ಕ್ಲೈಮ್ಯಾಕ್ಸ್ನಲ್ಲಿ ಏರಿತು ‘ಸೀತಾ ರಾಮ’ ಟಿಆರ್ಪಿ; ಟಾಪ್ ಐದು ಧಾರಾವಾಹಿ ಲಿಸ್ಟ್ ಇಲ್ಲಿದೆ
ಸೀತಾ ರಾಮ ಧಾರಾವಾಹಿ ಏಪ್ರಿಲ್ 30 ರಂದು ಅಂತ್ಯಗೊಳ್ಳುತ್ತಿದೆ. ಈ ವಾರದ ಟಾಪ್ 5 ಕನ್ನಡ ಧಾರಾವಾಹಿಗಳ ಪಟ್ಟಿಯಲ್ಲಿ 'ಅಣ್ಣಯ್ಯ' ಮೊದಲ ಸ್ಥಾನದಲ್ಲಿದೆ. ಈ ವಾರ ಕೊನೆ ಆಗಲಿರುವ ‘ಸೀತಾ ರಾಮ’ ಧಾರಾವಾಹಿ ತನ್ನ ಅಂತಿಮ ವಾರದಲ್ಲಿ ಉತ್ತಮ ಟಿಆರ್ಪಿ ಪಡೆದಿದೆ. ಆ ಬಗ್ಗೆ ಇಲ್ಲಿದೆ ವಿವರ.

‘ಸೀತಾ ರಾಮ’ ಧಾರಾವಾಹಿ (Seetha Raama Serial) ಕೊನೆ ಆಗುತ್ತಿದೆ. ಈ ವಾರ ಕೊನೆಯ ಸಂಚಿಕೆಗಳು ಪ್ರಸಾರ ಕಾಣಲಿದೆ. ಏಪ್ರಿಲ್ 30ರಂದು ಧಾರಾವಾಹಿ ಪೂರ್ಣಗೊಳ್ಳಲಿದೆ. ಇದಕ್ಕೂ ಮೊದಲು ಧಾರಾವಾಹಿಗಳ ಟಿಆರ್ಪಿ ಲಿಸ್ಟ್ ಹೊರ ಬಿದ್ದಿದೆ. ಈ ಧಾರಾವಾಹಿ ಕೊನೆ ಆಗುತ್ತಿರುವ ಸಂದರ್ಭದಲ್ಲಿ ಧಾರಾವಾಹಿಯ ಟಿಆರ್ಪಿಯಲ್ಲಿ ಕೊಂಚ ಏರಿಕೆ ಕಂಡಿದೆ. ಹಾಗಾದರೆ 20ನೇ ವಾರದಲ್ಲಿ ಟಾಪ್ ಐದರಲ್ಲಿ ಇರೋ ಧಾರಾವಾಹಿಗಳು ಯಾವವು ಎಂಬ ಬಗ್ಗೆ ಇಲ್ಲಿದೆ ವಿವರ.
ಧಾರಾವಾಹಿ ಟಿಆರ್ಪಿಗಳಲ್ಲಿ ಪ್ರತಿ ವಾರ ಏರಿಳಿತ ಸಾಮಾನ್ಯ. ಅದೇ ರೀತಿ ಯಾವಾಗ ಯಾವಾ ಧಾರಾವಾಹಿ ಟಾಪ್ನಲ್ಲಿ ಇರುತ್ತದೆ ಎಂದು ಹೇಳೋಕೆ ಸಾಧ್ಯವಿಲ್ಲ. ಕೆಲವೊಮ್ಮೆ ಧಾರಾವಾಹಿಗಳು ರೂಲ್ ಮಾಡಲು ಆರಂಭಿಸಿ ಬಿಟ್ಟರೆ ಹಲವು ತಿಂಗಳ ಕಾಲ ಅವು ನಂಬರ್ 1 ಇದ್ದ ಉದಾಹರಣೆ ಇದೆ. ಆದರೆ, ಇತ್ತೀಚೆಗೆ ಟಿಆರ್ಪಿಯಲ್ಲಿ ಸಾಕಷ್ಟು ಏರಿಳಿತ ಇದೆ. ಐಪಿಎಲ್ ಕಾರಣದಿಂದಲೂ ಎಲ್ಲಾ ಧಾರಾವಾಹಿಗಳ ಟಿಆರ್ಪಿಯಲ್ಲಿ ಕೊಂಚ ಇಳಿಕೆ ಆಗಿದೆ.
