AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka SSLC Result 2025: SSLC ಮರು ಮೌಲ್ಯಮಾಪನ, ಕರ್ನಾಟಕಕ್ಕೆ ಮತ್ತಿಬ್ಬರು ಟಾಪರ್, ಕೈ ಹಿಡಿದ ಕಾನ್ಫಿಡೆಂಟ್

ಮೇ ಮೊದಲ ವಾರ ಕರ್ನಾಟಕ ಮಾಧ್ಯಮಿಕ ಶಿಕ್ಷಣ ಪರೀಕ್ಷಾ ಮಂಡಳಿ ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟಿಸಿತ್ತು. ಒಟ್ಟು 22 ಜನ ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದರು. ಇದೀಗ, ಮತ್ತಿಬ್ಬರು ವಿದ್ಯಾರ್ಥಿನಿಯರು ಮರು ಮೌಲ್ಯಮಾಪನದಲ್ಲಿ 625ಕ್ಕೆ 625 ಪಡೆಯುವ ಮೂಲಕ ಪ್ರಥಮ ಸ್ಥಾನಕ್ಕೆ ಏರಿದ್ದಾರೆ. ಅಲ್ಲದೇ, ಆರನೇ ಸ್ಥಾನ ಪಡೆದಿದ್ದ ವಿದ್ಯಾರ್ಥಿ ಮರು ಮೌಲ್ಯಮಾಪನದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

Karnataka SSLC Result 2025: SSLC ಮರು ಮೌಲ್ಯಮಾಪನ, ಕರ್ನಾಟಕಕ್ಕೆ ಮತ್ತಿಬ್ಬರು ಟಾಪರ್, ಕೈ ಹಿಡಿದ ಕಾನ್ಫಿಡೆಂಟ್
ವಿದ್ಯಾರ್ಥಿನಿ ಪೂರ್ವಿ ಎಸ್​
Vinay Kashappanavar
| Updated By: ವಿವೇಕ ಬಿರಾದಾರ|

Updated on:May 23, 2025 | 6:18 PM

Share

ಬೆಂಗಳೂರು, ಮೇ 23: ಕರ್ನಾಟಕ ಮಾಧ್ಯಮಿಕ ಶಿಕ್ಷಣ ಪರೀಕ್ಷಾ ಮಂಡಳಿ (KSEEB) ಬುಧವಾರ (ಮೇ.02) ಕರ್ನಾಟಕ ಎಸ್​ಎಸ್​ಎಲ್​ಸಿ ಫಲಿತಾಂಶ 2025 (Karnataka SSLC Result 2025) ವನ್ನು ಪ್ರಕಟಿಸಿತ್ತು. ಒಟ್ಟು 22 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸುವ ಮೂಲಕ ಪ್ರಥಮ ಸ್ಥಾನ ಗಳಿಸಿದ್ದರು. ಈ ಪಟ್ಟಿಗೆ ಮತ್ತಿಬ್ಬರು ವಿದ್ಯಾರ್ಥಿನಿಯರು ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಅರವಿಂದ್ ಶಾಲೆಯ ವಿದ್ಯಾರ್ಥಿನಿ ರಚನಾ ನಾಯ್ಕ್ ಮರು ಮೌಲ್ಯಮಾಪನದಲ್ಲಿ 625 ಕ್ಕೆ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಹಿಂದೆ ರಚನಾ ನಾಯ್ಕ್​ ಅವರಿಗೆ 625ಕ್ಕೆ 621 ಅಂಕ ಬಂದಿತ್ತು. ಮರು ಮೌಲ್ಯಮಾಪನದಲ್ಲಿ ರಚನಾಗೆ 625 ಅಂಕ ಬಂದಿದೆ. ಈ ಹಿಂದೆ 22 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದರು. ಇದೀಗ 625 ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ 23ಕ್ಕೆ ಏರಿಕೆಯಾಗಿದೆ.

ಚಿಕ್ಕಬಳ್ಳಾಪುರ ವಿದ್ಯಾರ್ಥಿನಿ ಟಾಪರ್

ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಗ್ರಾಮದ ಬಿ.ಜಿ.ಎಸ್ ಗ್ರಾಮಾಂತರ ಆಂಗ್ಲ ಶಾಲೆಯ  ವಿದ್ಯಾರ್ಥಿನಿ ಪೂರ್ವಿ ಎಸ್ ಮರು ಮೌಲ್ಯಮಾಪನದಲ್ಲಿ 625 ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ. ವಿದ್ಯಾರ್ಥಿನಿ ಪೂರ್ವಿ ಎಸ್ ಅವರು ಈ ಹಿಂದೆ 624 ಅಂಕಗಳನ್ನು ಪಡೆದಿದ್ದರು. ಇದೀಗ, ಮರು ಮೌಲ್ಯಮಾಪನದಲ್ಲಿ 625 ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ.

