Karnataka SSLC Result 2025: ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; kseab.karnataka.gov.in ನಲ್ಲಿ ರಿಸಲ್ಟ್ ಲಭ್ಯ
ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ 2025: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳು karresults.nic.in ವೆಬ್‌ಸೈಟ್‌ನಲ್ಲಿ ತಮ್ಮ ಫಲಿತಾಂಶವನ್ನು ನೋಡಬಹುದು. ಯಾರು ಟಾಪರ್, ಯಾವ ಜಿಲ್ಲೆ ಪ್ರಥಮ ಎಂಬ ಮಾಹಿತಿ ಇಲ್ಲಿದೆ.

kseab.karnataka.gov.in – Karnataka SSLC Class 10 Result 2025:
ಬೆಂಗಳೂರು, ಮೇ 02: 2024-2025ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಫಲಿತಾಂಶ (SSLC Result) ಪ್ರಕಟವಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಈ ಬಾರಿ ಶೇ.66.14ರಷ್ಟು ಅಂದರೆ ಕಳೆದ ವರ್ಷಕ್ಕಿಂತ 8% ಫಲಿತಾಂಶ ಹೆಚ್ಚಾಗಿದೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. 74% ಹೆಣ್ಣುಮಕ್ಕಳು ಮತ್ತು 58.07% ಗಂಡು ಮಕ್ಕಳು ಉತ್ತೀರ್ಣ ಆಗಿದ್ದಾರೆ ಎಂದು ಹೇಳಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಶೇಕಡಾ 62.7ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಅನುದಾನಿತ ಶಾಲೆಗಳಲ್ಲಿ ಶೇಕಡಾ 58.97ರಷ್ಟು, ಅನುದಾನರಹಿತ ಶಾಲೆಗಳಲ್ಲಿ ಶೇ.75.59ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ ಆಗಿದ್ದಾರೆ. ನಗರ ಪ್ರದೇಶದ ಶೇಕಡಾ 67.05ರಷ್ಟು ಮತ್ತು ಗ್ರಾಮೀಣ ಭಾಗದಲ್ಲಿ ಶೇಕಡಾ 65.47ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ ಆಗಿದ್ದಾರೆ. ಈ ಬಾರಿ 22 ವಿದ್ಯಾರ್ಥಿಗಳು 625 ಅಂಕಗಳಿಗೆ 625 ಅಂಕ ಪಡೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Karnataka SSLC Result Websites: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಫಲಿತಾಂಶ ಯಾವ ಸೈಟ್ ಗಳಲ್ಲಿ ಲಭ್ಯ? ಇಲ್ಲಿದೆ ಮಾಹಿತಿ
ಕಳೆದ ವರ್ಷ ಸ್ವಲ್ಪ ಗೊಂದಲ ಇತ್ತು. ಪರೀಕ್ಷೆಯ ಪಾವಿತ್ರತ್ಯೆ ಕಾಪಾಡಬೇಕು ಅಂತ ವೆಬ್ ಕಾಸ್ಟಿಂಗ್ ಮಾಡಿದ್ದೇವೆ. ಕಳೆದ ವರ್ಷ 53% ಫಲಿತಾಂಶ ಬಂದಿತ್ತು. ನಾವು ಗ್ರೇಸ್ ಮಾರ್ಕ್ಸ್ ಕೊಟ್ಟ ಮೇಲೆ 73% ಗೆ ಬಂತು. ಸಿಎಂ ಸಿದ್ದರಾಮಯ್ಯ ಕೂಡ ಇದರ ಬಗ್ಗೆ ಮಾತನಾಡಿದ್ದರು. ಆದಾದ ಮೇಲೆ ಟಾರ್ಗೆಟ್ ಕೊಟ್ಟರು. ಇಲಾಖೆಯಿಂದ ಒಳ್ಳೆಯ ರಿಸಲ್ಟ್ ಬರುವ ರೀತಿಯಲ್ಲಿ ಮಾಡುವಂತೆ ಹೇಳಿದ್ದರು ಎಂದರು.
ಯಾವ ಜಿಲ್ಲೆಗೆ ಯಾವ ಸ್ಥಾನ?
ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ (ಶೇ.91.12), ಉಡುಪಿ ಜಿಲ್ಲೆ 2ನೇ ಸ್ಥಾನ (ಶೇ.89.96), ಉತ್ತರ ಕನ್ನಡ ಜಿಲ್ಲೆಗೆ 3ನೇ ಸ್ಥಾನ (ಶೇ.83.19), ಶಿವಮೊಗ್ಗ ಜಿಲ್ಲೆಗೆ 4ನೇ ಸ್ಥಾನ (ಶೇ.82.29), ಕೊಡಗು ಜಿಲ್ಲೆಗೆ 5ನೇ ಸ್ಥಾನ (ಶೇ.82.21), ಕಲಬುರಗಿ ಕೊನೆಯ ಸ್ಥಾನ (ಶೇ42.43) ಪಡೆದುಕೊಂಡಿದೆ.
144 ಶಾಲೆಗಳಲ್ಲಿ ಶೂನ್ಯ ಫಲಿತಾಂಶ
ಸರ್ಕಾರಿಯ ಆರು, ಅನುದಾನಿತ 30 ಮತ್ತು ಅನುದಾನ ರಹಿತ 108 ಶಾಲೆಗಳು ಸೇರಿದಂತೆ ಒಟ್ಟು 144 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.
ಉತ್ತರ ಪತ್ರಿಕೆ ಸ್ಕ್ಯಾನ್ ಪ್ರತಿ ಪಡೆಯಲು ಅವಕಾಶ
ಇನ್ನು ಇಂದಿನಿಂದಲೇ ಮೇ-7 ರವರೆಗೆ ಉತ್ತರ ಪತ್ರಿಕೆ ಸ್ಕ್ಯಾನ್ ಪ್ರತಿ ಪಡೆಯಲು ಅವಕಾಶ ನೀಡಲಾಗಿದೆ. ಮೇ 4 ರಿಂದ 11ನೇ ತಾರೀಖಿನವರೆಗೂ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಮೇ 26 ರಿಂದ ಜೂನ್ 2ರವರೆಗೆ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆ-3 ಜೂನ್ 23 ರಿಂದ 30 ರವರೆಗೆ ನಡೆಯಲಿದೆ.
ಮಧ್ಯಾಹ್ನ 12.30ರ ನಂತರ ವೆಬ್‌ಸೈಟ್‌ನಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಲಭ್ಯವಿದ್ದು, https://karresults.nic.in ಜಾಲತಾಣದಲ್ಲೂ ಫಲಿತಾಂಶ ವೀಕ್ಷಿಸಬಹುದಾಗಿದೆ. ಸದ್ಯ ಪಾಸಾಗಿರುವ ವಿದ್ಯಾರ್ಥಿಗಳ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. 2025 ಮಾರ್ಚ್ 21ರಿಂದ ಏಪ್ರಿಲ್ 4 ರವರೆಗೆ ರಾಜ್ಯದ 2,818 ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲಾಗಿತ್ತು. 4,61563 ಹುಡುಗರು ಮತ್ತು 4,34,884 ಹುಡಗಿಯರು ಪರೀಕ್ಷೆ ಬರೆದಿದ್ದರು.
ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಹೀಗೆ ನೋಡಿ
ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಹೇಗೆ ನೋಡಬಹುದು ಎಂದು ಹಂತ ಹಂತವಾಗಿ ಇಲ್ಲಿ ಮಾಹಿತಿ ನೀಡಲಾಗಿದೆ.
- karresults.nic.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- “SSLC ಫಲಿತಾಂಶ 2025” ಎಂಬ ಲಿಂಕ್ ಅನ್ನು ಕ್ಲಿಕ್ ಮಾಡಿ.
- ಬಳಿಕ ನಿಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ಸಬ್ಮೀಟ್ ಕೊಡಿ.
- ಪರದೆಯ ಮೇಲೆ ನಿಮ್ಮ ಫಲಿತಾಂಶವು ಕಾಣಿಸುತ್ತದೆ.
- ನಂತರ ತಮ್ಮ ಫಲಿತಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಎಸ್‌ಎಸ್‌ಎಲ್‌ಸಿ ಫಲಿತಾಂಶ ಲೈವ್ ಅಪ್ಡೇಟ್ಸ್
Published On - 12:00 pm, Fri, 2 May 25