AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಂದ್ರ ಸರ್ಕಾರ ನೀಡಿದ 1,323 ಕೋಟಿ 96 ಲಕ್ಷ ರೂ. ಹಣವನ್ನು ಕಾಂಗ್ರೆಸ್​​​ ಸರ್ಕಾರ ದುರ್ಬಳಕೆ ಮಾಡಿದೆ: ಬಿ.ವೈ. ವಿಜಯೇಂದ್ರ ಆರೋಪ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕೇಂದ್ರ ಸರ್ಕಾರ ನೀಡಿದ ವಿಶೇಷ ಅನುದಾನವನ್ನು ರಾಜ್ಯ ಸರ್ಕಾರ ಬೇರೆ ಇಲಾಖೆಗಳಿಗೆ ವರ್ಗಾಯಿಸಿ ಸುಮಾರು 1,323 ಕೋಟಿ ರೂ. ಹಣ ದುರ್ಬಳಕೆ ಮಾಡಿದೆ ಎಂದು ಹೇಳಿದ್ದಾರೆ. ವಾಲ್ಮೀಕಿ ನಿಗಮ ಮತ್ತು ಗೃಹಲಕ್ಷ್ಮಿ ಯೋಜನೆಗಳಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಬಗ್ಗೆಯೂ ಅವರು ದಾಖಲೆ ಸಹಿತ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸರ್ಕಾರ ನೀಡಿದ 1,323 ಕೋಟಿ 96 ಲಕ್ಷ ರೂ. ಹಣವನ್ನು ಕಾಂಗ್ರೆಸ್​​​ ಸರ್ಕಾರ ದುರ್ಬಳಕೆ ಮಾಡಿದೆ: ಬಿ.ವೈ. ವಿಜಯೇಂದ್ರ ಆರೋಪ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಸಿಎಂ ಸಿದ್ದರಾಮಯ್ಯImage Credit source: Tv9 kannada
ಅಕ್ಷಯ್​ ಪಲ್ಲಮಜಲು​​
|

Updated on:Feb 14, 2026 | 1:25 PM

Share

ಬೆಂಗಳೂರು, ಫೆ.14: ಕೇಂದ್ರ ಸರ್ಕಾರ ನೀಡಿದ ವಿಶೇಷ ಅನುದಾನವನ್ನು ರಾಜ್ಯ ಸರ್ಕಾರ ಬೇರೆ ಇಲಾಖೆಗಳಿಗೆ ವರ್ಗಾಯಿಸುವ ಮೂಲಕ ಹಣ ದುರ್ಬಳಕೆ ಮಾಡಿಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ( BY Vijayendra) ಗಂಭೀರವಾಗಿ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮ ಮತ್ತು ಗೃಹಲಕ್ಷ್ಮಿ ಯೋಜನೆಯ ಹಣದ ವಿಚಾರದಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ದಾಖಲೆ ಸಹಿತ ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರ ವಿಶೇಷ ಅನುದಾನವನ್ನು ಯಾವ ಉದ್ದೇಶಕ್ಕೆ ನೀಡಿರುತ್ತದೆಯೋ ಅದಕ್ಕಷ್ಟೇ ಬಳಸಬೇಕು. ಅದನ್ನು ಬೇರೆ ಇಲಾಖೆಗಳಿಗೆ ವರ್ಗಾಯಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಆದರೆ ಸುಮಾರು 1,323 ಕೋಟಿ 96 ಲಕ್ಷ ರೂಪಾಯಿ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಹಣ ಸದ್ಬಳಕೆ ಮಾಡದಿದ್ದರೂ ‘ಯುಟಿಲೈಜೇಶನ್ ಸರ್ಟಿಫಿಕೇಟ್’ (ಬಳಕೆ ಪ್ರಮಾಣ ಪತ್ರ) ಕಳುಹಿಸಿ ವಂಚಿಸಲಾಗಿದೆ,” ಎಂದು ವಿಜಯೇಂದ್ರ ಆರೋಪಿಸಿದ್ದಾರೆ.

