ನಿಖಾಗೆ ಮೊದಲು ಪರೀಕ್ಷಾ ಕೇಂದ್ರಕ್ಕೆ ಬಂದು ಅಂತಿಮ ಬಿಬಿಎ ಪರೀಕ್ಷೆ ಬರೆದ ಅರಸೀಕೆರೆಯ ಅಲ್ಫಿಯ ಬಾನು
ಅಲ್ಫಿಯ ಬಾನು ವ್ಯಾಸಂಗ ಮಾಡುತ್ತಿರುವ ಕಾಲೇಜಿನ ಪ್ರಿನ್ಸಿಪಾಲ್ ಹೇಳುವ ಪ್ರಕಾರ ತಮ್ಮ ವಿದ್ಯಾರ್ಥಿನಿ ಸ್ಥಳೀಯ ನಗರಸಭೆಯ ಮಾಜಿ ಸದಸ್ಯ ಯೂನುಸ್ ಸಾಬ್ ಮತ್ತು ರೇಷ್ಮಾ ಬಾನು ಅವರ ಮಗಳಾಗಿದ್ದು ಪೋಷಕರು ನೀಡಿರುವ ಬೆಂಬಲ ಪ್ರಶಂಸನೀಯವಾಗಿದೆ. ಅಲ್ಫಿಯ ಬಾನುಳನ್ನು ಮದುವೆಯಾಗಲಿರುವ ಯುವಕ ಮತ್ತು ಆತನ ತಂದೆ ತಾಯಿ ಸಹ ಅಭಿನಂದನೆಗೆ ಅರ್ಹರು. ಮುಸ್ಲಿಂ ಕುಟುಂಬಗಳಲ್ಲಿ ಇಂಥ ಸನ್ನಿವೇಶಗಳು ಅಪರೂಪ.
ಹಾಸನ, ಮೇ 29: ನಿಮಗೆ ನೆನಪಿರಬಹುದು, ಕೆಲ ದಿನಗಳ ಹಿಂದಷ್ಟೇ ನಾವು ಹಾಸನದ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿನಿ ಕವನ (Kavana) ತನ್ನ ಮದುವೆಯಾದ ಕೂಡಲೇ ವಧುವಿನ ಉಡುಗೆಯಲ್ಲೇ ಬಂದು ಪರೀಕ್ಷೆ ಬರೆದಿದ್ದನ್ನು ವರದಿ ಮಾಡಿದ್ದೆವು. ಇವತ್ತು ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ಬಿಬಿಎ ಅಂತಿಮ ವರ್ಷದ ವಿದ್ಯಾರ್ಥಿನಿ ಅಲ್ಫಿಯ ಬಾನು ನಿಖಾಗೆ ಮೊದಲು ತನ್ನ ಕಾಲೇಜಿಗೆ ಬಂದು ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ಬರೆದ ನಂತರವೇ ಅವರು ಮನೆಗೆ ತೆರಳಿ ಮದುವೆಯ ವಿಧಿವಿಧಾನಗಳನ್ನು ಪೂರೈಸಿದ್ದಾರೆ. ಶಿಕ್ಷಣದೆಡೆ ಅಲ್ಫಿಯ ಬಾನುಗೆ ಇರುವ ಬದ್ಧತೆ ಕಂಡು ಕಾಲೇಜಿನ ಪ್ರಿನ್ಸಿಪಾಲ್ ಸಂತಸ ವ್ಯಕ್ತಪಡಿಸಿ ಆಕೆಯ ಭವಿಷ್ಯ ಮತ್ತು ವೈವಾಹಿಕ ಬದುಕಿಗೆ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದ ವಿದ್ಯಾರ್ಥಿ ಮರು ಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಪ್ರಥಮ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