‘ಅಣ್ಣಯ್ಯ’ ಧಾರಾವಾಹಿ ಮೊದಲ ಸ್ಥಾನದಲ್ಲಿ ಇದೆ. ನಿಶಾ ರವಿಕೃಷ್ಣನ್, ವಿಕಾಸ್ ಉತ್ತಯ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರೋ ಈ ಧಾರಾವಾಗಿ ಪ್ರೇಕ್ಷಕರಿಗೆ ಸಖತ್ ಇಷ್ಟ ಆಗುತ್ತಿದೆ. ಕಥಾ ನಾಯಕ ಹಾಗೂ ನಾಯಕಿ ನಡುವಿನ ನಾಚಿಕೆ ಸ್ವಭಾವದ ರೊಮ್ಯಾನ್ಸ್ ವೀಕ್ಷಕರಿಗೆ ಇಷ್ಟ ಆಗುತ್ತಿದೆ. ಎರಡನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ ಇದೆ. ಈ ಧಾರಾವಾಹಿ ಪಾಯಿಂಟ್ ಒಂದು ಅಂಕದಿಂದ ಮೊದಲ ಸ್ಥಾನವನ್ನು ಮಿಸ್ ಮಾಡಿಕೊಂಡಿದೆ. ಈ ಧಾರಾವಾಹಿಯಲ್ಲಿ ವಿಲನ್ಗಳ ನಿಜವಾದ ಮುಖವಾಡ ಬಯಲಾಗುತ್ತಿದೆ. ಈ ಕಾರಣದಿಂದಲೂ ಧಾರಾವಾಹಿಯನ್ನು ಹೆಚ್ಚಿನ ಜನರು ವೀಕ್ಷಿಸಿದ್ದಾರೆ.
ಇದನ್ನೂ ಓದಿ: ‘ಸೀತಾ ರಾಮ’ ಧಾರಾವಾಹಿಗೆ ಕೊನೆಯ ದಿನದ ಶೂಟಿಂಗ್; ಸೀರಿಯಲ್ ಪೂರ್ಣಗೊಳ್ಳಲು ಕಾರಣವೇನು?
ಮೂರನೇ ಸ್ಥಾನದಲ್ಲಿ ‘ಶ್ರಾವಣಿ ಸುಬ್ರಹ್ಮಣ್ಯ’, ನಾಲ್ಕನೇ ಸ್ಥಾನದಲ್ಲಿ ಹಾರರ್ ಧಾರಾವಾಹಿ ‘ನಾನಿನ್ನ ಬಿಡಲಾರೆ’ ಇದೆ. ಐದನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿಗೆ ಸ್ಥಾನ ಸಿಕ್ಕಿದೆ. ಇನ್ನು ಸೀತಾ ರಾಮ ಧಾರಾವಾಹಿಗೆ ರಾಜ್ಯದಲ್ಲಿ 2.1 ಟಿವಿಆರ್ ಹಾಗೂ ನಗರ ಭಾಗದಲ್ಲಿ 2.3 ಟಿವಿಆರ್ ಸಿಕ್ಕಿದೆ. ಅಂತಿಮ ವಾರಕ್ಕೆ ಇನ್ನಷ್ಟು ಉತ್ತಮ ಟಿಆರ್ಪಿ ಸಿಗೋ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