ಕೃಷ್ಣಭಾಗ್ಯ ಜಲನಿಗಮ ಕೂಡ ನಕಲಿ ಪ್ರಮಾಣ ಪತ್ರ ನೀಡುವ ಮೂಲಕ ಹಗರಣದಲ್ಲಿ ಭಾಗಿಯಾಗಿದೆ. ಈ ಬಗ್ಗೆ ಸರ್ಕಾರ ಕೂಡಲೇ ಪತ್ರಗಳನ್ನು ಬಹಿರಂಗಪಡಿಸಬೇಕು, ವಾಲ್ಮೀಕಿ ನಿಗಮದ ಹಣ ನೂರಾರು ಕೋಟಿ ರೂಪಾಯಿ ತೆಲಂಗಾಣಕ್ಕೆ ವರ್ಗಾವಣೆಯಾಗಿದೆ. ಆರ್ಥಿಕ ಸಚಿವರೂ ಆಗಿರುವ ಮುಖ್ಯಮಂತ್ರಿಗಳ ಅನುಮತಿ ಇಲ್ಲದೆ ಇಷ್ಟೊಂದು ದೊಡ್ಡ ಮೊತ್ತದ ಹಣ ವರ್ಗಾವಣೆ ಆಗಲು ಸಾಧ್ಯವೇ ಇಲ್ಲ. ಸಿಎಂ ಇದನ್ನು ಬೆಳಗಾವಿ ಅಧಿವೇಶನದಿಂದಲೂ ಸ್ಪಷ್ಟಪಡಿಸದೆ ತಪ್ಪಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರಕ್ಕೆ ಸಾವಿರ ದಿನದ ಸಡಗರ: ಕುರ್ಚಿ ಕದನ ಮತ್ತಷ್ಟು ಜೋರಾಗುವ ಸುಳಿವು

ಗೃಹಲಕ್ಷ್ಮಿ ಯೋಜನೆಗೆ ಮೀಸಲಿಟ್ಟಿದ್ದ ಸುಮಾರು 5,000 ಕೋಟಿ ರೂಪಾಯಿ ಹಣ ವರ್ಗಾವಣೆಯಾಗಿದೆ. ಇದು ಯಾವ ಇಲಾಖೆಗೆ ಹೋಗಿದೆ? ಇಲ್ಲಿ ಭ್ರಷ್ಟಾಚಾರ ನಡೆದಿದೆಯೇ? ಇದಕ್ಕೆ ಸಿಎಂ ಉತ್ತರ ನೀಡಲೇಬೇಕು ವಿಜಯೇಂದ್ರ ಆಗ್ರಹಿಸಿದ್ದಾರೆ.

ವರದಿ: ಅನಿಲ್​​​​​​ ಮೆಟ್ರೋ 

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:25 pm, Sat, 14 February 26

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ರಾತ್ರಿಯಿಡೀ ಮಳೆ ಅಬ್ಬರ: ಮಲ್ಲೇಶ್ವರಂನಲ್ಲಿ ಮರಬಿದ್ದು 2 ಕಾರುಗಳು ಜಖಂ
ರಾತ್ರಿಯಿಡೀ ಮಳೆ ಅಬ್ಬರ: ಮಲ್ಲೇಶ್ವರಂನಲ್ಲಿ ಮರಬಿದ್ದು 2 ಕಾರುಗಳು ಜಖಂ
ಇಂದು ಸಂಕಷ್ಟ ಚತುರ್ಥಿ; ಗಜಗೌರಿ ವ್ರತ ಮಾಡುವವರಿಗೆ ಮಹತ್ವದ ದಿನ
ಇಂದು ಸಂಕಷ್ಟ ಚತುರ್ಥಿ; ಗಜಗೌರಿ ವ್ರತ ಮಾಡುವವರಿಗೆ ಮಹತ್ವದ ದಿನ
ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು
ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ, ಸೇನಾ ಪರೇಡ್
ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ, ಸೇನಾ ಪರೇಡ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ
ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ
ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆ, ಮೂಳೆ ಬಳಕೆ
ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆ, ಮೂಳೆ ಬಳಕೆ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್​​ನಲ್ಲಿ ಗಾಂಜಾ ಘಮಲು!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್​​ನಲ್ಲಿ ಗಾಂಜಾ ಘಮಲು!