ಹಾಲು ಉತ್ಪಾದಕರಿಗೆ ನೀಡುವ ಸಬ್ಸಿಡಿಯನ್ನು ₹ 5 ಹೆಚ್ಚಿಸುವಂತೆ ಸಿಎಂಗೆ ಮನವಿ ಮಾಡಲಾಗುವುದು: ಯೋಗೇಶ್ವರ್
ಹಾಲು ಉತ್ಪಾದನೆಗೆ ಚನ್ನಪಟ್ಟಣ ರಾಜ್ಯದಲ್ಲೇ ಅತಿದೊಡ್ಡ ಕೇಂದ್ರವಾಗಿದೆ, ಹಾಲು ಉತ್ಪಾದಕರಿಗೆ ಸರ್ಕಾರ ನೆರವಾಗಬೇಕಿದೆ, ಅವರಿಗೆ ನೀಡುವ ಪ್ರೋತ್ಸಾಹ ಧನವನ್ನು ಪ್ರತಿ ಲೀಟರ್ಗೆ ₹ 5 ಹೆಚ್ಚಿಸುವಂತೆ ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿಯವರ ಜೊತೆ ಹೈನುಗಾರಿಕೆ ಸಚಿವ ಮತ್ತು ಸಹಕಾರ ಸಚಿವರ ಗಮನ ಸೆಳೆಯಲಾಗುವುದು ಎಂದು ಯೋಗೇಶ್ವರ್ ಹೇಳಿದರು.
ರಾಮನಗರ: ಕಾಂಗ್ರೆಸ್ ಸೇರುವಾಗ ಪಕ್ಷದ ನಾಯಕರ ಮುಂದೆ ಯಾವ ಬೇಡಿಕೆಯನ್ನೂ ಇಟ್ಟಿರಲಿಲ್ಲ, ತನ್ನ ಗಮನವೆಲ್ಲ ಉಳಿದಿರುವ ಮೂರೂವರೆ ವರ್ಷಗಳಲ್ಲಿ ಚನ್ನಪಟ್ಟಣದ ಅಭಿವೃದ್ಧಿಯ ಮೇಲೆ ನೆಟ್ಟಿದೆ, ಉಪ ಮುಖ್ಯಮಂತ್ರಿವರು ರಾಮನಗರ ಜಿಲ್ಲೆಯವರಾಗಿರುವುದು ತಮಗೆ ದೊಡ್ಡ ಬಲ, ಜಿಲ್ಲೆಯವರೇ ಆಗಿರುವ ಹೆಚ್ ಸಿ ಬಾಲಕೃಷ್ಣ ಅವರು ಕಾಂಗ್ರೆಸ್ನಲ್ಲಿ ತನಗಿಂತ ಸೀನಿಯರ್ ಲೀಡರ್ ಅಗಿದ್ದಾರೆ, ಅವರಿಗೆ ಸಚಿವ ಸ್ಥಾನ ಸಿಕ್ಕರೂ ಸಂತೋಷ, ಒಟ್ಟಾಗಿ ರಾಮನಗರ ಜಿಲ್ಲೆಯ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇವೆ ಎಂದು ಸಿಪಿ ಯೋಗೇಶ್ವರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹೊಸ ಶಾಸಕನ ಮುಂದಿವೆ ಹಲವು ಸವಾಲು, ಜನರ ನಿರೀಕ್ಷೆಗೆ ಸ್ಪಂದಿಸುವರೇ ಯೋಗೇಶ್ವರ್?
Latest Videos