ಶಿವಮೊಗ್ಗ: ಇಬ್ಬರು ಕಾರ್ಮಿಕರನ್ನ ಪೀಕಾಸೆಯಿಂದ ಹೊಡೆದು ಬರ್ಬರ ಹತ್ಯೆ
ಪೀಕಾಸೆಯಿಂದ ಹೊಡೆದು ಕಾರ್ಮಿಕರನ್ನು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುರುವಳ್ಳಿ ಗ್ರಾಮದಲ್ಲಿ ನಡೆದಿದೆ. ವಿಶ್ವಕರ್ಮ ಸಮುದಾಯ ಭವನದ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಆರೋಪಿ ರಾಜಣ್ಣ ಎಂಬಾತ ಮಂಜಪ್ಪ(45), ಬೀರೇಶ್(35) ಎಂಬಿಬ್ಬರನ್ನ ಕೊಲೆ ಮಾಡಿದ್ದಾನೆ.

ಶಿವಮೊಗ್ಗ: ಪೀಕಾಸೆಯಿಂದ ಹೊಡೆದು ಕಾರ್ಮಿಕರನ್ನು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿ(Thirthahalli) ತಾಲೂಕಿನ ಕುರುವಳ್ಳಿ ಗ್ರಾಮದಲ್ಲಿ ನಡೆದಿದೆ. ವಿಶ್ವಕರ್ಮ ಸಮುದಾಯ ಭವನದ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಆರೋಪಿ ರಾಜಣ್ಣ ಎಂಬಾತ ಮಂಜಪ್ಪ(45), ಬೀರೇಶ್(35) ಎಂಬಿಬ್ಬರನ್ನ ಕೊಲೆ ಮಾಡಿದ್ದಾನೆ. ಇನ್ನು ರಾತ್ರಿ ಕುಡಿದು ಗಲಾಟೆ ಮಾಡಿಕೊಂಡಿದ್ದ ಮೂವರು ಕಾರ್ಮಿಕರು, ಈ ವೇಳೆ ಆರೋಪಿ ರಾಜಣ್ಣನನ್ನು ಮಂಜಪ್ಪ ಹಾಗೂ ಬೀರೇಶ್ ಥಳಿಸಿದ್ದರು. ಇದೇ ಕಾರಣಕ್ಕೆ ಇಂದು(ಮೇ.18) ಪೀಕಾಸೆಯಿಂದ ಹೊಡೆದು ಇಬ್ಬರನ್ನು ಹತ್ಯೆ ಮಾಡಿದ್ದಾನೆ. ಈ ಹಿನ್ನಲೆ ಆರೋಪಿ ರಾಜಣ್ಣ(58)ನನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿದ್ದು, ಘಟನಾ ಸ್ಥಳಕ್ಕೆ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಭೇಟಿ ನೀಡಿದ್ದಾರೆ.
ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರಿಗೆ ಸ್ಥಳೀಯ ಯುವಕನಿಂದ ಕ್ಷುಲ್ಲಕ ಕಾರಣಕ್ಕೆ ಹಲ್ಲೆ; ಪ್ರವಾಸಿಗ ಆಸ್ಪತ್ರೆಗೆ ದಾಖಲು
ಉತ್ತರ ಕನ್ನಡ: ಕ್ಷುಲ್ಲಕ ಕಾರಣಕ್ಕೆ ಪ್ರವಾಸಿಗರ ಮೇಲೆ ಹಲ್ಲೆ, ಪ್ರತಿ ಹಲ್ಲೆ ಮಾಡಲಾಗಿದ್ದು, ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿರುವ ಘಟನೆ ಜಿಲ್ಲೆಯ ಮುರ್ಡೇಶ್ವರದಲ್ಲಿ ನಡೆದಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣದಿಂದ ಪ್ರವಾಸಕ್ಕೆ ಬಂದಿದ್ದ ಶಿವಕುಮಾರ್ ಗೌಡ ಹಾಗೂ ಮುರ್ಡೇಶ್ವರದ ಸುಬ್ರಾಯ ನಾರಾಯಣ ನಾಗೇಂದ್ರ ನಾಯ್ಕ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಟವಾಗಿದೆ. ಈ ವೇಳೆ ಇಬ್ಬರಿಗೂ ಗಾಯವಾಗಿದ್ದು, ಗಾಯಗೊಂಡ ರಾಮನಗರದ ಯುವಕನನ್ನು ಮಣಿಪಾಲ್ ಆಸ್ಪತ್ರೆಗೆ, ಹಾಗೂ ಸ್ಥಳೀಯ ಯುವಕನನ್ನು ಕುಂದಾಪುರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಕುರಿತು ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಕಲಬುರಗಿ: ಜಮೀನಿಗೆ ಹೋದ ಮಹಿಳೆಯ ಬರ್ಬರ ಹತ್ಯೆ; ಅರ್ಧಂಬರ್ಧ ಮಣ್ಣು ಮುಚ್ಚಿದ ಸ್ಥಿತಿಯಲ್ಲಿ ಪತ್ತೆಯಾಯಿತು ಮಹಿಳೆ ಶವ
ಬಿಜೆಪಿ ಕಾರ್ಯಕರ್ತರಿಗೆ ಪೊಲೀಸ್ ದೌರ್ಜನ್ಯ ಪ್ರಕರಣ; ಪುತ್ತೂರು ಡಿವೈಎಸ್ಪಿ ಸೇರಿ ಮೂವರು ಪೊಲೀಸರ ವಿರುದ್ಧ ಎಫ್ಐಆರ್
ಮಂಗಳೂರು: ಬಿಜೆಪಿ ಕಾರ್ಯಕರ್ತರಿಗೆ ಪೊಲೀಸ್ ದೌರ್ಜನ್ಯ ಪ್ರಕರಣ ಹಿನ್ನಲೆ ಪುತ್ತೂರು ಡಿವೈಎಸ್ಪಿ ಸೇರಿ ಮೂವರು ಪೊಲೀಸರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಹೊಟ್ಟೆ, ತೊಡೆ, ತಲೆ, ಮೊಣಕಾಲಿಗೆ ಹೊಡೆದಿದ್ದಾಗಿ ಕಾರ್ಯಕರ್ತನ ಹೇಳಿಕೆ ಮೇಲೆ ಪುತ್ತೂರು ಡಿವೈಎಸ್ಪಿ ವೀರಯ್ಯ ಹಿರೇಮಠ, ಸಂಪ್ಯ ಎಸ್ಐ, ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದ್ದು, ಹಲ್ಲೆಗೊಳಗಾದ ಕಾರ್ಯಕರ್ತ ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ರಾತ್ರಿ ವೇಳೆ ಅರುಣ್ ಪುತ್ತಿಲ ಬರದೇ ಇರುತ್ತಿದ್ದರೆ ಲಾಕಪ್ ಡೆತ್ ಆಗುತ್ತಿತ್ತು. ಡಿವೈಎಸ್ಪಿ ಅಧಿಕಾರಿ ಸೇರಿ ಇತರ ಪೊಲೀಸರು ಜೊತೆಗೂಡಿ ಹಲ್ಲೆ ಮಾಡಲಾಗಿದ್ದು, ಎಫ್ಐಆರ್ ದಾಖಲಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡ್ತೀವಿ ಎಂದು ಬೆದರಿಕೆ ಹಾಕಿದ್ದರು. ಹೌದು ಆಸ್ಪತ್ರೆಗೆ ಅರುಣ್ ಕುಮಾರ್ ಪುತ್ತಿಲ ಭೇಟಿಯ ವೇಳೆ ಎಸ್ಪಿಗೆ ವಾರ್ನಿಂಗ್ ಕೊಟ್ಟಿದ್ದರು. ಘಟನೆ ಹಿನ್ನೆಲೆಯಲ್ಲಿ ಎಸ್ಪಿ ವಿಕ್ರಮ್ ಅಮಟೆ ತನಿಖೆ ವಹಿಸಿಕೊಂಡಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