Mysore: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್​ನ ಹತ್ಯೆ: ದುಷ್ಕರ್ಮಿಗಳು ಪರಾರಿ

|

Updated on: May 18, 2023 | 7:45 PM

ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್​ನನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಒಂಟಿಕೊಪ್ಪಲಿನ ನಿವಾಸಿ ಚಂದ್ರಶೇಖರ್ ಅಲಿಯಾಸ್ ಚಂದು ಹತ್ಯೆಗೀಡಾದ ರೌಡಿಶೀಟರ್​.

Mysore: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್​ನ ಹತ್ಯೆ: ದುಷ್ಕರ್ಮಿಗಳು ಪರಾರಿ
ಚಂದ್ರಶೇಖರ್ ಅಲಿಯಾಸ್ ಚಂದು
Follow us on

ಮೈಸೂರು: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್​ನನ್ನು (rowdysheeter) ದುಷ್ಕರ್ಮಿಗಳು ಹತ್ಯೆ ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಒಂಟಿಕೊಪ್ಪಲಿನ ನಿವಾಸಿ ಚಂದ್ರಶೇಖರ್ ಅಲಿಯಾಸ್ ಚಂದು ಹತ್ಯೆಗೀಡಾದ ರೌಡಿಶೀಟರ್​. ಕೊಲೆ ಆಗಿರುವ ಚಂದು ನಗರಪಾಲಿಕೆ ಮಾಜಿ ಸದಸ್ಯ ಅವ್ವಾ ಮಾದೇಶ್ ಆಪ್ತ ಎನ್ನಲಾಗುತ್ತಿದೆ. ಬೈಕ್​ಗಳಲ್ಲಿ ಬಂದ 6 ದುಷ್ಕರ್ಮಿಗಳು ಮಚ್ಚು, ಲಾಂಗ್​ನಿಂದ ಕೊಚ್ಚಿ ಬರ್ಬರ ಹತ್ಯೆಗೈದು ಪರಾರಿ ಆಗಿದ್ದಾರೆ. ಹುಣಸೂರು ಜೋಡಿ ಕೊಲೆ ಕೇಸ್​ನಲ್ಲಿ ಚಂದು ಆರೋಪಿಯಾಗಿದ್ದು, ಕೆಲ ದಿನಗಳಿಂದಷ್ಟೇ ಜೈಲಿನಿಂದ ಹೊರ ಬಂದಿದ್ದ.

ಪಡುವಾರಳ್ಳಿಯ ದೇವು ಕೊಲೆಗೆ ಪ್ರತಿಕಾರ ತೀರಿಸಿಕೊಂಡ ಶಂಕೆ ವ್ಯಕ್ತವಾಗಿದ್ದು, ಒಂಟಿಕೊಪ್ಪಲಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಘಟನಾ ಸ್ಥಳಕ್ಕೆ ಜಯಲಕ್ಷ್ಮಿಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ವರದಕ್ಷಿಣೆ ಕಿರುಕುಳ: ಪತ್ನಿಯನ್ನು ಕೊಂದು ಕುಟುಂಬ ಸಹಿತ ಪತಿ ಪರಾರಿ

ದಾವಣಗೆರೆ: ತನ್ನನ್ನು ಚೆನ್ನಾಗಿ ನೋಡಿಕೊಳ್ಳಬಹುದು ಎಂದು ಭಾವಿಸಿ ಕುಟುಂಬದ ಹಿರಿಯರ ಸಮ್ಮುಖದಲ್ಲಿ ವಿವಾಹವಾಗಿದ್ದಾಕೆ ಇದೀಗ ಪತಿಯ ಅಕ್ರಮ ಸಂಬಂಧ ಹಾಗೂ ವರದಕ್ಷಿಣೆ ಕಿರುಕುಳದಿಂದ ದಾರುಣ ಅಂತ್ಯಕಂಡಿದ್ದಾಳೆ. ಪತಿಮಹಾಶಯನೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿ ತನ್ನ ಕುಟುಂಬಸ್ಥರೊಂದಿಗೆ ಪರಾರಿಯಾದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕತ್ತಲಗೆರೆ ಗ್ರಾಮದಲ್ಲಿ ನಡೆದಿದೆ. ಅನಿತಾ (28) ಹತ್ಯೆಯಾದ ಗೃಹಿಣಿ.

