World Theatre Day: ಅಂಕಪರದೆ; ‘ಮಧುರ ಮಂಡೋದರಿ’ ನೋಡಲು ಶಿರಸಿಗೆ ಬನ್ನಿ

Rape : ‘ಹಾಂ! ಹೇಳೋದು ಮರೆತಿದ್ದೆ. ಮದುವೆ ಅಂತ ನಿಶ್ಚಯ ಆದ ಮೇಲೆ ಒಂದು ವಿಚಾರದಲ್ಲಿ ತಲ್ಲಣಿಸಿ ಹೋಗಿದ್ದೆ. ನಿಮಗೆ ಗೊತ್ತಲ್ಲ, ಬಲಾತ್ಕಾರಗೊಂಡ ಹೆಣ್ಣು ನಾನು. ಇದರ ಬಗ್ಗೆ ಹುಡುಗನಿಗೆ ಗೊತ್ತಿಲ್ಲ. ಹೇಳುವುದಾ ಬೇಡವಾ?!’

World Theatre Day: ಅಂಕಪರದೆ; ