ಹದಿನಾರರ ಪೋರ ಚಿರಂತ್ ಹೊನ್ನಾವರ ಸಾಧನೆಗೆ ಮೂಳೆ ಕ್ಯಾನ್ಸರ್ ಅಡ್ಡಿಯಾಗಲಿಲ್ಲ, ಹತ್ತನೇ ತರಗತಿಯಲ್ಲಿ 92% ಮಾರ್ಕ್ಸ್!
ಐಸಿಎಸ್ಸಿ ಮತ್ತು ಸಿಬಿಎಸ್ಸಿ ಸಿಲಬಸ್ ರಾಜ್ಯದ ಪಠ್ಯಕ್ರಮಕ್ಕಿಂತ ಕಠಿಣವಾಗಿರುತ್ತದೆ ಅನ್ನೋದು ನಿರ್ವಿವಾದಿತ. ಬಲಗೈ ಅಂದರೆ ತನ್ನ ಸ್ವಾಭಾವಿಕ ಕೈಯ ಮೊಣಕೈ ಭಾಗದಿಂದ ಹೆಚ್ಚುಕಡಿಮೆ ಮುಂಗೈವರೆಗಿನ ಮೂಳೆಯನ್ನು ಕಳೆದುಕೊಂಡಿರುವ ಚಿರಂತ್, ಐಸಿಎಸ್ಸಿ ಸಿಲಬಸ್ನೊಂದಿಗೆ ಹತ್ತನೇ ತರಗತಿಯಲ್ಲಿ ಶೇಕಡ 92ರಷ್ಟು ಅಂಕ ತೆಗೆದಿದ್ದಾನೆ. ಅವನನ್ನು ಹೆತ್ತ ಗುರುಪ್ರಸಾದ್ ಮತ್ತು ಪಲ್ಲವಿ ಸಂತೋಷದ ಅಲೆಯಲ್ಲಿ ತೇಲುತ್ತಿದ್ದಾರೆ!
ಬೆಂಗಳೂರು, ಮೇ 2: ಚಿರಂತ್ ಹೊನ್ನಾವರಗೆ ಈಗಷ್ಟೇ 16 ರ ಪ್ರಾಯ, ಅದರೆ ಅವನಲ್ಲಿರುವ ಛಲ, ಪ್ರಯತ್ನಶೀಲತೆ ಮತ್ತು ಗುರಿ ಸಾಧಿಸುವೆಡೆ ಇರುವ ಬದ್ಧತೆ ಎಂಥವರನ್ನೂ ದಂಗಾಗಿಸುತ್ತದೆ. ಚಿರಂತ್ಗೆ 14ನೇ ವಯಸ್ಸಿನಿಂದಲೇ ಮಾರಕ ಕ್ಯಾನ್ಸರ್ ರೋಗ ಬಾಧಿಸಲಾರಂಭಿಸಿದೆ. ಅದು ಮೂಳೆ ಕ್ಯಾನ್ಸರ್. ಅದರೆ ಹುಡುಗ ಹೆದರಲಿಲ್ಲ, ಅತಂಕಕ್ಕೊಳಗಾಗಲಿಲ್ಲ. ಅದು ಕೆಲ ದಿನಗಳ ಮಟ್ಟಿಗೆ ತನ್ನನ್ನು ಕಾಡಬಹುದು, ಅದರೆ ತನ್ನ ವಿದ್ಯಾರ್ಥಿ ಬದುಕಿನ ಓಟವನ್ನು ತಡೆಯಲಾರದು ಅಂತ ಮನಸ್ಸನ್ನು ಗಟ್ಟಿ ಮಾಡಿಕೊಂಡು ಓದಿನೆಡೆ ಗಮನವಹಿಸಿದ. ಅವನ ಛಲ ಕಂಡು ಮಹಾಮಾರಿಯೂ ದಿಗಿಲುಗೊಂಡಿರಬಹುದು. ಚಿರಂತ್ನ ಬಲಗೈ ಮೂಳೆಯನ್ನು ತೆಗೆಯಬೇಕಾದ ಅನಿವಾರ್ಯತೆ ಎದುರಾದರೂ ಎಂಟೆದೆಯ ಹುಡುಗ ಧೃತಿಗೆಡಲಿಲ್ಲ. ತನ್ನ ಸಾಧನೆಯ ಹಾದಿಯನ್ನು ಕನ್ನಡಿಗರಿಗೆ ಹೇಳಲು ನಮ್ಮ ಕಚೇರಿಗೆ ಬಂದಿದ್ದಾನೆ, ಅವನ ಬಾಯಿಂದಲೇ ಕೇಳಿ ಹೋರಾಟದ ಕಥೆಯನ್ನು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಲಶಕ್ಕೆ ಐದು ಎಲೆ ಇಡುವುದರ ಹಿಂದಿನ ರಹಸ್ಯ ಹಾಗೂ ವಿಶೇಷ ತಿಳಿಯಿರಿ

ಮೂಲಾ ನಕ್ಷತ್ರದಲ್ಲಿ ಚಂದ್ರ ಸಂಚಾರ: ಯಾವ ರಾಶಿಗೆ ಏನು ಕಾದಿದೆ ತಿಳಿಯಿರಿ

ನಿಜವಾದ ಟಾಮ್ ಆ್ಯಂಡ್ ಜೆರಿ; ಒಟ್ಟಿಗೇ ಊಟ ಮಾಡುವ ಬೆಕ್ಕು-ಇಲಿ ವಿಡಿಯೋ ವೈರಲ್

ಕೆಳಗಿಂದ ಮೇಲೆ ಹರಿವ ನೀರಿನಲ್ಲಿ ದೋಣಿ ಬಿಟ್ಟ ಸಚಿವ ಶಿವರಾಜ್ ಸಿಂಗ್ ಚೌಹಾಣ್
