ಅಪಾಯಕ್ಕೆ ಆಹ್ವಾನ ನೀಡುತ್ತಿದೆ ನಂಜನಗೂಡು ಸರ್ಕಾರಿ ಬಸ್ ಸ್ಟಾಪ್..

ಮೂರು ನಾಲ್ಕು ವರ್ಷಗಳ ಹಿಂದಷ್ಟೆ ಅಧಿಕಾರಿಗಳು ದುರಸ್ಥಿ ಕಾರ್ಯ ನಡೆಸಿದ್ದರು. ಆದರೆ ದುರಸ್ಥಿ ಮಾಡಿದ ಕೆಲವೇ ದಿನಗಳಲ್ಲಿ ಕುಸಿದು ಬೀಳುವ ಲಕ್ಷಣಗಳು ಕಂಡುಬರುತ್ತಿದೆ.

ಅಪಾಯಕ್ಕೆ ಆಹ್ವಾನ ನೀಡುತ್ತಿದೆ ನಂಜನಗೂಡು ಸರ್ಕಾರಿ ಬಸ್ ಸ್ಟಾಪ್..
ಬಸ್ ನಿಲ್ದಾಣದ ಮೇಲ್ಛಾವಣಿ ಕುಸಿದು ಬೀಳುವ ಅತಂಕ
Updated By: ಸಾಧು ಶ್ರೀನಾಥ್​

Updated on: Dec 31, 2020 | 12:34 PM

ಮೈಸೂರು: ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಬಂದು ಹೋಗುವ ನಂಜನಗೂಡಿನ ಸರ್ಕಾರಿ ಬಸ್ ನಿಲ್ದಾಣದ ಮೇಲ್ಛಾವಣಿ ಕುಸಿದು ಬೀಳುವ ಅತಂಕವಿದ್ದರು, ಇಲಾಖೆ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ.

ಮೂರು ನಾಲ್ಕು ವರ್ಷಗಳ ಹಿಂದಷ್ಟೆ ಅಧಿಕಾರಿಗಳು ದುರಸ್ಥಿ ಕಾರ್ಯ ನಡೆಸಿದ್ದರು. ಆದರೆ ದುರಸ್ಥಿ ಮಾಡಿದ ಕೆಲವೇ ದಿನಗಳಲ್ಲಿ ಕುಸಿದು ಬೀಳುವ ಲಕ್ಷಣಗಳು ಕಂಡುಬರುತ್ತಿದ್ದು, ಪ್ರಯಾಣಿಕರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು  ಬಸ್ ನಿಲ್ದಾಣಕ್ಕೆ ಪ್ರವೇಶಿಸುತ್ತಿದ್ದಾರೆ.

ಸುಮಾರು 280 ಗ್ರಾಮಗಳಿಗೆ ಬಸ್ ಸೇವೆ ಒದಗಿಸುತ್ತಿರುವ ಈ ಬಸ್ ನಿಲ್ದಾಣ ಯಾವಾಗ ಅನಾಹುತ ಮಾಡುತ್ತದೆ ಎಂದು ತಿಳಿಯುತ್ತಿಲ್ಲ. ಕಾಮಗಾರಿ ನಡೆಸಿದ ಗುತ್ತಿಗೆದಾರನ್ನು ಕಪ್ಪು ಪಟ್ಟಿಗೆ ಸೇರಿಸಿ, ಬೇರೆಯವರಿಗೆ ಮರು ಟೆಂಡರ್ ನೀಡಿ ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ಕೊಡಬೇಕೆಂದು ಆಗ್ರಹಿಸುತ್ತಿರುವ ಸ್ಥಳಿಯರು, ಅನಾಹುತ ಸಂಭವಿಸಿದರೆ ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸುತ್ತಿದ್ದಾರೆ.

ಪುರಾಣ ಪ್ರಸಿದ್ದ ಕ್ಷೇತ್ರ ಗೋಕರ್ಣದಲ್ಲಿ ಪಾರ್ಕಿಂಗ್​ ತಲೆನೋವು..