ದಿಢೀರನೆ ಎಮ್ಮೆಲ್ಸಿ ಬಿಕೆ ಹರಿಪ್ರಸಾದ್ ಮನೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ವಿಧಾನ ಪರಿಷತ್ನಲ್ಲಿ ಆಡಳಿತ ಪಕ್ಷದ ನಾಯಕರಾಗಿರುವ ಹರಿಪ್ರಸಾದ್ ಹಿಂದೆ ಕರ್ನಾಟಕದಿಂದ ರಾಜ್ಯ ಸಭಾ ಸದಸ್ಯ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು. ಸೋನಿಯ ಗಾಂಧಿಯವರ ಆಪ್ತವಲಯದಲ್ಲಿ ಅವರು ಗುರುತಿಸಿಕೊಳ್ಳುತ್ತಾರೆ. ಸಿದ್ದರಾಮಯ್ಯ ಕೇವಲ ಎರಡೂವರೆ ಅವಧಿಗೆ ಸಿಎಂ ಅನ್ನೋದೇ ನಿಜವಾಗಿದ್ದರೆ, ಪ್ರಸಾದ್ ಅವರನ್ನು ಭೇಟಿಯಾಗುವುದು ಅನಿವಾರ್ಯವಾಗುತ್ತದೆ.
ಬೆಂಗಳೂರು, ಮೇ 29: ಇವತ್ತು ವಿಧಾನ ಪರಿಷತ್ ಸದಸ್ಯ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ (BK Hari Prasad) ಅವರ ಹುಟ್ಟುಹಬ್ಬವೇನೂ ಅಲ್ಲ. ಅದು ಇವತ್ತಿಗೆ ಸರಿಯಾಗಿ ಎರಡು ತಿಂಗಳು ನಂತರ ಇದೆ, ಅವರು ಹುಟ್ಟಿದ್ದು ಜುಲೈ 29ರಂದು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬೆಳಗ್ಗೆ ದಿಢೀರನೆ ಪ್ರಸಾದ್ ಮನೆಗೆ ಭೇಟಿ ನೀಡಿದರು. ತಮ್ಮ ಮನೆಯ ಮೆಟ್ಟಿಲುಗಳ ಮೇಲೆ ಬೋಕೆ ಹಿಡಿದು ನಿಂತಿದ್ದ ಪ್ರಸಾದ್ ಮುಖ್ಯಮಂತ್ರಿಯವರನ್ನು ಬರಮಾಡಿಕೊಂಡರು. ಸಾಮಾನ್ಯವಾಗಿ ಮುಖ್ಯಮಂತ್ರಿಯಾದವರು ಶಾಸಕರ, ಸಚಿವರ ಮನೆಗೆ ಹೋಗೋದಿಲ್ಲ, ಅವರೆಲ್ಲ ಸಿಎಂರನ್ನು ಕಾಣಲು ಅಪಾಯಿಂಟ್ಮೆಂಟ್ ತೆಗೆದುಕೊಂಡು ಬರುತ್ತಾರೆ. ಹಾಗಾಗಿ, ಸಿದ್ದರಾಮಯ್ಯ ಪ್ರಸಾದ ಮನೆಗೆ ಭೇಟಿ ನೀಡಿದ ಹಿಂದೆ ಗಹನವಾದ ಕಾರಣವಿದೆ.
ಇದನ್ನೂ ಓದಿ: ಚೀಫ್ ವಿಪ್ ಆಗಿರುವ ರವಿಕುಮಾರ್ ಕಲಬುರಗಿ ಡಿಸಿಯನ್ನು ಪಾಕಿಸ್ತಾನದವರು ಅನ್ನುತ್ತಾರೆ: ಸಿದ್ದರಾಮಯ್ಯ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ

