AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka SSLC Result 2025: ಇಂದು SSLC ಪರೀಕ್ಷೆ ಫಲಿತಾಂಶ, ನೋಡುವುದು ಹೇಗೆ? ಇಲ್ಲಿದೆ ವಿವರ

Karnataka KSEAB Class 10 Result 2025: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ನಡೆಸಿದ ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ. ವಿದ್ಯಾರ್ಥಿಗಳು karresults.nic.in ಅಥವಾ kseab.karnataka.gov.in ವೆಬ್‌ಸೈಟ್‌ಗಳಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದು. SMS ಮೂಲಕವೂ ಫಲಿತಾಂಶ ಪಡೆಯಬಹುದು. ಫಲಿತಾಂಶವನ್ನು ನೋಡುವುದು ಹೇಗೆ? ಇಲ್ಲಿದೆ ವಿವರ.

Karnataka SSLC Result 2025: ಇಂದು SSLC ಪರೀಕ್ಷೆ ಫಲಿತಾಂಶ, ನೋಡುವುದು ಹೇಗೆ? ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Vinay Kashappanavar
| Updated By: Digi Tech Desk|

Updated on:May 02, 2025 | 10:16 AM

Share

ಬೆಂಗಳೂರು, ಮೇ 01: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ನಡೆಸುವ ಎಸ್ಎಸ್​​ಎಲ್​ಸಿ ಪರೀಕ್ಷೆ-1 (SSLC Exam-1) ಮುಕ್ತಾಯಗೊಂಡಿದ್ದು, ವಿದ್ಯಾರ್ಥಿಗಳು ಫಲಿತಾಂಶಕ್ಕೆ ಕಾಯುತ್ತಿದ್ದಾರೆ. ಈಗಾಗಲೇ ಮೌಲ್ಯಮಾಪನ ಕೂಡ ಮುಕ್ತಾಯಗೊಂಡಿದೆ. ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಶುಕ್ರವಾರ (ಮೇ.02) ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಿಸಲಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಬೆಳಗ್ಗೆ 11.30ಕ್ಕೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಲಿದ್ದಾರೆ.

ಮಧ್ಯಾಹ್ನ 12.30ರ ನಂತರ ವೆಬ್‌ಸೈಟ್‌ನಲ್ಲಿ SSLC ಫಲಿತಾಂಶ ಲಭ್ಯವಾಗಲಿದೆ. http://karresults.nic.in ಜಾಲತಾಣದಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ. ಮಾರ್ಚ್‌, ಏಪ್ರಿಲ್ ತಿಂಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲಾಗಿದೆ. 8,96,447 ವಿದ್ಯಾರ್ಥಿಗಳು ಹಾಜರಾಗಿದ್ದರು. 15,881 ಶಾಲೆಗಳ ವಿದ್ಯಾರ್ಥಿಗಳು 2,818 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದಾರೆ.

ಫಲಿತಾಂಶವನ್ನು ಆನ್​ಲೈನ್​ನಲ್ಲಿ ನೋಡುವುದು ಹೇಗೆ? ವೈಬ್​ಸೈಟ್​ ಯಾವುದು? ಕ್ರಮ ಹೇಗೆ? ಎಂಬೆಲ್ಲ ಮಾಹಿತಿ ಇಲ್ಲಿದೆ. ಕಳೆದ ವರ್ಷ, ಕೆಎಸ್ಇಎಬಿ ಮೇ 9 ರಂದು ಎಸ್ಎಸ್ಎಲ್ಸಿ ಪರೀಕ್ಷೆ-1 ಫಲಿತಾಂಶಗಳನ್ನು ಪ್ರಕಟಿಸಿತ್ತು.

