77 Independence Day: ಮೈಸೂರಿನಲ್ಲಿ ಬಿಸಿಲೋ ಬಿಸಿಲು, ಸಚಿವ ಡಾ ಹೆಚ್ ಸಿ ಮಹದೇವಪ್ಪ ಸುಸ್ತೋ ಸುಸ್ತು! ಭಾಷಣ ಓದಿ ಸುಸ್ತಾಗಿ ಕುಳಿತ ‘ಡಾಕ್ಟರ್’

| Updated By: ಸಾಧು ಶ್ರೀನಾಥ್​

Updated on: Aug 15, 2023 | 10:29 AM

Dr HC Mahadevappa: ಮೈಸೂರಿನ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸ್ವಾತಂತ್ರ್ಯ ಸಮಾರಂಭ ಅದ್ದೂರಿಯಾಗಿ ನಡೆಯುತ್ತಿದೆ. ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್ ಸಿ ಮಹದೇವಪ್ಪ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸುದೀರ್ಘವಾದ ಭಾಷಣ ಮಾಡತೊಡಗಿದರು. ಆದರೆ ಬಿಸಿಲಿಗೆ ಸಚಿವ ಡಾ ಹೆಚ್ ಸಿ ಮಹದೇವಪ್ಪ ಸುಸ್ತಾದರು. ಸುದೀರ್ಘ ಭಾಷಣ ಓದಿ ಸುಸ್ತಾಗಿ ಕುಳಿತರು. ಡಾ ಎಚ್ ಸಿ ಮಹದೇವಪ್ಪ ಅವರು ಸ್ವಾತಂತ್ರ್ಯೋತ್ಸವ ಭಾಷಣವನ್ನು ಮೊಟಕುಗೊಳಿಸಿದರು. ನೀರು ಕುಡಿದು ಸ್ವಲ್ಪ ಹೊತ್ತು ಸುಧಾರಿಸಿಕೊಂಡರು.

77 Independence Day: ಮೈಸೂರಿನಲ್ಲಿ ಬಿಸಿಲೋ ಬಿಸಿಲು, ಸಚಿವ ಡಾ ಹೆಚ್ ಸಿ ಮಹದೇವಪ್ಪ ಸುಸ್ತೋ ಸುಸ್ತು! ಭಾಷಣ ಓದಿ ಸುಸ್ತಾಗಿ ಕುಳಿತ ‘ಡಾಕ್ಟರ್’
ಭಾಷಣ ಓದಿ ಸುಸ್ತಾಗಿ ಕುಳಿತ ‘ಡಾಕ್ಟರ್’ ಮಹದೇವಪ್ಪ
Follow us on

ಮೈಸೂರು: ಮುಂಗಾರು ಮಳೆ ಕೊಂಚ ವಿರಾಮ ಕೊಟ್ಟಿದೆ. ಅದರಲ್ಲೂ ದೇಶದ 77ನೇ ಸ್ವಾತಂತ್ರ್ಯೋತ್ಸವದಂದು ಸೂರ್ಯ ಪ್ರಖರವಾಗಿ ಬೆಳಕು ಚೆಲ್ಲಿದ್ದಾನೆ. ಮೈಸೂರಿನಲ್ಲಿ (Mysore) ಕೊಂಚ ಹೆಚ್ಚೇ ಬಿಸಿಲಿನ ಝಳ (sunny day ) ಇದ್ದಂತಿದೆ. ಮೈಸೂರಿನ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸ್ವಾತಂತ್ರ್ಯ ಸಮಾರಂಭ ಅದ್ದೂರಿಯಾಗಿ ನಡೆಯುತ್ತಿದೆ. ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್ ಸಿ ಮಹದೇವಪ್ಪ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸುದೀರ್ಘವಾದ ಭಾಷಣ ಮಾಡತೊಡಗಿದರು. ಆದರೆ ಬಿಸಿಲಿಗೆ ಸಚಿವ ಡಾ ಹೆಚ್ ಸಿ ಮಹದೇವಪ್ಪ ( Dr HC Mahadevappa) ಸುಸ್ತಾದರು. ಸುದೀರ್ಘ ಭಾಷಣ ಓದಿ ಸುಸ್ತಾಗಿ ಕುಳಿತರು.

