಲೆ ನಡೆದಿದೆ. ಪರಾರಿಯಾಗಿರುವ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರೈಲಿಗೆ ತಲೆ ಕೊಟ್ಟು ಅಪರಿಚಿತ ವ್ಯಕ್ತಿ ಆತ್ಮಹತ್ಯೆ
ಯಶವಂತಪುರ ಬಳಿ ರೈಲಿಗೆ ತಲೆ ಕೊಟ್ಟು ಯಾದಗಿರಿ ಮೂಲದ ಹನುಮಂತು(23) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅನಾರೋಗ್ಯ ಹಿನ್ನೆಲೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಿಡ್ನಿ ಫೆಲ್ಯೂರ್ ಆಗಿದ್ದ ಹಿನ್ನೆಲೆ ಮನನೊಂದಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯುವಕನ ತಂದೆ ತಾಯಿ ಬಿಬಿಎಂಪಿಯಲ್ಲಿ ಕೂಲಿ ಕಾರ್ಮಿಕರಾಗಿದ್ದಾರೆ.

ಶಿಕ್ಷಕನ ಶವ ಪತ್ತೆ
ದಾವಣಗೆರೆ: ಜಗಳೂರು ತಾಲೂಕಿನ ಚಿಕ್ಕಬನ್ನಿಹಟ್ಟಿ ಗ್ರಾಮದ ಬಳಿ ರಸ್ತೆ ಪಕ್ಕ ಶಿಕ್ಷಕ ಮಾರುತಿ ನಾಯ್ಕ್(27) ಶವ ಪತ್ತೆಯಾಗಿದೆ. ನಿನ್ನೆ ಶಾಲೆಗೆ ಹೋದವರು ಮನೆಗೆ ವಾಪಸಾಗಿರಲಿಲ್ಲ. ಹುಡುಕಾಡಿದಾಗ ರಸ್ತೆ ಪಕ್ಕ ಶವ ಪತ್ತೆಯಾಗಿದೆ. ಬೈಕ್; ಅಪರಿಚಿತ ವಾಹನ ಗುದ್ದಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತ ಮಾರುತಿ ನಾಯ್ಕ ಜಗಳೂರು ತಾಲೂಕಿನ ಗಾಂಧಿ ನಗರ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದರು.

ಇದನ್ನೂ ಓದಿ: ಅಣ್ಣ ಕತ್ತರಿಯಿಂದ ನನ್ನ ಅಂಗಿ ತೋಳು ಕತ್ತರಿಸುತ್ತಿದ್ದರೆ, ಡಾಕ್ಟರ್ ಇಂಜೆಕ್ಷನ್ ಹಿಡಿದು ದೊಡ್ಡದಾಗಿ ನಗುತ್ತಿದ್ದರು; ಹೊಸ ಸ್ಕೂಟರ್​​ ತಂದಿಟ್ಟ ಕಷ್ಟ ಅಷ್ಟಿಷ್ಟಲ್ಲ !

Published On - 8:52 am, Thu, 3 February 22