ಇದನ್ನೂ ಓದಿ: ಶಿವಮೊಗ್ಗ: ಇಬ್ಬರು ಕಾರ್ಮಿಕರನ್ನ ಪೀಕಾಸೆಯಿಂದ ಹೊಡೆದು ಬರ್ಬರ ಹತ್ಯೆ

ಐದು ವರ್ಷಗಳ ಹಿಂದೆಯಷ್ಟೇ ಅನಿತಾ ಅಶೋಕ್ ಎಂಬಾತನೊಂದಿಗೆ ವಿವಾಹವಾಗಿದ್ದಳು. ಆದರೆ ಅಶೋಕನಿಗೆ ಬೇರೆ ಯುವತಿ ಜೊತೆ ಅನೈತಿಕ ಸಂಬಂಧವಿತ್ತು. ಇದೇ ಕಾರಣಕ್ಕೆ ವರದಕ್ಷಿಣೆ ಕಿರುಕುಳ ನೀಡಿ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಮೃತ ಅನಿತಾಳ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಸದ್ಯ ಘಟನೆ ನಂತರ ಎಸ್ಕೇಪ್ ಆಗಿರುವ ಅಳಿಯ ಮತ್ತು ಅವರ ಕುಟುಂಬಸ್ಥರು ವಿರುದ್ಧ ಪೋಷಕರು ಬಸವಪಟ್ಟಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರಿಗೆ ಸ್ಥಳೀಯ ಯುವಕನಿಂದ ಕ್ಷುಲ್ಲಕ ಕಾರಣಕ್ಕೆ ಹಲ್ಲೆ: ಪ್ರವಾಸಿಗ ಆಸ್ಪತ್ರೆಗೆ ದಾಖಲು

ಉತ್ತರ ಕನ್ನಡ: ಕ್ಷುಲ್ಲಕ ಕಾರಣಕ್ಕೆ ಪ್ರವಾಸಿಗರ ಮೇಲೆ ಹಲ್ಲೆ, ಪ್ರತಿ ಹಲ್ಲೆ ಮಾಡಲಾಗಿದ್ದು, ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿರುವ ಘಟನೆ ಜಿಲ್ಲೆಯ ಮುರ್ಡೇಶ್ವರದಲ್ಲಿ ನಡೆದಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣದಿಂದ ಪ್ರವಾಸಕ್ಕೆ ಬಂದಿದ್ದ ಶಿವಕುಮಾರ್ ಗೌಡ ಹಾಗೂ ಮುರ್ಡೇಶ್ವರದ ಸುಬ್ರಾಯ ನಾರಾಯಣ ನಾಗೇಂದ್ರ ನಾಯ್ಕ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಟವಾಗಿದೆ.

ಇದನ್ನೂ ಓದಿ: ಬೆಂಗಳೂರು: ನಡು ರಸ್ತೆಯಲ್ಲಿ ಹತ್ಯೆಗೈದು ಸಹೋದರಿಗೆ ಕರೆ ಮಾಡಿ ವಿಷಯ ತಿಳಿಸಿದ ಹಂತಕರು

ಈ ವೇಳೆ ಇಬ್ಬರಿಗೂ ಗಾಯವಾಗಿದ್ದು, ಗಾಯಗೊಂಡ ರಾಮನಗರದ ಯುವಕನನ್ನು ಮಣಿಪಾಲ್ ಆಸ್ಪತ್ರೆಗೆ, ಹಾಗೂ ಸ್ಥಳೀಯ ಯುವಕನನ್ನು ಕುಂದಾಪುರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಕುರಿತು ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:45 pm, Thu, 18 May 23