ಮೈಸೂರು: ಮಂಗಳಮುಖಿ ನೇಣಿಗೆ ಶರಣು, ಕೆರೆ ಕೋಡಿಯಲ್ಲಿ ವ್ಯಕ್ತಿಯ ಶವ ಪತ್ತೆ
ಮೈಸೂರಿನಲ್ಲಿ 24 ವರ್ಷದ ಮಂಗಳಮುಖಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮತ್ತೊಂದೆಡೆ ಕೆರೆ ಕೋಡಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಪ್ರತ್ಯೇಕ ಘಟನೆಯ ವಿವರ ಇಲ್ಲಿದೆ.

ಮೈಸೂರು: ಜೀವನದಲ್ಲಿ ಜಿಗುಪ್ಸೆಗೊಂಡು ಮಂಗಳಮುಖಿ ನೇಣಿಗೆ ಶರಣಾಗಿರುವ ಘಟನೆ ಮೈಸೂರಿನ ಕಲ್ಯಾಣಗಿರಿಯಲ್ಲಿ ನಡೆದಿದೆ. ಸಭಾ ಅಲಿಯಾಸ್ ಸಾದೀಕ್ ಪಾಷಾ(24) ಆತ್ಮಹತ್ಯೆ ಮಾಡಿಕೊಂಡು ಮಂಗಳಮುಖಿ. ಸಭಾ ಅಲಿಯಾಸ್ ಸಾದೀಕ್ ಪಾಷಾ 4 ವರ್ಷದ ಹಿಂದೆ ಮಂಗಳಮುಖಿಯಾಗಿ ಲಿಂಗ ಬದಲಾವಣೆ ಮಾಡಿಕೊಂಡಿದ್ದರು. ಆದ್ರೆ, ಇದೀಗ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಈ ಬಗ್ಗೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ದಾಖಲಾಗಿದೆ.
ಮೈಸೂರಿನ ಕೆರೆ ಕೋಡಿಯಲ್ಲಿ ವ್ಯಕ್ತಿಯ ಶವ ಪತ್ತೆ
ಮೈಸೂರಿನ ಕೆರೆ ಕೋಡಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೈಸೂರು ತಾಲ್ಲೂಕು ಗಿರಿ ಬೆಟ್ಟದಕೆರೆ ಕೋಡಿಯಲ್ಲಿ ಶವಪತ್ತೆಯಾಗಿದ್ದು, ಶವದ ಸುತ್ತ ಕಬ್ಬಿಣದ ಜಾಲರಿ, ಹಗ್ಗ ಹಾಗೂ ತಂತಿಯಿಂದ ಕಟ್ಟಿರುವ ಸ್ಥಿತಿಯಲ್ಲಿದೆ. ಎರಡೂ ಕೈ ಹಾಗೂ ಕಾಲು ಹಗ್ಗದಿಂದ ಕಟ್ಟಲಾಗಿದೆ. ಇನ್ನು ಕಲ್ಲುಕಂಬದ ಮೇಲೆ ಇಟ್ಟು ಕಂಬವನ್ನು ಸೇರಿ ಕಬ್ಬಿಣದ ಜಾಲರಿ ಕಟ್ಟಲಾಗಿದ್ದು, ಮೃತದೇಹದ ಗುರುತು ಪತ್ತೆಯಾಗಿಲ್ಲ. ಹೀಗಾಗಿ ಕೊಲೆ ಮಾಡಿ ಕೆರೆಗೆ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಈ ಬಗ್ಗೆ ವರುಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.