ಮೈಸೂರು: ನಾಳೆ ಹಾಗೂ ನಾಡಿದ್ದು ವೀಕೆಂಡ್ ಕರ್ಫ್ಯೂ ಇರುವ ಕಾಣುವ ಮೈಸೂರು ಅರಮನೆ ವೀಕ್ಷಣೆಗೆ 2 ದಿನಗಳ ಕಾಲ ನಿರ್ಬಂಧ ವಿಧಿಸಲಾಗಿದೆ. ಶನಿವಾರ ಹಾಗೂ ರವಿವಾರ ಅರಮನೆ ವೀಕ್ಷಣೆಗೆ ನಿರ್ಬಂಧ ವಿಧಿಸಲಾಗಿದ್ದು, ಈಕುರಿತು ಅರಮನೆ ಮಂಡಳಿ ಉಪ ನಿರ್ದೇಶಕ ಸುಬ್ರಹ್ಮಣ್ಯ ಮಾಹಿತಿ ನೀಡಿದ್ದಾರೆ.
ಇತ್ತೀಚಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೈಸೂರಿಗೆ ಭೇಟಿ ನೀಡಿ ಚಾಮುಂಡೇಶ್ವರಿಯ ದರ್ಶನ ಪಡೆದುಕೊಮಡಿದ್ದರು. ಈವೇಳೆ ಮಾತನಾಡಿದ್ದ ಅವರು, ಮುಂದಿನ ಒಂದೆರಡು ವಾರಗಳಲ್ಲಿ ಕೊವಿಡ್ ಹೆಚ್ಚಾಗಲಿದೆಯೋ ಕಡಿಮೆ ಆಗಲಿದೆಯೇ ನೋಡುತ್ತೇವೆ. ಹೈ ಪವರ್ ಕಮಿಟಿಯಲ್ಲಿ ಮೈಸೂರು ದಸರಾ ಬಗ್ಗೆ ಚರ್ಚೆ ಮಾಡುತ್ತೇವೆ. ಕೊರೊನಾ ಸ್ಥಿತಿಗತಿ ಬಗ್ಗೆ ಅಧಿಕಾರಿಗಳ ಜತೆ ಸಭೆ ನಡೆಸಿದ್ದೇನೆ. ಆನಂತರ ಒಂದು ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿವರಿಸಿದರು. ಕೊರೊನಾ 3ನೇ ಅಲೆ ಬರದಂತೆ ಪ್ರಾರ್ಥನೆ ಮಾಡೋಣ. 3ನೇ ಅಲೆ ಬರದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಕೇರಳ, ಮಹಾರಾಷ್ಟ್ರದಲ್ಲಿ ಕೊರೊನಾ ಕೇಸ್ ಹೆಚ್ಚಾಗುತ್ತಿದೆ. ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಡಿಸಿಗಳಿಗೆ ಸೂಚಿಸಿದ್ದೇನೆ. ಕಡ್ಡಾಯವಾಗಿ ಕೊವಿಡ್-19 ಟೆಸ್ಟ್ ಮಾಡುವಂತೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದರು.
ರಾಜ್ಯಕ್ಕೆ 63ರಿಂದ 64 ಲಕ್ಷ ಡೋಸ್ ಲಸಿಕೆ (Covid Vaccine) ಬರುತ್ತಿದೆ. ಮುಂದಿನ ತಿಂಗಳಿಂದ 1.5 ಕೋಟಿ ಡೋಸ್ ಲಸಿಕೆಗೆ ಮನವಿ ಮಾಡಿದ್ದೇನೆ. ಮೈಸೂರು, ಕೊಡಗು ಜಿಲ್ಲೆಯಲ್ಲಿ ಟೆಸ್ಟಿಂಗ್ ಹೆಚ್ಚಿಸಬೇಕು. ಮೈಸೂರು ಜಿಲ್ಲೆಗೆ 14 ಆಕ್ಸಿಜನ್ ಜನರೇಟರ್ ಮಂಜೂರು ಮಾಡುತ್ತೇವೆ. ತಜ್ಞರ ಸಲಹೆಯಿಂದ ಗಡಿ ಭಾಗದಲ್ಲಿ ಎಲ್ಲರಿಗೂ ತಪಾಸಣೆ ಮಾಡಲಿದ್ದೇವೆ. ರಾಜ್ಯದ ಗಡಿ ಜಿಲ್ಲೆಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ ಮತ್ತು ಗಡಿ ಭಾಗದ ಗ್ರಾಮಗಳ ಜನರಿಗೆ ಆದ್ಯತೆ ಮೇರೆಗೆ ಲಸಿಕೆ ವಿತರಿಸುತ್ತೇವೆ ಎಂದು ತಿಳಿಸಿದ್ದರು.
ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಪರಿಣಾಮ ವಿಚಾರವಾಗಿಯೂ ಮಾಹಿತಿ ನೀಡಿದ ಅವರು,ಪ್ರತಿ ಗ್ರಾಮದಲ್ಲಿ ಮಕ್ಕಳ ಹೆಲ್ತ್ ಕ್ಯಾಂಪ್ ಮಾಡಲಾಗುತ್ತೆ. ಶಾಲೆಗೆ ಬರುವ ಎಲ್ಲಾ ಮಕ್ಕಳ ತಪಾಸಣೆ ವ್ಯವಸ್ಥೆ ಮಾಡಲುತ್ತದೆ. ಅಪೌಷ್ಟಿಕ ಮಕ್ಕಳ ಬಗ್ಗೆ ಕಿಟ್ ನೀಡುವ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದ್ದರು
ಮೈಸೂರು ಜಿಲ್ಲೆಯಲ್ಲಿ ವೀಕೆಂಡ್ ಲಾಕ್ಡೌನ್ಗೆ ವಿರೋಧಿಸಿ ಗಡಿ ಬಂದ್ ಮಾಡಿ, ನಗರ ಬಂದ್ ಮಾಡಬೇಡಿ ಅಭಿಯಾನ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅವರು, ಮೈಸೂರಿನ ಹಿತದೃಷ್ಟಿಯಿಂದ ಈ ನಿರ್ಧಾರ ಮಾಡಲಾಗಿದೆ. ಮೈಸೂರಿಗೆ ಕೇರಳ ಮಹಾರಾಷ್ಟ್ರ ಮಾತ್ರವಲ್ಲ ಹೊರಗಿನಿಂದ ಹೆಚ್ಚು ಜನ ಬರುತ್ತಾರೆ. ನಮಗೆ ಮೈಸೂರು ಜನರ ಸುರಕ್ಷತೆ ಮುಖ್ಯ. ಇದನ್ನು ಎಲ್ಲರೂ ಅರ್ಥ ಮಾಡಿಕೊಂಡು ಸಹಕರಿಸಬೇಕು. ಮೈಸೂರಿಗರ ಅಭಿಪ್ರಾಯ ಸಂಗ್ರಹ ಮಾಡಿ ತಜ್ಞರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದರು.
ಇದನ್ನೂ ಓದಿ:
Tv9 Kannada Digital Exclusive: ದೇಶದಲ್ಲಿ ಬರಲಿದೆ ಜನರು ಮುಂಚಿತವಾಗಿ ಹಣ ಪಾವತಿಸಿ ವಿದ್ಯುತ್ ಬಳಸುವ ಕಾಲ!
ಐ ಲವ್ ತಾಲಿಬಾನಿ ಎಂದ ಬಾಗಲಕೋಟೆ ಯುವಕನ ಮೇಲೆ ದೇಶದ್ರೋಹದ ಕೇಸ್ ಹಾಕಲು ಸ್ವಧರ್ಮೀಯರಿಂದಲೇ ಆಗ್ರಹ
(Karnataka Covid 19 Weekend Curfew restrictions on Mysore Palace on this Saturday and Sunday)
Published On - 4:55 pm, Fri, 20 August 21