ಟಿಕೆಟ್ ತಪ್ಪಿಸಿ ನನ್ನ ರಾಜಕೀಯ ಬದುಕು ಮೊಟಕುಗೊಳಿಸುವ ಪ್ರಯತ್ನ ಕುಮಾರಸ್ವಾಮಿ ಮಾಡಿದ್ದರು: ಯೋಗೇಶ್ವರ್

ಟಿಕೆಟ್ ತಪ್ಪಿಸಿ ನನ್ನ ರಾಜಕೀಯ ಬದುಕು ಮೊಟಕುಗೊಳಿಸುವ ಪ್ರಯತ್ನ ಕುಮಾರಸ್ವಾಮಿ ಮಾಡಿದ್ದರು: ಯೋಗೇಶ್ವರ್

ಅರುಣ್​ ಕುಮಾರ್​ ಬೆಳ್ಳಿ
|

Updated on:Nov 30, 2024 | 7:18 PM

ಮಾತೆತ್ತಿದರೆ ಪಕ್ಷದ ರಕ್ಷಣೆ ಅನ್ನುವ ಕುಮಾರಸ್ವಾಮಿ ಚನ್ನಪಟ್ಟಣ ಬಿಟ್ಟು ಯಾಕೆ ಹೋದರು ಅನ್ನೋದು ಮೂಲಭೂತ ಪ್ರಶ್ನೆ. ಅವರಿಗೆ ಅಧಿಕಾರ ಬೇಕಿತ್ತು ಹಾಗಾಗೇ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರು, ಪಾರ್ಟಿ ರಕ್ಷಣೆ ಅಂತ ಅವರು ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಟ್ಟಾರೆಯೇ? ಖಂಡಿತ ಇಲ್ಲ ಎಂದು ಸಿಪಿ ಯೋಗೇಶ್ವರ್ ಹೇಳಿದರು.

ರಾಮನಗರ: ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಟಿಕೆಟ್ ನೀಡುವ ನಿರ್ಧಾರ ಬಿಜೆಪಿಗೆ ಬಿಟ್ಟಿದ್ದರೆ ತನಗೆ ಯಾವುದೇ ಸಮಸ್ಯೆ ಇರಲಿಲ್ಲ ಮತ್ತು ಪಕ್ಷ ಬಿಡುವ ಸ್ಥಿತಿಯೂ ಏರ್ಪಡುತ್ತಿರಲಿಲ್ಲ, ಅದರೆ ಆ ನಿರ್ಧಾರವನ್ನು ಕ್ಷೇತ್ರ ತೆರವುಗೊಳಿಸಿದ ಕುಮಾರಸ್ವಾಮಿಯವರಿಗೆ ನೀಡಿದ್ದರಿಂದ ಅವರು ತನಗೆ ಕೊನೇವರೆಗೂ ಸತಾಯಿಸಿ ಟಿಕೆಟ್ ಸಿಗದಂಥ ಸ್ಥಿತಿ ನಿರ್ಮಾಣ ಮಾಡಿ ತನ್ನ ರಾಜಕೀಯ ಬದುಕನ್ನು ಮೊಟಕುಗೊಳಿಸುವ ಪ್ರಯತ್ನ ಮಾಡಿದ್ದರು, ತಾನು ಕಾಂಗ್ರೆಸ್ ಸೇರುವ ನಿರೀಕ್ಷೆ ಅವರಿಗಿರಲಿಲ್ಲ ಎಂದು ಶಾಸಕ ಸಿಪಿ ಯೋಗೇಶ್ವರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಹಾಲು ಉತ್ಪಾದಕರಿಗೆ ನೀಡುವ ಸಬ್ಸಿಡಿಯನ್ನು ₹ 5 ಹೆಚ್ಚಿಸುವಂತೆ ಸಿಎಂಗೆ ಮನವಿ ಮಾಡಲಾಗುವುದು: ಯೋಗೇಶ್ವರ್

Published on: Nov 30, 2024 07:17 PM