ಮರು ಮೌಲ್ಯಮಾಪನದಲ್ಲಿ ವಿದ್ಯಾರ್ಥಿಗೆ 2ನೇ ಸ್ಥಾನ

ಬೆಂಗಳೂರಿನ ಬಾಗಲಗುಂಟೆ ಖಾಸಗಿ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿ ಅನಿರುದ್ಧ್ ಅವರು ಮರು ಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿ ಅನಿರುದ್ಧ್ ಅವರು ಈ ಹಿಂದೆ ಆರನೇ ಸ್ಥಾನ ಪಡೆದಿದ್ದರು. ಆರನೇ ಸ್ಥಾನ ಗಳಿಸಿದ್ದರಿಂದ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದಾರು. ಮರು ಮೌಲ್ಯಮಾಪನದ ನಂತರ ಎರಡನೇ ಸ್ಥಾನ ಪಡೆದಿದ್ದಾರೆ. ಅನಿರುದ್ಧ ಅವರು ಮೊದಲು 620 ಅಂಕ ಪಡೆದಿದ್ದರು. ಮರು ಮೌಲ್ಯಮಾಪನ ನಂತರ 624 ಅಂಕ ಪಡೆದಿದ್ದಾರೆ.

ಇದನ್ನೂ ಓದಿ
Image
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಯಂ ಶಿಕ್ಷಕರ ಕೊರತೆ
Image
SSLC Result: ಇಂದು SSLC ಪರೀಕ್ಷೆ ಫಲಿತಾಂಶ, ನೋಡುವುದು ಹೇಗೆ?
Image
ರೈಲ್ವೆ ಇಲಾಖೆ ಪರೀಕ್ಷೆಗೆ ಮಂಗಳಸೂತ್ರ, ಜನಿವಾರ ನಿರ್ಬಂಧ, ವಿವಾದಕ್ಕೆ ತೆರೆ 
Image
ಸೀಟ್ ಬ್ಲಾಕಿಂಗ್ ತಡೆಗೆ KEA ಹೊಸ ನಿಯಮ: 3 ವರ್ಷ ಬ್ಯಾನ್​

ಇದನ್ನೂ ಓದಿ: ನಾಳೆ ಕರ್ನಾಟಕ ಸಿಇಟಿ ಫಲಿತಾಂಶ; ರಿಸಲ್ಟ್ ಚೆಕ್‌ ಮಾಡುವ ವಿಧಾನ ಇಲ್ಲಿದೆ

625 ಅಂಕಗಳಿಗೆ 625 ಅಂಕ ಗಳಿಸಿರುವವರು:

ವಿಜಯಪುರ ಜಿಲ್ಲೆಯ ಅಖಿಲ್ ಅಹ್ಮದ್ ನದಾಫ್​​ ಮತ್ತು ಸಿ. ​​ಭಾವನಾ, ದೇವನಹಳ್ಳಿಯ ಎಸ್​.ಧನುಷ್​, ಮೈಸೂರು ಜಿಲ್ಲೆಯ ಜೆ.ಧೃತಿ, ಉತ್ಸವ್ ಪಾಟೀಲ್, ಮಂಡ್ಯ ಜಿಲ್ಲೆಯ ಎಸ್​.ಎನ್​.ಜಾಹ್ನವಿ, ಬೆಂಗಳೂರಿನ ಮಧುಸೂಧನ್ ರಾಜ್, ಮೊಹಮ್ಮದ್ ಮಸ್ತೂರ್, ನಂದನ್,​ ರಚನಾ ನಾಯ್ಕ್, ತುಮಕೂರು ಜಿಲ್ಲೆಯ ಮೌಲ್ಯ ಡಿ. ರಾಜ್​, ಎಂ.ಧನಲಕ್ಷ್ಮೀ, ಚಿತ್ರದುರ್ಗ ಜಿಲ್ಲೆಯ ಕೆ.ನಮನ, ಶಿವಮೊಗ್ಗ ಜಿಲ್ಲೆಯ ನಮಿತಾ, ಶಗುಫ್ತಾ ಅಂಜುಮ್​, ಚಿತ್ರದುರ್ಗ ಜಿಲ್ಲೆಯ ನಿತ್ಯ ಎಂ.ಕುಲಕರ್ಣಿ, ಶಿವಮೊಗ್ಗ ಜಿಲ್ಲೆಯ ರಂಜಿತಾ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೂಪಾ ಚೆನ್ನಗೌಡ ಪಾಟೀಲ್, ಬೆಳಗಾವಿ ಜಿಲ್ಲೆಯ ಸಹಿಷ್ಣು ಎನ್​, ಉತ್ತರ ಕನ್ನಡ ಜಿಲ್ಲೆಯ ಸ್ವಸ್ತಿ ಕಾಮತ್​, ಉಡುಪಿ ಜಿಲ್ಲೆಯ ಆರ್.ಎನ್​.ತಾನ್ಯಾ, ಹಾಸನ ಜಿಲ್ಲೆಯ ಯಶ್ವಿತಾ ರೆಡ್ಡಿ ಕೆ.ಬಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಪೂರ್ವಿ ಎಸ್ ಟಾಪರ್​ಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

7,90,890 ಮಕ್ಕಳ ಪೈಕಿ 5,23,075 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. SSLC ಪರೀಕ್ಷೆಯಲ್ಲಿ ಶೇಕಡಾ 58.07ರಷ್ಟು ಬಾಲಕರು ಪಾಸಾಗಿದ್ದಾರೆ. 3,90,311 ಬಾಲಕರ ಪೈಕಿ 2,26,637 ಬಾಲಕರು ಉತ್ತೀರ್ಣರಾಗಿದ್ದು, ಶೇಕಡಾ 74ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದಾರೆ. 4,00,579 ಬಾಲಕಿಯರ ಪೈಕಿ 2,96,438 ಬಾಲಕಿಯರು ಉತ್ತೀರ್ಣರಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:18 pm, Fri, 23 May 25