Video: ಕರಾಚಿ ಏರ್ಪೋರ್ಟ್ನಲ್ಲಿ ತೊಳ್ಕೊಳೋಕೂ ನೀರಿಲ್ವಂತೆ, ಪಾಕ್ ನಟಿ ಹೇಳಿದ್ದೇನು ನೋಡಿ
ಕರಾಚಿ ಏರ್ಪೋರ್ಟ್ನಲ್ಲೂ ನೀರಿನ ಅಭಾವ ಕಾಡುತ್ತಿದೆ. ಏರ್ಪೋರ್ಟ್ನ ಶೌಚಾಲಯದಲ್ಲಿ ಕೂಡ ನೀರಿಲ್ಲ ಎಂದು ಪಾಕಿಸ್ತಾನಿ ನಟಿಯೊಬ್ಬರು ಮಾಹಿತಿ ನೀಡಿದ್ದಾರೆ. ವಿಡಿಯೋ ಮಾಡಿರುವ ಅವರು, ಕರಾಚಿ ಏರ್ಪೋರ್ಟ್ನ ಶೌಚಾಲಯದಲ್ಲಿರುವ ನಲ್ಲಿಗಳೆಲ್ಲಾ ಒಣಗಿದೆ.ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಅನೇಕರು ವ್ಯಂಗ್ಯವಾಡಿದ್ದಾರೆ. ಈ ವಿಡಿಯೋವನ್ನು ವಿವಿಧ ಬಳಕೆದಾರರು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಮರುಹಂಚಿಕೊಂಡಿದ್ದಾರೆ.
ಇಸ್ಲಾಮಾಬಾದ್, ಮೇ 29: ಕರಾಚಿ ಏರ್ಪೋರ್ಟ್ನಲ್ಲೂ ನೀರಿನ ಅಭಾವ ಕಾಡುತ್ತಿದೆ. ಏರ್ಪೋರ್ಟ್ನ ಶೌಚಾಲಯದಲ್ಲಿ ಕೂಡ ಒಂದು ನೀರಿಲ್ಲ ಎಂದು ಪಾಕಿಸ್ತಾನಿ ನಟಿಯೊಬ್ಬರು ಹೇಳಿದ್ದಾರೆ. ವಿಡಿಯೋ ಮಾಡಿರುವ ಅವರು, ಕರಾಚಿ ಏರ್ಪೋರ್ಟ್ನ ಶೌಚಾಲಯದಲ್ಲಿರುವ ನಲ್ಲಿಗಳೆಲ್ಲಾ ಒಣಗಿದೆ ಎಂದಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಅನೇಕರು ವ್ಯಂಗ್ಯವಾಡಿದ್ದಾರೆ. ಈ ವಿಡಿಯೋವನ್ನು ವಿವಿಧ ಬಳಕೆದಾರರು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಮರುಹಂಚಿಕೊಂಡಿದ್ದಾರೆ.
ನಟಿ ಹೀನಾ ಬಾಯತ್ ವಿಡಿಯೋದಲ್ಲಿ‘‘ ನಾನು ಕರಾಚಿ ಇಂಟರ್ನ್ಯಾಷನಲ್ ಏರ್ಪೋರ್ಟ್ನಲ್ಲಿದ್ದೇನೆ, ಇಂದು ನಾವು ಪಾಕಿಸ್ತಾನದ ಸಾಧನೆಗಳನ್ನು ಸೆಲೆಬ್ರೇಟ್ ಮಾಡಲೇಬೇಕಿದೆ. ಇಲ್ಲಿರುವ ಯಾವುದೇ ಶೌಚಾಲಯದಲ್ಲೂ ನೀರಿಲ್ಲ.ಜನರು ನಮಾಜ್ ಮಾಡಲು, ಮಕ್ಕಳನ್ನು ಕರೆದುಕೊಂಡು ವಾಶ್ರೂಮ್ಗೆ ಹೋಗುತ್ತಿದ್ದಾರೆ ಆದರೆ ಇಲ್ಲಿ ಒಂದು ಹನಿಯೂ ನೀರಿಲ್ಲ’’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಅಂತಾರಾಷ್ಟ್ರೀಯ ಏರ್ಪೋರ್ಟ್ನಲ್ಲೇ ಈ ಸ್ಥಿತಿಯಾದರೆ ಪಾಕ್ನ ಸ್ಥಿತಿ ಹೇಗಿರಬಹುದೆಂದು ನೀವೇ ಊಹಿಸಬಹುದು.
ಪಹಲ್ಗಾಮ್ನಲ್ಲಿ ಉಗ್ರರು ದಾಳಿ ನಡೆಸಿ 26 ಅಮಾಯಕರನ್ನು ಹತ್ಯೆಗೈದಿದ್ದರು, ಪ್ರತೀಕಾರವಾಗಿ ಭಾರತವು ಆಪರೇಷನ್ ಸಿಂಧೂರ್ ನಡೆಸಿ ಪಾಕ್ನಲ್ಲಿ ಉಗ್ರ ನೆಲೆಗಳನ್ನು ನಾಶಪಡಿಸಿತ್ತು. ಬಳಿಕ ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸಿದ್ದ ಕಾರಣ ಪಾಕ್ಗೆ ಹೋಗುವ ನೀರನ್ನೂ ತಡೆ ಹಿಡಿಯಲಾಗಿತ್ತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

