VIDEO: ಮೈದಾನದಲ್ಲೇ ಹೊಡೆದಾಟ… ಬಾಂಗ್ಲಾ ಆಟಗಾರನಿಗೆ ಪಂಚ್
ಈ ಪಂದ್ಯದ 2ನೇ ದಿನದಾಟದಂದು ಸೌತ್ ಆಫ್ರಿಕಾ ಆಟಗಾರ ತ್ಸೆಪೊ ನ್ಟುಲಿ ಮತ್ತು ಬಾಂಗ್ಲಾದೇಶದ ರಿಪನ್ ಮಂಡಲ್ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವಾಗ್ವಾದ ತಾರಕ್ಕೇರುತ್ತಿದ್ದಂತೆ ಮುನ್ನುಗ್ಗಿ ಬಂದ ತ್ಸೆಪೊ ನ್ಟುಲಿ ಬಾಂಗ್ಲಾ ಆಟಗಾರನ ಮೇಲೆ ಕೈ ಮಾಡಿದ್ದಾರೆ. ಇದೇ ವೇಳೆ ರಿಪನ್ ಮಂಡಲ್ ಕೂಡ ಹೊಡೆದಾಟಕ್ಕೆ ಇಳಿದಿದ್ದಾರೆ.
ಕ್ರಿಕೆಟ್ ಅಂಗಳದಲ್ಲಿ ಆಟಗಾರರು ಹೊಡೆದಾಡಿಕೊಂಡ ಅಹಿತಕರ ಘಟನೆಯೊಂದು ನಡೆದಿದೆ. ಬಾಂಗ್ಲಾದೇಶ್ನ ಢಾಕಾದ ಶೇರ್ ಬಾಂಗ್ಲಾ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಘಟನೆ ನಡೆದಿದ್ದು, ಈ ಪಂದ್ಯದಲ್ಲಿ ಸೌತ್ ಆಫ್ರಿಕಾ ಎಮರ್ಜಿಂಗ್ ಮತ್ತು ಬಾಂಗ್ಲಾದೇಶ್ ಎಮರ್ಜಿಂಗ್ ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದ 2ನೇ ದಿನದಾಟದಂದು ಸೌತ್ ಆಫ್ರಿಕಾ ಆಟಗಾರ ತ್ಸೆಪೊ ನ್ಟುಲಿ ಮತ್ತು ಬಾಂಗ್ಲಾದೇಶದ ರಿಪನ್ ಮಂಡಲ್ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವಾಗ್ವಾದ ತಾರಕ್ಕೇರುತ್ತಿದ್ದಂತೆ ಮುನ್ನುಗ್ಗಿ ಬಂದ ತ್ಸೆಪೊ ನ್ಟುಲಿ ಬಾಂಗ್ಲಾ ಆಟಗಾರನ ಮೇಲೆ ಕೈ ಮಾಡಿದ್ದಾರೆ. ಇದೇ ವೇಳೆ ರಿಪನ್ ಮಂಡಲ್ ಕೂಡ ಹೊಡೆದಾಟಕ್ಕೆ ಇಳಿದಿದ್ದಾರೆ. ಅಷ್ಟರಲ್ಲಿ ಅಂಪೈರ್ ಹಾಗೂ ಸಹ ಆಟಗಾರರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಸಿಗೊಳಿಸಿದರು. ಇದೀಗ ತ್ಸೆಪೊ ನ್ಟುಲಿ ಮತ್ತು ರಿಪನ್ ಮಂಡಲ್ ನಡುವಣ ಹೊಡೆದಾಟದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನು ಈ ಘಟನೆಯನ್ನು ಪಂದ್ಯದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದು, ಮ್ಯಾಚ್ ರೆಫರಿ ಪಂದ್ಯದ ವರದಿಯನ್ನು ಬಿಸಿಬಿ ಮತ್ತು ಸಿಎಸ್‌ಎ ಎರಡಕ್ಕೂ ಸಲ್ಲಿಸಿದ್ದಾರೆ. ಹೀಗಾಗಿ ಇಬ್ಬರು ಆಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

