ಕೆರೆಯಲ್ಲಿ ಈಜಲು ಹೋಗಿದ್ದ ನಾಲ್ವರು ಶಾಲಾ ಬಾಲಕರು ನೀರುಪಾಲು!

|

Updated on: Feb 22, 2020 | 12:27 PM

ಮೈಸೂರು: ಕೆರೆಯಲ್ಲಿ ಈಜಲು ಹೋಗಿದ್ದ ನಾಲ್ವರು ಶಾಲಾ ಬಾಲಕರು ನೀರುಪಾಲಾಗಿರುವ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಮಲ್ಬಾರ್ ಗ್ರಾಮದಲ್ಲಿ ಸಂಭವಿಸಿದೆ. ನೀರಿನಲ್ಲಿ ಮುಳುಗಿ ಕಿರಣ, ಕೆಂಡಗಣ್ಣ ಹಾಗೂ ಸಹೋದರರಾದ ರೋಹಿತ್, ಯಶವಂತ‌ ಮೃತಪಟ್ಟಿದ್ದಾರೆ. ನಿನ್ನೆ ಶಾಲೆಗೆ ರಜೆ ಇದ್ದ ಕಾರಣ ಮಲ್ಬಾರ್ ಗ್ರಾಮದ ಕೆರೆಯಲ್ಲಿ ಈಜಲು ವಿದ್ಯಾರ್ಥಿಗಳು ತೆರಳಿದ್ದರು. ಕೆರೆ ಏರಿ ಮೇಲೆ ಬಾಲಕರ ಬಟ್ಟೆ ಹಾಗೂ ಬೈಸಿಕಲ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅನುಮಾನಗೊಂಡ ಗ್ರಾಮಸ್ಥರು ಕೆರೆಯಲ್ಲಿ ಹುಡುಕಾಟ ನಡೆಸಿದ್ದರು. ಆಗ ಕೆರೆಯಲ್ಲಿ ನಾಲ್ವರು ಬಾಲಕರ ಮೃತದೇಹ ಪತ್ತೆಯಾಗಿದೆ. […]

ಕೆರೆಯಲ್ಲಿ ಈಜಲು ಹೋಗಿದ್ದ ನಾಲ್ವರು ಶಾಲಾ ಬಾಲಕರು ನೀರುಪಾಲು!
Follow us on

ಮೈಸೂರು: ಕೆರೆಯಲ್ಲಿ ಈಜಲು ಹೋಗಿದ್ದ ನಾಲ್ವರು ಶಾಲಾ ಬಾಲಕರು ನೀರುಪಾಲಾಗಿರುವ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಮಲ್ಬಾರ್ ಗ್ರಾಮದಲ್ಲಿ ಸಂಭವಿಸಿದೆ. ನೀರಿನಲ್ಲಿ ಮುಳುಗಿ ಕಿರಣ, ಕೆಂಡಗಣ್ಣ ಹಾಗೂ ಸಹೋದರರಾದ ರೋಹಿತ್, ಯಶವಂತ‌ ಮೃತಪಟ್ಟಿದ್ದಾರೆ.

ನಿನ್ನೆ ಶಾಲೆಗೆ ರಜೆ ಇದ್ದ ಕಾರಣ ಮಲ್ಬಾರ್ ಗ್ರಾಮದ ಕೆರೆಯಲ್ಲಿ ಈಜಲು ವಿದ್ಯಾರ್ಥಿಗಳು ತೆರಳಿದ್ದರು. ಕೆರೆ ಏರಿ ಮೇಲೆ ಬಾಲಕರ ಬಟ್ಟೆ ಹಾಗೂ ಬೈಸಿಕಲ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅನುಮಾನಗೊಂಡ ಗ್ರಾಮಸ್ಥರು ಕೆರೆಯಲ್ಲಿ ಹುಡುಕಾಟ ನಡೆಸಿದ್ದರು. ಆಗ ಕೆರೆಯಲ್ಲಿ ನಾಲ್ವರು ಬಾಲಕರ ಮೃತದೇಹ ಪತ್ತೆಯಾಗಿದೆ.

ನಾಲ್ವರು ಶಾಲಾ ಬಾಲಕರ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದ್ದು, ಪೋಷಕರಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಗಿದೆ. ಮಕ್ಕಳ ಸಾವಿನಿಂದ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಘಟನೆ ಸಂಬಂಧ ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 12:13 pm, Sat, 22 February 20