AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Theatre : ಅಂಕಪರದೆ; ‘ನವೋದಯ’ ತಂಡದಿಂದ ಮೇ5ರಂದು ‘ಅಯೋಧ್ಯಾ ಕಾಂಡ’ ಪ್ರದರ್ಶನ

Ayodhya Kaanda : ‘ಹೆಚ್ಚೂ ಕಡಿಮೆ ಎರಡು ದಶಕಗಳ ನಂತರ ನಾನು ಮತ್ತೆ ರಂಗಭೂಮಿಗೆ ಹಿಂದಿರುಗಿದ್ದೇನೆ. ಕೆಲವು ಯುವಗೆಳೆಯರ ಜೊತೆ ಸೇರಿಕೊಂಡು ಒಂದು ವೃತ್ತಿಪರ ರಂಗತಂಡವನ್ನು ಮೈಸೂರಿನಲ್ಲಿ ಆರಂಭಿಸಿದ್ದೇನೆ.’ ಪ್ರಸನ್ನ ಹೆಗ್ಗೋಡು

Theatre : ಅಂಕಪರದೆ; ‘ನವೋದಯ’ ತಂಡದಿಂದ ಮೇ5ರಂದು ‘ಅಯೋಧ್ಯಾ ಕಾಂಡ’ ಪ್ರದರ್ಶನ
ನಾಟಕಕಾರ ಪ್ರಸನ್ನ
ಶ್ರೀದೇವಿ ಕಳಸದ
|

Updated on: Apr 29, 2022 | 3:00 PM

Share

ಅಂಕಪರದೆ | Ankaparade : ರಾಮಾಯಣವನ್ನು ಆಧರಿಸಿದ ‘ಅಯೋಧ್ಯಾ ಕಾಂಡ’ ಎಂಬ ನಾಟಕದ ಮೊದಲ ಪ್ರದರ್ಶನವು ಮೇ 5ರಿಂದ ಮೂಡಿ ಬರಲಿದೆ. ತಂಡಕ್ಕೆ ‘ನವೋದಯ’ ಎಂದು ಹೆಸರಿಟ್ಟತಿದ್ದೇವೆ. ವಚನ ಚಳವಳಿ ಹಾಗೂ ದಾಸಚಳವಳಿಗಳ ನಂತರದಲ್ಲಿ ಕನ್ನಡಭಾಷೆ ಸಮಾಜ ಹಾಗೂ ಸಂಸ್ಕೃತಿಗಳನ್ನು ಸಮೃದ್ಧಗೊಳಿಸಿದ ಮಹತ್ವದ ಚಳವಳಿ ನವೋದಯ. ಪೂರ್ವಸೂರಿಗಳಾದ ಕುವೆಂಪು ಬೇಂದ್ರೆ ಕಾರಂತ ಮಾಸ್ತಿ ಮಧುರಚೆನ್ನ, ಹೀಗೆ ಹಲವು ಹಿರಿಯರು ಆ ಕಾಲದಲ್ಲಿ ಸಮನ್ವಯ ಸಿದ್ಧಾಂತದ ಮೂಲಕ ಚಳವಳಿ ಕಟ್ಟಿದರು. ಆಧುನಿಕತೆಯ ಒಳ್ಳೆಯ ಗುಣಗಳನ್ನು ಸ್ವೀಕರಿಸಿದರು, ದುರ್ಗುಣಗಳನ್ನು ನಯವಾಗಿ ತಿರಸ್ಕರಿಸಿದರು. ಪರಂಪರೆಯ ಒಳ್ಳೆಯ ಗುಣಗಳನ್ನು ಸ್ವೀಕರಿಸಿದರು, ದುರ್ಗುಣಗಳನ್ನು ನಯವಾಗಿ ತಿರಸ್ಕರಿಸಿದರು. ಜಾತಿವ್ಯವಸ್ಥೆ ಇರಬಹುದು, ವರ್ಗವ್ಯವಸ್ಥೆ ಇರಬಹುದು, ಇಂಗ್ಲೀಷ್‌ ಹೇರಿಕೆ ಇರಬಹುದು ಅಥವಾ ಯಂತ್ರನಾಗರೀಕತೆ ಇರಬಹುದು ಇವುಗಳನ್ನು ನಯವಾಗಿ ತಿರಸ್ಕರಿಸುತ್ತಲೇ, ಅಸಾಧಾರಣ ಸಾಹಿತ್ಯಸೃಷ್ಟಿ ಮಾಡಿದ ಚಳಿವಳಿ ನವೋದಯ. ನವೋದಯವನ್ನು ಈ ಬಾರಿ ರಂಗಭೂಮಿಯ ಮೂಲಕ ಸಾಧಿಸಬೇಕು ಎಂಬುದು ನಮ್ಮ ಆಶಯವಾಗಿದೆ. ಪ್ರಸನ್ನ, ನಾಟಕಕಾರ, ಚಳವಳಿಕಾರ (Prasanna Heggodu)