ಇದನ್ನೂ ಓದಿ
Image
ಮೇ ತಿಂಗಳ ಎರಡನೇ ವಾರದಲ್ಲಿ CBSE ಫಲಿತಾಂಶ ಪ್ರಕಟ ಸಾಧ್ಯತೆ
Image
UPSC ಫಲಿತಾಂಶ: ಹಾವೇರಿ ವೈದ್ಯನಿಗೆ 41ನೇ ರ‍್ಯಾಂಕ್
Image
ಲೇಖನ ಸಾಮಾಗ್ರಿ ಬೆಲೆ ಏರಿಕೆ: ಪೋಷಕರು, ವಿದ್ಯಾರ್ಥಿಗಳಿಗೆ ಬರೆ
Image
ಒಂದನೇ ತರಗತಿ ಸೇರ್ಪಡೆಗೆ ವಯೋಮಿತಿ ಸಡಿಲ: ಸಚಿವ ಮಧು ಬಂಗಾರಪ್ಪ ಘೋಷಣೆ

ಆನ್​ಲೈನ್​ನಲ್ಲಿ ನೋಡುವುದು ಹೇಗೆ?

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) SSLC ಅಥವಾ 10 ನೇ ತರಗತಿಯ ಬೋರ್ಡ್ ಪರೀಕ್ಷಾ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ https://kseab.karnataka.gov.in ಅಥವಾ https://karresults.nic.in ನಲ್ಲಿ ಪ್ರಕಟಿಸಲಿದೆ. ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಫಲಿತಾಂಶ ಪಡೆಯಬಹುದಾಗಿದೆ.

  1. karresults.nic.in ನಲ್ಲಿ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ.
  2. 2025ರ ಎಸ್​ಎಸ್​ಎಲ್​ಸಿ ಪರೀಕ್ಷೆ-1 ಫಲಿತಾಂಶ ಲಿಂಕ್​ ಮೇಲೆ ಕ್ಲಿಕ್​ ಮಾಡಿ.
  3. ನಂತರ ಎಸ್​ಎಸ್​ಎಲ್​ಸಿ ಪರೀಕ್ಷೆಯ ಫಲಿತಾಂಶ 2025 ಲಾಗಿನ್​ ಪೇಜ್​ ತೆರೆದುಕೊಳ್ಳುತ್ತದೆ.
  4. ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.
  5. ಬಳಿಕ, SSLC. Karnataka.gov.in ನಲ್ಲಿ ಆನ್​ಲೈನ್​ ಫಲಿತಾಂಶ ಅಂಕಪಟ್ಟಿಯ ಮುದ್ರಣವನ್ನು ತೆಗೆದುಕೊಳ್ಳಿ.

SMS ಮೂಲಕ ಪರಿಶೀಲಿಸುವುದು ಹೇಗೆ?

KAR 10 ಅಂತ ಬರೆದು ಸ್ಪೇಸ್​ ಬಿಟ್ಟು ನೋಂದಣಿ ಸಂಖ್ಯೆ ಟೈಪ್​ ಮಾಡಿ 56263ಗೆ ಸಂದೇಶ ಕಳುಹಿಸಿ. ಫಲಿತಾಂಶವನ್ನು ವಿದ್ಯಾರ್ಥಿಗಳು ಅದೇ ಮೊಬೈಲ್​ ಸಂಖ್ಯೆಗೆ ಕಳುಹಿಸಲಾಗುತ್ತದೆ.

ಇದನ್ನೂ ಓದಿ: ಸೀಟ್ ಬ್ಲಾಕಿಂಗ್ ತಡೆಗೆ KEA ಹೊಸ ನಿಯಮ: 3 ವರ್ಷ ಬ್ಯಾನ್

ಇನ್ನೂ ಎರಡು ಅವಕಾಶಗಳಿವೆ

ಈ ವರ್ಷ ಇನ್ನೂ ಎರಡು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು (ಪರೀಕ್ಷೆ-2 ಮತ್ತು ಪರೀಕ್ಷೆ-3) ನಡೆಯಲಿವೆ. ಉತ್ತೀರ್ಣರಾಗದಿದ್ದರೆ ಅಥವಾ ಉತ್ತಮ ಅಂಕ ಲಭಿಸದಿದ್ದರೆ ವಿದ್ಯಾರ್ಥಿಗಳಿಗೆ ಇನ್ನೂ ಎರಡು ಅವಕಾಶಗಳಿವೆ. ಈ ಪರೀಕ್ಷೆಗಳು ಜೂನ್​ ಮತ್ತು ಜುಲೈನಲ್ಲಿ ನಡೆಯುವ ಸಾಧ್ಯತೆ ಇದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಎಸ್​ಎಸ್​ಎಲ್​ಸಿ ಫಲಿತಾಂಶ ಲೈವ್​ ಅಪ್ಡೇಟ್ಸ್​

