ಅಮ್ಮ ಸ್ಕೂಟರ್​ ಕೊಡಿಸಿಲ್ಲವೆಂದು ತಂಗಿಯ ಮಗುವನ್ನು ಕೊಂದವ ಅರೆಸ್ಟ್​; 8 ತಿಂಗಳ ಮಗುವನ್ನು ಗೋಡೆಗೆ ಎಸೆದು ಹತ್ಯೆ

ರಾಜುವಿನ ತಂಗಿ ರಮ್ಯಾ, ಬಾಣಂತನಕ್ಕಾಗಿ ಬಂದವಳು, ತವರು ಮನೆಯಲ್ಲೇ ಇದ್ದಳು. ತಾಯಿ ಮನೆಯಲ್ಲಿ ಇಲ್ಲದಾಗ, ಬಾಗಿಲ ಚಿಲಕ ಹಾಕಿಕೊಂಡು ತಂಗಿಯ ಬಳಿ ಜೋರಾಗಿ ಗಲಾಟೆ ಮಾಡಿದ್ದ.

ಅಮ್ಮ ಸ್ಕೂಟರ್​ ಕೊಡಿಸಿಲ್ಲವೆಂದು ತಂಗಿಯ ಮಗುವನ್ನು ಕೊಂದವ ಅರೆಸ್ಟ್​; 8 ತಿಂಗಳ ಮಗುವನ್ನು ಗೋಡೆಗೆ ಎಸೆದು ಹತ್ಯೆ
ಸಾಂಕೇತಿಕ ಚಿತ್ರ
Updated By: Lakshmi Hegde

Updated on: Apr 30, 2022 | 8:27 AM

ಮೈಸೂರು: ಅಮ್ಮ ಸ್ಕೂಟರ್​ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಸಿಟ್ಟಾಗಿ, ಇಲ್ಲೊಬ್ಬ ವ್ಯಕ್ತಿ ತನ್ನ ತಂಗಿಯ 8 ತಿಂಗಳ ಮಗುವನ್ನೇ ಕೊಂದಿದ್ದಾನೆ. ಕನಕಗಿರಿಯಲ್ಲಿ ಘಟನೆ ನಡೆದಿದ್ದು, ಆರೋಪಿಯ ಹೆಸರು ರಾಜು(33). ಈತ ತರಕಾರಿ ವ್ಯಾಪಾರ ಮಾಡಿಕೊಂಡಿದ್ದ. ಹಣಕ್ಕಾಗಿ ತನ್ನ ತಾಯಿಯ ಬಳಿ ಸದಾ ಜಗಳವಾಡುತ್ತಿದ್ದ. ಸ್ಕೂಟರ್​ ಬೇಕು ಎಂದು ಬಹುದಿನಗಳಿಂದಲೂ ದಂಬಾಲು ಬಿದ್ದಿದ್ದ. ಆದರೆ ಸ್ಕೂಟರ್​ ತಂದುಕೊಟ್ಟಿರಲಿಲ್ಲ ಎಂಬ ಕಾರಣಕ್ಕೆ ಸದಾ ಜಗಳವಾಡುತ್ತಿದ್ದ.

ರಾಜುವಿನ ತಂಗಿ ರಮ್ಯಾ, ಬಾಣಂತನಕ್ಕಾಗಿ ಬಂದವಳು, ತವರು ಮನೆಯಲ್ಲೇ ಇದ್ದಳು. ತಾಯಿ ಮನೆಯಲ್ಲಿ ಇಲ್ಲದಾಗ, ಬಾಗಿಲ ಚಿಲಕ ಹಾಕಿಕೊಂಡು ತಂಗಿಯ ಬಳಿ ಜೋರಾಗಿ ಗಲಾಟೆ ಮಾಡಿದ್ದ. ಕೈಯಿಗೆ ಸಿಕ್ಕಿದ್ದನ್ನೆಲ್ಲ ತೆಗೆದು ಬಿಸಾಕಿದ್ದ. ಅಣ್ಣನ ರೌದ್ರಾವತಾರ ನೋಡಿದ ತಂಗಿ ಹೆದರಿ, ಅಲ್ಲಿಂದ ಎದುರುಮನೆಗೆ ಓಡಿಹೋಗಿದ್ದಳು. ಆದರೆ ಹಾಗೆ ಹೋಗುವಾಗ ಆಕೆ, ಮಗುವನ್ನು ಮನೆಯಲ್ಲೇ ಬಿಟ್ಟು ಹೊರಟುಹೋಗಿದ್ದಳು. ತಂಗಿ ಅತ್ತ ಹೋಗುತ್ತಿದ್ದಂತೆ ಇತ್ತ ರಾಜು ಆ ಮಗುವನ್ನೇ ಎತ್ತಿ ಗೋಡೆಗೆ ಬಿಸಾಕಿದ್ದಾನೆ. ಪುಟ್ಟ ಮಗುವಿನ ತಲೆಗೆ ತುಂಬ ಏಟಾಗಿ ಅದು ಕೊನೆಯುಸಿರೆಳೆದಿದೆ. ಇಷ್ಟು ಮಾಡಿಯಾದ ಮೇಲೆ ರಾಜು ಓಡಿಹೋಗಿದ್ದ. ಸದ್ಯ ಆತನನ್ನು ವಿದ್ಯಾರಣ್ಯಪುರಂ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ‘ಅಜಯ್​ ದೇವಗನ್​ ಹೇಳಿದ್ರಲ್ಲಿ ತಪ್ಪಿಲ್ಲ, ಆದ್ರೆ ಸಂಸ್ಕೃತ ರಾಷ್ಟ್ರ ಭಾಷೆ ಆಗಲಿ’: ಕಂಗನಾ ಹೊಸ ಟ್ವಿಸ್ಟ್​