ಅಂಗವಿಕಲರ ಅನುದಾನ ಗ್ಯಾರಂಟಿಗಳಿಗೆ ಬಳಕೆ: ಸರ್ಕಾರದ ವಿರುದ್ಧ ಮತ್ತೊಂದು ಆರೋಪ

ಅಂಗವಿಕಲರ ಅನುದಾನ ಗ್ಯಾರಂಟಿಗಳಿಗೆ ಬಳಕೆ: ಸರ್ಕಾರದ ವಿರುದ್ಧ ಮತ್ತೊಂದು ಆರೋಪ

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Nov 29, 2024 | 5:29 PM

ರಾಷ್ಟ್ರೀಯ ಅಂಧ ಚೇತನ ಫೆಡರೇಷನ್‌ನ ಕಾರ್ಯದರ್ಶಿ ಗೌತಮ್ ಅಗರ್ವಾಲ್ ಅವರು ಸರ್ಕಾರದ ವಿರುದ್ಧ ಅಂಗವಿಕಲರ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಕಳೆದ ವರ್ಷ 54 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದರೆ, ಈ ವರ್ಷ ಕೇವಲ 10 ಕೋಟಿ ರೂ. ಮಾತ್ರ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು, ನವೆಂಬರ್​ 29: ಗ್ಯಾರಂಟಿ ಯೋಜನೆಗೆ (Guarantee Schemes) ಅಂಗವಿಕಲರ ಅನುದಾನ ಬಳಕೆ ಮಾಡುತ್ತಿದ್ದಾರೆ ಎಂದು ರಾಷ್ಟ್ರೀಯ ಅಂಧ ಚೇತನ ಫೆಡರೇಷನ್ ಕಾರ್ಯದರ್ಶಿ ಗೌತಮ್ ಅಗರ್ವಾಲ್ ಆರೋಪ ಮಾಡಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಸರ್ಕಾರ ಅಂಗವಿಕಲರಿಗೆ ಶೇ 80 ರಷ್ಟು ಹಣ ಕಡಿತ ಮಾಡಿದೆ. ರಾಜ್ಯ ಸರ್ಕಾರ ಅಂಧರ ಕಾರ್ಯಕ್ರಮಕ್ಕೆ ಕಳೆದ ವರ್ಷ ಬಜೆಟ್‌ನಲ್ಲಿ 54 ಕೋಟಿ ರೂ. ಹಣ ಮೀಸಲಿಟ್ಟಿತ್ತು. ಈ ವರ್ಷ ಕೇವಲ 10 ಕೋಟಿ ರೂ. ಮಾತ್ರ ಅನುದಾನ ನೀಡಲಾಗಿದೆ. ಬಾಕಿ ಹಣವನ್ನ ಗ್ಯಾರಂಟಿ ಯೋಜನೆಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.