ರಾಮನಗರ ಹೆಸರು ಬದಲಾವಣೆಗೆ ವಿರೋಧಿಸುತ್ತಿದ್ದ ಯೋಗೇಶ್ವರ್ ಈಗ ಬದಲಾವಣೆಯನ್ನು ಸ್ವಾಗತಿಸುತ್ತಿದ್ದಾರೆ!
ರಾಮನಗರ ತಾಲೂಕು ರಾಮನಗರ ಹೆಸರಲ್ಲೇ ಉಳಿದಿಕೊಂಡಿದೆ, ರಾಮನಗರ ಎಲ್ಲೂ ಹೋಗಿಲ್ಲ, ಶಿವಕುಮಮಾರ್ ಅವರು ಬೆಂಗಳೂರುನವರು ಬೆಂಗಳೂರುನವರಾಗೇ ಉಳಿಯಬೇಕು ಅಂತ ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಅಂತ ಹೆಸರಿಟ್ಟಿದ್ದಾರೆ, ಅವರ ನಿರ್ಧಾರಕ್ಕೆ ಸ್ವಾಗತವಿದೆ, ಅದರಿಂದ ಜಿಲ್ಲೆಯ ಜನರಿಗೆ ಅನುಕೂಲವಾಗುತ್ತದೆ ಅಂದರೆ ಬಹಳ ಸಂತೋಷ ಎಂದು ಯೋಗೇಶ್ವರ್ ಹೇಳಿದರು.
ರಾಮನಗರ, ಮೇ 29: ನಮ್ಮ ರಾಜಕಾರಣಿ ಅನುಕೂಲಸಿಂಧುಗಳು ಅನ್ನೋದು ಗೊತ್ತಿರದ ವಿಷಯವೇನಲ್ಲ, ಗಾಳಿ ಬೀಸಿದೆಡೆ ತಿರುಗುತ್ತಾರೆ. ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ ಚನ್ನಪಟ್ಟಣ ಅಸೆಂಬ್ಲಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ 25 ಸಾವಿರಕ್ಕೂ ಅಧಿಕ ಮತಗಳಿಂದ ಗೆದ್ದ ಸಿಪಿ ಯೋಗೇಶ್ವರ್; ಬಿಜೆಪಿಯಲ್ಲಿದ್ದಾಗ ರಾಮನಗರ ಜಿಲ್ಲೆ ಹೆಸರು ಬದಲಾವಣೆಯನ್ನು ಉಗ್ರವಾಗಿ ವಿರೋಧಿಸುತ್ತಿದ್ದರು. ಆದರೆ, ಈಗ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DK Shivakumar) ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಅಂತ ಪುನರ್ನಾಮಕರಣ ಮಾಡಿದ್ದಾರೆ. ಅದನ್ನು ವಿರೋಧಿಸದ ಯೋಗೇಶ್ವರ್ ಏನೇನೋ ಸಮಜಾಯಿಷಿಗಳನ್ನು ನೀಡುತ್ತಾರೆ.
ಇದನ್ನೂ ಓದಿ: ರಾಮನಗರ ಇವತ್ತಿನಿಂದ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಕರೆಸಿಕೊಳ್ಳುವುದು: ಡಿಕೆ ಶಿವಕುಮಾರ್, ಡಿಸಿಎಂ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