Karnataka SSLC Results 2025 Toppers: ಎಸ್‌ಎಸ್‌ಎಲ್‌ಸಿ ಫಲಿತಾಂಶ: ಶಿವಮೊಗ್ಗದ ನಮನ ಸೇರಿ 22 ವಿದ್ಯಾರ್ಥಿಗಳಿಗೆ ಔಟ್ ಆಫ್ ಔಟ್
ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2025 ಟಾಪರ್: ಇಂದು 2025ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದೆ. ಒಟ್ಟು 22 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸುವ ಮೂಲಕ ಪ್ರಥಮ ಸ್ಥಾನ ಗಳಿಸಿದ್ದಾರೆ. ಅದರಲ್ಲಿ ಶಿವಮೊಗ್ಗದ ನಮನ, ಮಂಡ್ಯದ ಧೃತಿ ಹಾಗೂ ಬೆಂಗಳೂರಿನ ಭಾವನಾ ಸೇರಿ 22 ವಿದ್ಯಾರ್ಥಿಗಳಿಗೆ ಔಟ್ ಆಫ್ ಔಟ್ ಬಂದಿದೆ.

kseab.karnataka.gov.in – Karnataka SSLC Class 10 Result 2025
ಬೆಂಗಳೂರು, ಮೇ 02: ಕರ್ನಾಟಕ ಮಾಧ್ಯಮಿಕ ಶಿಕ್ಷಣ ಪರೀಕ್ಷಾ ಮಂಡಳಿ (KSEEB) ಇಂದು, ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2025ವನ್ನು ಪ್ರಕಟಿಸಿದೆ. ಒಟ್ಟು 22 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸುವ ಮೂಲಕ ಪ್ರಥಮ ಸ್ಥಾನ ಗಳಿಸಿದ್ದಾರೆ. ಅದರಲ್ಲಿ ಶಿವಮೊಗ್ಗದ ನಮನ, ಮಂಡ್ಯದ ಧೃತಿ ಹಾಗೂ ಬೆಂಗಳೂರಿನ ಭಾವನಾ ಸೇರಿ 22 ವಿದ್ಯಾರ್ಥಿಗಳಿಗೆ ಔಟ್ ಆಫ್ ಔಟ್ ಬಂದಿದೆ.
ವಿದ್ಯಾರ್ಥಿಗಳು ಗಮನಿಸಬೇಕಾದ ಅಂಶವೆಂದರೆ SSLC ಫಲಿತಾಂಶ 2025 ಕರ್ನಾಟಕವನ್ನು ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ, ಅಂದರೆ karresults.nic.in ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿ ಶೇ.66.14ರಷ್ಟು ಫಲಿತಾಂಶ ಬಂದಿದೆ. ಇಂದಿನಿಂದಲೇ ಉತ್ತರ ಪತ್ರಿಕೆ ಸ್ಕ್ಯಾನ್ ಪ್ರತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ : ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿ; ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ
ಇಂದಿನಿಂದ ಮೇ-7 ರವರೆಗೆ ಸ್ಕ್ಯಾನ್ ಪ್ರತಿ ಪಡೆಯಲು ಅವಕಾಶ ಇರಲಿದೆ. ಮೇ 4 ರಿಂದ 11ನೇ ತಾರೀಖಿನವರೆಗೂ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಇರಲಿದೆ. SSLC ಪರೀಕ್ಷೆ-2 ಮೇ26ರಿಂದ ಜೂನ್ 2ರವರೆಗೆ ನಡೆಯಲಿದೆ. SSLC ಪರೀಕ್ಷೆ-3 ಜೂನ್ 23-ಜೂನ್ 30 ನಡೆಯಲಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಶೇ.91.12 ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಗಳಿಸಿದೆ.
ಉಡುಪಿಯು ಶೇ.89.96 ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನ ಪಡೆದರೆ ಉತ್ತರ ಕನ್ನಡ ಜಿಲ್ಲೆ ಶೇ.83.19 ರಷ್ಟು ಫಲಿತಾಂಶಗಳೊಂದಿಗೆ ತೃತೀಯ ಸ್ಥಾನ ಗಳಿಸಿದೆ.