ಕನ್ನಡ ಸಂಸ್ಕೃತಿ ಒಡೆದು ಚೂರಾಗುವ ಅಪಾಯ ಎದುರಿಸುತ್ತಿದೆ. ಆಧುನಿಕತೆ ಅತಿರೇಕಕ್ಕೆ ತಿರುಗಿದೆ. ಒಂದು ಅತಿರೇಕವನ್ನು ಮತ್ತೊಂದು ಅತಿರೇಕದ ಮೂಲಕ ಸರಿಪಡಿಸುತ್ತೇವೆ ಎಂದು ಹೊರಟಿರುವ ಜನರು ಪರಂಪರೆಯನ್ನು ವಿಪರೀತಕ್ಕೆ ಕೊಂಡೊಯ್ದಿದ್ದಾರೆ. ಕೇವಲ ಸಂಕೇತಗಳ ಆರಾಧನೆ ಮಾಡುತ್ತ ಮಂದಿರ ಮಸೀದಿ ಚರ್ಚುಗಳನ್ನ ದೇವರ ಮರೆತಿದ್ದಾರೆ ಬರಿದೆ ಜಗಳಗಂಟರಾಗಿದ್ದಾರೆ. ನಾವು ಹತಾಶರಾಗಿ ಕುಳಿತಿದ್ದೇವೆ. ರಂಗಭೂಮಿ ಸಮೂಹಸೃಷ್ಟಿ. ಒಟ್ಟಾಗಿ ಕೆಲಸಮಾಡದೆ ಹೋದರೆ ರಂಗಭೂಮಿ ಸಾಧ್ಯವಾಗುವುದಿಲ್ಲ. ಒಗ್ಗಟ್ಟು ಇಲ್ಲಿನ ಮೂಲಅಗತ್ಯ. ಜೊತೆಗೆ ಮೂಲತಃ ಕುಶಲಕರ್ಮಿಗಳು ನಾವು ಕೈ-ಉತ್ಪಾದಕರು. ವಚನಕಾರರ ಹಾಗೆಯೇ ಅನುಭಾವವೆಂದರೆ ಶ್ರಮವೂ ಹೌದು, ಕಲೆಯೂ ಹೌದು ನಮಗೆ. ಒಬ್ಬ ನಟ ರಂಗದ ಮೇಲೆ ನಿಂತಾಗ ಇಡೀ ಪ್ರೇಕ್ಷಕರಿಗಾಗಿ ನಾಟಕ ಮಾಡಬೇಕೇ ಹೊರತು ಆ ಪ್ರೇಕ್ಷಕಗಣವನ್ನು ಒಡೆಯಬಾರದು, ಅತಿರೇಕ ಮಾಡಬಾರದು, ಎಂದು ನಂಬುತ್ತದೆ ರಂಗಭೂಮಿ.

ಇದನ್ನ ಓದಿ : Yakshagana: ಅಂಕಪರದೆ; ಅತಿಕಾಯನೆದುರು ಇರುವವನು ರಾಮನೋ ಲಕ್ಷ್ಮಣನೋ? ಕ್ಲೈಮ್ಯಾಕ್ಸ್​ಗಾಗಿ ತುಮಕೂರಿಗೆ ಬನ್ನಿ 

ನಮ್ಮ ಪ್ರದರ್ಶನಕ್ಕಾಗಿ ನಾವು ಆಯ್ಕೆ ಮಾಡಿಕೊಂಡಿರುವುದು ರಾಮಾಯಣದ ಪ್ರಸಂಗವನ್ನು. ರಾಷ್ಟ್ರಕವಿ ಕುವೆಂಪು ಹೇಳುವಂತೆ ‘ರಾಮ ದೊಡ್ಡವನು, ಆದರೆ ರಾಮಾಯಣ ರಾಮನಿಗಿಂತ ದೊಡ್ಡದು’ ರಾಮಾಯಣ ಹಾಗೂ ರಾಮರಾಜ್ಯಗಳ ಪರಿಕಲ್ಪನೆಯನ್ನು ಕಡೆಗಣಿಸಿರುವ ನಾವು ರಾಮ, ಏಸು, ಪೈಗಂಬರರು ಎಲ್ಲರ ದುರ್ಬಳಕೆಮಾಡುತ್ತಿದ್ದೇವೆ. ರಾಮಾಯಣದಿಂದ ನಾವು ಆಯ್ದುಕೊಂಡಿರುವ ಪ್ರಸಂಗವು ಜಗಳ ಅಸಹನೆ ಅಧಿಕಾರ ವ್ಯಾಮೋಹ ಇತ್ಯಾದಿಗಳ ದುರಂತವನ್ನು ತುಂಬ ಮಾರ್ಮಿಕವಾಗಿ ಚಿತ್ರಿಸುತ್ತದೆ. ರಾಮ ಸೀತೆ ಲಕ್ಷ್ಮಣರು ಅಸಹನೆಗೆ ತದ್ವಿರುದ್ಧವಾದ ನಿಲುವು ತಾಳುತ್ತಾರೆ. ಆಶ್ರಮಗಳಿರುವ ಹಾಗೂ ಶ್ರಮಜೀವಿಗಳು ಬದುಕಿರುವ ಹಳ್ಳಿಗಾಡಿಗೆ ನಡೆದು ನಾವೂ ನಡೆಯಬೇಕಿರುವ ಹಾದಿಯ ಸೂಚನೆ ನೀಡುತ್ತಾರೆ.

ಗಮನಿಸಿ : ‘ಅಂಕಪರದೆ’ಯ ಮೂಲಕ ಕಲಾಸಕ್ತರನ್ನು ನೀವು ತಲುಪಲು ಬಯಸಿದಲ್ಲಿ ಪ್ರದರ್ಶನಕ್ಕೆ ಒಂದು ವಾರವಿರುವಾಗ ನಮಗೆ ತಿಳಿಸಿ. ಹಾಗೆಯೇ ಕಲಾಸಕ್ತರು, ಕಲಾತಜ್ಞರು, ಪ್ರದರ್ಶನ ಕಲೆಗಳಿಗೆ ಸಂಬಂಧಿಸಿದ ಯಾವುದೇ ವಿಷಯ, ವಿಚಾರ, ಒಳನೋಟಗಳನ್ನು ಹಂಚಿಕೊಳ್ಳಲು ನಮ್ಮನ್ನು ಸಂಪರ್ಕಿಸಿ :tv9kannadadigital@gmail.com

ಇದನ್ನೂ ಓದಿ : World Theatre Day: ಅಂಕಪರದೆ; ‘ಮಧುರ ಮಂಡೋದರಿ’ ನೋಡಲು ಶಿರಸಿಗೆ ಬನ್ನಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