ಡಾ ಎಚ್ ಸಿ ಮಹದೇವಪ್ಪ ಅವರು ಸ್ವಾತಂತ್ರ್ಯೋತ್ಸವ ಭಾಷಣವನ್ನು ಮೊಟಕುಗೊಳಿಸಿದರು. ನೀರು ಕುಡಿದು ಸ್ವಲ್ಪ ಹೊತ್ತು ಸುಧಾರಿಸಿಕೊಂಡರು. ಚೇತರಿಸಿಕೊಂಡ ನಂತರ ಸಚಿವರು ಮತ್ತೆ ಕಾರ್ಯಕ್ರಮದಲ್ಲಿ‌ ಭಾಗಿಯಾದರು. ಡಾ ಹೆಚ್ ಸಿ ಮಹದೇವಪ್ಪ ತ್ರಿವರ್ಣ ಬಲೂನ್‌ಗಳನ್ನು ಹಾರಿ ಬಿಟ್ಟರು.

ಮೈಸೂರು ವಿಭಾಗೀಯ 58 ಚಾಲಕರಿಗೆ ಬೆಳ್ಳಿ ಪದಕ, ಪ್ರಶಸ್ತಿ ಪತ್ರ, ನಗದು ಬಹುಮಾನ

ಜಿಲ್ಲಾ ಉಸ್ತುವಾರಿ ಸಚಿವ ಎಚ್ ಸಿ ಮಹದೇವಪ್ಪ ಅವರು 77ನೇ ಸ್ವಾತಂತ್ರ್ಯ ಸಂಭ್ರದದ ಅಂಗವಾಗಿ ಚಾಲಕರಿಗೆ ಪ್ರಶಸ್ತಿ ಪುರಸ್ಕಾರ ವಿತರಿಸಿದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಮೈಸೂರು ವಿಭಾಗೀಯ ಸಂಚಾರ ಶಾಖೆ ವತಿಯಿಂದ ಮೈಸೂರು ಜಿಲ್ಲೆಯ ಒಟ್ಟು 58 ಚಾಲಕರಿಗೆ ಬೆಳ್ಳಿ ಪದಕ, ಪ್ರಶಸ್ತಿ ಪತ್ರ, ನಗದು ಬಹುಮಾನ ನೀಡಿದರು. ಅಪಘಾತ ರಹಿತ ಸೇವೆ ಸಲ್ಲಿಸಿದ ಚಾಲಕರಿಗೆ ಬೆಳ್ಳಿ ಪದಕ ನೀಡಿದರು. ಕೆ ಎಸ್ ಆರ್ ಟಿ ಸಿ ಚಾಲಕರಿಗೆ ಬೆಳ್ಳಿ ಪದಕ, ನಗದು ಪುರಸ್ಕಾರ ವಿತರಿಸಿದರು. ಗಣನೀಯ ಅವಧಿಯವರೆಗೆ ಸೇವೆ ಸಲ್ಲಿಸಿದ ಚಾಲಕರಿಗೆ ಗೌರವ ಸಂದಾಯವಾಯಿತು. ಗಂಡಭೇರುಂಡ ಲಾಂಛನದ 32 ಗ್ರಾಂ ಬೆಳ್ಳಿ ಪದಕ, ಪ್ರಶಸ್ತಿ ಪತ್ರ, ಎರಡೂ ಸಾವಿರ ನಗದು ಪುರಸ್ಕಾರ ನೀಡಲಾಯಿತು. 250 ರೂಪಾಯಿ ಮಾಸಿಕ ಪ್ರೋತ್ಸಾಹ ಭತ್ಯೆ ನೀಡಿ ಗೌರವಿಸಲಾಯಿತು.

ಮೈಸೂರು ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:22 am, Tue, 15 August 23