ನಬಾರ್ಡ್ ಸಾಲದ ಮೊತ್ತವನ್ನು ಎಲ್ಲ ರಾಜ್ಯಗಳಿಗೆ ಕಡಿಮೆ ಮಾಡಲಾಗಿದೆ ಅನ್ನೋದು ಕೇಂದ್ರದ ಸಮರ್ಥನೆ: ಸಿದ್ದರಾಮಯ್ಯ
ರೂ. 5 ಲಕ್ಷದವರೆಗ ಸಾಲವನ್ನು ರಾಜ್ಯಸರ್ಕಾರ ಬಡ್ಡಿರಹಿವಾಗಿ ನೀಡುತ್ತದೆ, ಅದು ನಿಂತುಬಿಟ್ಟರೆ ಕೃಷಿ ಉತ್ಪನ್ನ ಕಡಿಮೆಯಾಗಿ ರೈತರು ಕಂಗಾಲಾಗುತ್ತಾರೆ, ಸಾಲಕ್ಕಾಗಿ ಖಾಸಗಿ ಲೇವಾದೇವಿಯವರ ಮೊರೆ ಹೋಗಿ ಶೋಷಣೆಗೊಳಗಾಗುತ್ತಾರೆ, ನಬಾರ್ಡ್ ರಾಜ್ಯಕ್ಕೆ ನೀಡುವ ಸಾಲದ ಮೊತ್ತ ಹೆಚ್ಚಿಸದಿದ್ದರೆ ಅಂತಿಮವಾಗಿ ತೊಂದರೆ ಎದುರಿಸೋದು ರೈತಾಪಿ ಸಮುದಾಯ ಎಂದು ಸಿದ್ದರಾಮಯ್ಯ ಹೇಳಿದರು.
ದೆಹಲಿ: ನಬಾರ್ಡ್ ನಿಂದ ರಾಜ್ಯಕ್ಕೆ ಸಿಗುವ ಸಾಲದ ಮೊತ್ತ ಕಡಿಮೆಯಾಗಿರುವುದಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಕ್ಕಿದ್ದಂತೆ ಕೋಪಗೊಂಡು ನಂತರ ತಾಳ್ಮೆಯಿಂದ ಮಾತಾಡಿದರು. ನಬಾರ್ಡ್ ನಿಂದ ಸಿಗುತ್ತಿದ್ದ ಸಾಲದ ಮೊತ್ತವನ್ನು ಶೇಕಡ 58 ರಷ್ಟು ಕಡಿಮೆ ಮಾಡಿದ್ದಾರೆ, ಎಲ್ಲ ರಾಜ್ಯಗಳಿಗೂ ಕಡಿಮೆ ಮಾಡಿದ್ದೇವೆ, ಬೇರೆ ವಾಣಿಜ್ಯ ಬ್ಯಾಂಕ್ಗಳು ಸಾಲ ನೀಡುತ್ತವೆಯೆಲ್ಲ ಅನ್ನೋದು ಕೇಂದ್ರದ ವಾದ, ಆದರೆ ಇದರಿಂದ ಸಂಕಷ್ಟಕ್ಕೆ ಒಳಗಾಗೋರು ರೈತರು, ಅವರಿಗೆ ಬಡ್ಡಿರಹಿತ ಸಾಲ ಸಿಗದಂತಾಗುವ ಸ್ಥಿತಿ ಹಲವು ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮೋದಿ ಭೇಟಿಯಾದ ಸಿದ್ದರಾಮಯ್ಯ: ಪ್ರಧಾನಿ ಮುಂದೆ ಸಿಎಂ ಇಟ್ಟ ಬೇಡಿಕೆಗಳೇನು..?
Latest Videos
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