Published On - 3:39 pm, Thu, 1 May 25

ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಒಂದು ಆಧಾರ್ ಕಾರ್ಡ್​ಗೆ 2 ಚೀಲ ಯೂರಿಯಾ
ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಒಂದು ಆಧಾರ್ ಕಾರ್ಡ್​ಗೆ 2 ಚೀಲ ಯೂರಿಯಾ
ಪೂಜೆ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವ ಗೃಹಿಣಿಯರು
ಪೂಜೆ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವ ಗೃಹಿಣಿಯರು
‘ನಮ್ಮ ಮನೆ ಹತ್ತಿರವೇ ಅಟ್ಯಾಕ್ ಆಗಿದೆ’: ಪೊಲೀಸ್ ಎದುರು ಪ್ರಥಮ್ ಅಳಲು
‘ನಮ್ಮ ಮನೆ ಹತ್ತಿರವೇ ಅಟ್ಯಾಕ್ ಆಗಿದೆ’: ಪೊಲೀಸ್ ಎದುರು ಪ್ರಥಮ್ ಅಳಲು
ಹುಲಿರಾಯನ ಫೋಸ್​ ಕಂಡು ಹೌದು ಹುಲಿಯಾ ಎಂದ ಪ್ರವಾಸಿಗರು
ಹುಲಿರಾಯನ ಫೋಸ್​ ಕಂಡು ಹೌದು ಹುಲಿಯಾ ಎಂದ ಪ್ರವಾಸಿಗರು
PM Modi Speech Live: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಭಾಷಣದ ನೇರಪ್ರಸಾರ
PM Modi Speech Live: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಭಾಷಣದ ನೇರಪ್ರಸಾರ
ದರ್ಶನ್ ವಿಗ್ ಧರಿಸುತ್ತಾರೆ, ಅದನ್ನು ಹೇಗೆ ಕಿತ್ತುಕೊಳ್ಳಲಾದೀತು? ಪ್ರಥಮ್
ದರ್ಶನ್ ವಿಗ್ ಧರಿಸುತ್ತಾರೆ, ಅದನ್ನು ಹೇಗೆ ಕಿತ್ತುಕೊಳ್ಳಲಾದೀತು? ಪ್ರಥಮ್
ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮೇಘಸ್ಫೋಟ; ದಿಢೀರ್ ಪ್ರವಾಹದಿಂದ ಮೂವರು ಸಾವು
ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮೇಘಸ್ಫೋಟ; ದಿಢೀರ್ ಪ್ರವಾಹದಿಂದ ಮೂವರು ಸಾವು
ಪಹಲ್ಗಾಮ್ ದಾಳಿಗೆ ಭದ್ರತಾ ಲೋಪವೇ ಕಾರಣ: ಖರ್ಗೆ
ಪಹಲ್ಗಾಮ್ ದಾಳಿಗೆ ಭದ್ರತಾ ಲೋಪವೇ ಕಾರಣ: ಖರ್ಗೆ
ಕಾಂಗ್ರೆಸ್​ನ ದಲಿತ ವಿರೋಧಿ ನೀತಿಯಿಂದ ಖರ್ಗೆ ಸಿಎಂ ಆಗಲಿಲ್ಲ: ಜ್ಞಾನೇಂದ್ರ
ಕಾಂಗ್ರೆಸ್​ನ ದಲಿತ ವಿರೋಧಿ ನೀತಿಯಿಂದ ಖರ್ಗೆ ಸಿಎಂ ಆಗಲಿಲ್ಲ: ಜ್ಞಾನೇಂದ್ರ
ಅವಮಾನಗಳ ಹೊರತಾಗಿಯೂ ಸಿಎಂ ವಿರುದ್ಧ ಮಾತಾಡದ ಶಿವಕುಮಾರ್
ಅವಮಾನಗಳ ಹೊರತಾಗಿಯೂ ಸಿಎಂ ವಿರುದ್ಧ ಮಾತಾಡದ ಶಿವಕುಮಾರ್