AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದ ವಿದ್ಯಾರ್ಥಿ ಮರು ಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಪ್ರಥಮ

ಎಸ್​ಎಸ್​​ಎಲ್​​ಸಿ ಪರೀಕ್ಷೆ ಮರು ಮೌಲ್ಯಮಾಪನದಲ್ಲಿ ಮಡಿಕೇರಿಯ ತನ್ಮಯಿ ಎಂ.ಎನ್​​ ಎಂಬ ವಿದ್ಯಾರ್ಥಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೊದಲು 622 ಅಂಕ ಪಡೆದಿದ್ದ ತನ್ಮಯಿ, ಮರುಮೌಲ್ಯಮಾಪನದ ನಂತರ 625ಕ್ಕೆ 625 ಅಂಕ ಗಳಿಸಿದ್ದಾರೆ. ಆ ಮೂಲಕ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದ ವಿದ್ಯಾರ್ಥಿ ಮರು ಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಪ್ರಥಮ
ತನ್ಮಯಿ ಎಂ. ಎನ್.
ಗಂಗಾಧರ​ ಬ. ಸಾಬೋಜಿ
|

Updated on:May 24, 2025 | 10:41 AM

Share

ಕೊಡಗು, ಮೇ 24: ಇತ್ತೀಚೆಗೆ ಎಸ್​ಎಸ್​ಎಲ್​​ಸಿ (SSLC) ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಶೇ.62.34ರಷ್ಟು ವಿದ್ಯಾರ್ಥಿಗಳು ಪಾಸ್​ ಆಗಿದ್ದರು. ಈ ಬಾರಿ 24 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದು ಕಮಾಲ್​ ಮಾಡಿದ್ದಾರೆ. ಇದೇ ಎಸ್​ಎಸ್​ಎಲ್​​ಸಿ ಪರೀಕ್ಷೆ ಫಲಿತಾಂಶದಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದ ವಿದ್ಯಾರ್ಥಿ ಮರು ಮೌಲ್ಯಮಾಪನ ಬಳಿಕ ಕರ್ನಾಟಕಕ್ಕೆ ಪ್ರಥಮ ಸ್ಥಾನ ಬಂದಿದ್ದಾರೆ. ಮಡಿಕೇರಿಯ (Madikeri) ತನ್ಮಯಿ ಎಂ. ಎನ್. ರಾಜ್ಯಕ್ಕೆ ಪ್ರಥಮ ಬಂದ ವಿದ್ಯಾರ್ಥಿ.

ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿರುವ ತನ್ಮಯಿ, ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಎಂ. ಎ. ನಿರಂಜನ್ ಮತ್ತು ಸೌಮ್ಯ ದಂಪತಿ ಪುತ್ರ. ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಕೀರ್ತಿಗೆ ಪಾತ್ರನಾಗಿದ್ದಾನೆ.

ಇದನ್ನೂ ಓದಿ: Karnataka SSLC Result 2025: SSLC ಮರು ಮೌಲ್ಯಮಾಪನ, ಕರ್ನಾಟಕಕ್ಕೆ ಮತ್ತಿಬ್ಬರು ಟಾಪರ್, ಕೈ ಹಿಡಿದ ಕಾನ್ಫಿಡೆಂಟ್

ಕರ್ನಾಟಕ ಶಿಕ್ಷಣ ಪರೀಕ್ಷಾ ಮಂಡಳಿ ಈ ಮುಂಚೆ ಪ್ರಕಟಿಸಿದ್ದ ಫಲಿತಾಂಶದಲ್ಲಿ ವಿದ್ಯಾರ್ಥಿ ತನ್ಮಯಿಗೆ 625ಕ್ಕೆ 622 ಅಂಕ ಪಡೆದುಕೊಂಡಿದ್ದ. ಆದರೆ ತನ್ನ ಅಚಲ ನಂಬಿಕೆಯಿಂದ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದ ತನ್ಮಯಿ, ಬಳಿಕ 625ಕ್ಕೆ 625 ಅಂಕ ಗಳಿಸಿದ್ದಾನೆ. ಆ ಮೂಲಕ ಮೊದಲನೇ ಸ್ಥಾನ ಗಿಟ್ಟಿಸಿಕೊಂಡಿದ್ದಾನೆ.

ಬಾಲಕಿಯರೇ ಮೇಲುಗೈ 

ಈ ಬಾರಿ 8,42,173 ಮಕ್ಕಳ ಪೈಕಿ 5,24,984 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ.74ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದು, ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದಾರೆ. ಇನ್ನು, ಶೇ.91.12ರಷ್ಟು ಫಲಿತಾಂಶದ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನ ಪಡೆದಿದ್ದು, ಎರಡನೇ ಸ್ಥಾನದಲ್ಲಿ ಉಡುಪಿ, 3ನೇ ಸ್ಥಾನದಲ್ಲಿ ಉತ್ತರ ಕನ್ನಡ ಜಿಲ್ಲೆ ಇದೆ. ಶೇಕಡ 42ಪರ್ಸೆಂಟ್​ ಫಲಿತಾಂಶದ ಮೂಲಕ ಕಲಬುರಗಿ ಜಿಲ್ಲೆ ಕೊನೆಯ ಸ್ಥಾನ ಪಡೆದುಕೊಂಡಿದೆ.

ಇದನ್ನೂ ಓದಿ: ಹದಿನಾರರ ಪೋರ ಚಿರಂತ್ ಹೊನ್ನಾವರ ಸಾಧನೆಗೆ ಮೂಳೆ ಕ್ಯಾನ್ಸರ್ ಅಡ್ಡಿಯಾಗಲಿಲ್ಲ, ಹತ್ತನೇ ತರಗತಿಯಲ್ಲಿ 92% ಮಾರ್ಕ್ಸ್!

ಇನ್ನು ಮೇ 26ರಿಂದ ಜೂನ್ 2ರವರೆಗೆ ಎಸ್​ಎಸ್​ಎಲ್​​ಸಿ ಎರಡನೇ ಪರೀಕ್ಷೆ ನಡೆಯಲಿದೆ. ಒಂದು ವೇಳೆ ಅದರಲ್ಲೂ ಫೇಲ್​​ ಆದರೆ ಜೂನ್ 23ರಿಂದ 30ರಂದು ನಡೆಯುವ ಮೂರನೇ ಪರೀಕ್ಷೆ ನಡೆಯಲಿದೆ.

ಮತ್ತಷ್ಟು ಶಿಕ್ಷಣದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:16 am, Sat, 24 May 25