625 ಅಂಕಗಳಿಗೆ 625 ಅಂಕ ಗಳಿಸಿರುವವರು ಅಖೀಲ್ ಅಹ್ಮದ್ ನದಾಫ್: ವಿಜಯಪುರ ಜಿಲ್ಲೆ ಸಿ. ಭಾವನಾ: ದೇವನಹಳ್ಳಿ ಎಸ್.ಧನುಷ್: ಮೈಸೂರು ಜಿಲ್ಲೆಯ ಜೆ.ಧೃತಿ: ಮಂಡ್ಯ ಜಿಲ್ಲೆಯ ಎಸ್.ಎನ್.ಜಾಹ್ನವಿ: ಬೆಂಗಳೂರು ದಕ್ಷಿಣ ಮಧುಸೂಧನ್ ರಾಜ್: ಬೆಂಗಳೂರು ಉತ್ತರದ ಮೊಹಮ್ಮದ್ ಮಸ್ತೂರ್: ತುಮಕೂರು ಜಿಲ್ಲೆ ಮೌಲ್ಯ ಡಿ. ರಾಜ್: ಚಿತ್ರದುರ್ಗ ಜಿಲ್ಲೆ ಕೆ.ನಮನ: ಶಿವಮೊಗ್ಗ ಜಿಲ್ಲೆ ನಮಿತಾ: ಬೆಂಗಳೂರು ದಕ್ಷಿಣ ಜಿಲ್ಲೆ ನಂದನ್: ಚಿತ್ರದುರ್ಗ ಜಿಲ್ಲೆ ನಿತ್ಯ ಎಂ.ಕುಲಕರ್ಣಿ: ಶಿವಮೊಗ್ಗ ರಂಜಿತಾ: ಬೆಂಗಳೂರು ಗ್ರಾಮಾಂತರ ರೂಪಾ ಚೆನ್ನಗೌಡ ಪಾಟೀಲ್: ಬೆಳಗಾವಿ ಜಿಲ್ಲೆ ಸಹಿಷ್ಣು ಎನ್: ಶಿವಮೊಗ್ಗ ಜಿಲ್ಲೆ ಶಗುಫ್ತಾ ಅಂಜುಮ್: ಶಿರಸಿ ಸ್ವಸ್ತಿ ಕಾಮತ್: ಉಡುಪಿ ಜಿಲ್ಲೆ ಆರ್.ಎನ್.ತಾನ್ಯಾ: ಮೈಸೂರು ಜಿಲ್ಲೆ ಉತ್ಸವ್ ಪಾಟೀಲ್: ಹಾಸನ ಜಿಲ್ಲೆ ಯಶ್ವಿತಾ ರೆಡ್ಡಿ ಕೆ.ಬಿ: ಮಧುಗಿರಿಯ ಎಂ.ಧನಲಕ್ಷ್ಮೀ
7,90,890 ಮಕ್ಕಳ ಪೈಕಿ 5,23,075 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. SSLC ಪರೀಕ್ಷೆಯಲ್ಲಿ ಶೇಕಡಾ 58.07ರಷ್ಟು ಬಾಲಕರು ಪಾಸಾಗಿದ್ದಾರೆ. 3,90,311 ಬಾಲಕರ ಪೈಕಿ 2,26,637 ಬಾಲಕರು ಉತ್ತೀರ್ಣರಾಗಿದ್ದು, ಶೇಕಡಾ 74ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದಾರೆ. 4,00,579 ಬಾಲಕಿಯರ ಪೈಕಿ 2,96,438 ಬಾಲಕಿಯರು ಉತ್ತೀರ್ಣರಾಗಿದ್ದಾರೆ.
ಫಲಿತಾಂಶವನ್ನು ಎಲ್ಲಿ ವೀಕ್ಷಿಸಬಹುದು
kseab.karnataka.gov.in/ karresults.nic.in
ಕರ್ನಾಟಕ SSLC ಫಲಿತಾಂಶ 2025 ಅನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸುವುದು ಹೇಗೆ? ಅಧಿಕೃತ KSEAB ವೆಬ್‌ಸೈಟ್‌ಗೆ ಹೋಗಿ- karresults.nic.in/
ಕರ್ನಾಟಕ SSLC ಫಲಿತಾಂಶ 2025 ಅನ್ನು ನ್ಯಾವಿಗೇಟ್ ಮಾಡಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ. ಇನ್ಪುಟ್ ಕ್ಷೇತ್ರಗಳಲ್ಲಿ, ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ. ವಿವರಗಳನ್ನು ಪರಿಶೀಲಿಸಿ ಮತ್ತು ಸಲ್ಲಿಸು ಕ್ಲಿಕ್ ಮಾಡಿ
SSLC ಫಲಿತಾಂಶ 2025 ಕರ್ನಾಟಕ ಅಂಕಪಟ್ಟಿ ಡೌನ್‌ಲೋಡ್ ಮಾಡಿ
ಎಸ್ ಎಸ್ ಎಲ್ ಸಿ ಫಲಿತಾಂಶ ಲೈವ್ ಅಪ್ಡೇಟ್
Published On - 12:29 pm, Fri, 2 May 25