ಮೈಸೂರಿನ ಸಿಹಿ ತಿಂಡಿ‌ ಮಾರಾಟ ಮಳಿಗೆ ಮೇಲೆ ಐಟಿ ದಾಳಿ

ನಗರದ ಡಿ.ದೇವರಾಜ ಅರಸು ರಸ್ತೆಯಲ್ಲಿರುವ ಅನಿಲ್ ಎಂಬುವರ ಮಾಲೀಕತ್ವದ ಬಾಂಬೆ ಟಿಫಾನಿಸ್ ಸಿಹಿ ತಿಂಡಿ ಅಂಗಡಿ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಮೈಸೂರಿನ ಸಿಹಿ ತಿಂಡಿ‌ ಮಾರಾಟ ಮಳಿಗೆ ಮೇಲೆ ಐಟಿ ದಾಳಿ
ಮೈಸೂರು ಸಿಹಿ ತಿಂಡಿ ಮಾರಾಟ ಮಳಿಗೆ

Updated on: May 03, 2023 | 2:27 PM

ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆ (Karnataka Assembly Election) ಹೊಸ್ತಿಲಲ್ಲಿ ಐಟಿ (IT) ಅಧಿಕಾರಿಗಳು ಫುಲ್​ ಆಕ್ಟಿವ್​ ಆಗಿದ್ದಾರೆ. ನಗರದ ಡಿ.ದೇವರಾಜ ಅರಸು ರಸ್ತೆಯಲ್ಲಿರುವ ಅನಿಲ್ ಎಂಬುವರ ಮಾಲೀಕತ್ವದ ಬಾಂಬೆ ಟಿಫಾನಿಸ್ ಸಿಹಿ ತಿಂಡಿ ಅಂಗಡಿ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಲ್ಲದೇ ಯಾದವಗಿರಿಯಲ್ಲಿರುವ ನಿವಾಸ ಹಾಗೂ ಆರ್.ಟಿ.ಓ.ಕಚೇರಿ ಬಳಿ ಇರುವ ನಿವಾಸಗಳ ಮೇಲೂ ಏಕಕಾಲಕ್ಕೆ ದಾಳಿ ಮಾಡಿದ್ದು, ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಹಾಗೂ ದೇವರಾಜ ಅರಸು ರಸ್ತೆ, ಸಿದ್ದಾರ್ಥ ನಗರ ಜೆಪಿ ನಗರದಲ್ಲಿರುವ ಶಾಖೆಗಳು ಹಾಗೂ ತಯಾರಿಕಾ ಘಟಕದಲ್ಲೂ ಪರಿಶೀಲನೆ ನಡೆಸಿದ್ದಾರೆ.

ನಿಷೇಧಿತ ಇ ಸಿಗರೇಟ್, ಇ ಲಿಕ್ವೀಡ್ ಮಾರಾಟ ಮಾಡುತ್ತಿದ್ದ ಕಂಪನಿ ಮೇಲೆ ಸಿಸಿಬಿ ದಾಳಿ

ಬೆಂಗಳೂರು: ನಿಷೇಧಿತ ಇ ಸಿಗರೇಟ್, ಈ ಲಿಕ್ವಿಡ್​​ ಮಾರಾಟ ಮಾಡುತ್ತಿದ್ದ ಕಂಪನಿ ಮೇಲೆ ಸಿಸಿಬಿ ಮಹಿಳಾ ಸಂರಕ್ಷಣಾ ವಿಭಾಗದ ಅಧಿಕಾರಿಗಳು ದಾಳಿ ಮಾಡಿದ್ದಾರೆ. ನಗರದ ಕುಂಬಾರಪೇಟೆಯ ಗೋಡೋನ್​ನಲ್ಲಿ ಸಂಗ್ರಹಿಸಿದ್ದ 1 ಕೋಟಿ  25 ಲಕ್ಷ ಮೌಲ್ಯದ ನಿಷೇಧಿತ ಲಿಕ್ವೀಡ್​​,  8 ಸಾವಿರ ರೂ. ಮೌಲ್ಯದ ವಿವಿಧ ಫ್ಲೇವರ್​ನ 2227 ಈ ಸಿಗರೇಟ್ ಲಿಕ್ವಿಡ್, ಈ ಸಿಗರೇಟ್ ಪಾಡ್ ಹಾಗೂ ಕೆಲ ಬಿಡಿಭಾಗಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಹಿಂದೆಯೂ ಎರಡು ಮೂರು ಬಾರಿ ಇದೇ ಗೋಡೋನ್ ಮೇಲೆ ದಾಳಿ ಮಾಡಲಾಗಿತ್ತು. ಆದರೂ ಕೂಡ ಪದೇ ಪದೇ ಇದೇ ರೀತಿ ನಿಷೇಧಿತ ಈ ಸಿಗರೇಟ್ ಶೇಖರಣೆ ಮಾಡಿ ಮಾರಾಟ ಮಾಡಲಾಗಿತ್ತದೆ. ಸದ್ಯ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.  ಸಚಿನ್ ಮತ್ತು ಸಿದ್ದಲಿಂಗ ಬಂಧಿತ ಆರೋಪಿಗಳು.

ಕಂಪನಿ ಕೆಲವೊಂದು ಪಾರ್ಟಿ, ಇವೆಂಟ್​ಗಳಿಗೆ ಸರಬರಾಜು ಮಾಡಿರುವುದು ಬಯಲಾಗಿದೆ. ಆದರೆ ಯಾವ ಯಾವ ಪಾರ್ಟಿ, ಇವೆಂಟ್ ಸರಬರಾಜು ಮಾಡಲಾಗಿದೆ ಎನ್ನುವುದು ಗೊತ್ತಾಗಬೇಕಿದೆ. ಜೊತೆಗೆ ಆನ್ ಲೈನ್ ಮೂಲಕವೂ ಈ ಸಿಗರೇಟ್ ಮಾರಾಟ ಮಾಡುತ್ತಿದ್ದರು. ಈ ಸಿಗರೇಟ್ ಆರೋಗ್ಯಕ್ಕೆ ಮಾರಕ ಅಂತ ಕೇಂದ್ರ ಸರ್ಕಾರ ನಿಷೇಧ ಮಾಡಿದೆ. ಆದರೂ ಇವರು ಬೇರೆ ಬೇರೆ ರಾಜ್ಯಗಳಿಂದ ಈ ಸಿಗರೇಟ್ ತಂದು ಮಾರಾಟ ಮಾಡುತ್ತಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:26 pm, Wed, 3 May 23