‘ಅವರು ಇದ್ದಿದ್ರೆ…’ ಅಂಬರೀಶ್ ಹುಟ್ಟುಹಬ್ಬದಂದು ಸುಮಲತಾ ಭಾವುಕ
Sumalatha Ambareesh: ಇಂದು (ಮೇ 29) ಅಂಬರೀಶ್ ಅವರ ಹುಟ್ಟಿದ ದಿನ. ನಟಿ ಸುಮಲತಾ ಅಂಬರೀಶ್ ಅವರು ಇಂದು ಅಂಬರೀಶ್ ಅವರ ಸ್ಮಾರಕಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ವೇಳೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಸುಮಲತಾ, ಅಂಬರೀಶ್ ಇದ್ದಿದ್ದರೆ ಮೊಮ್ಮಗನನ್ನು ಒಂದು ಕ್ಷಣವೂ ಬಿಟ್ಟು ಇರುತ್ತಿರಲಿಲ್ಲ. ಅವರಿಲ್ಲದ ನೆನಪು ಸದಾ ಕಾಡುತ್ತದೆ ಎಂದಿದ್ದಾರೆ.
ಇಂದು (ಮೇ 29) ಅಂಬರೀಶ್ (Ambareesh) ಅವರ ಹುಟ್ಟಿದ ದಿನ. ನಟಿ ಸುಮಲತಾ ಅಂಬರೀಶ್ ಅವರು ಇಂದು ಅಂಬರೀಶ್ ಅವರ ಸ್ಮಾರಕಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ವೇಳೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಸುಮಲತಾ, ಅಂಬರೀಶ್ ಇದ್ದಿದ್ದರೆ ಮೊಮ್ಮಗನನ್ನು ಒಂದು ಕ್ಷಣವೂ ಬಿಟ್ಟು ಇರುತ್ತಿರಲಿಲ್ಲ. ಅವರಿಲ್ಲದ ನೆನಪು ಸದಾ ಕಾಡುತ್ತದೆ. ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಬಂದು ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದಾರೆ. ಅವರು ಇದ್ದಾಗ ಪ್ರತಿದಿನವನ್ನೂ ಹಬ್ಬದಂತೆ ಸೆಲೆಬ್ರೇಟ್ ಮಾಡುತ್ತಿದ್ದರು, ಈಗಲೂ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಹಬ್ಬದಂತೆ ಆಚರಣೆ ಮಾಡುತ್ತಿದ್ದಾರೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

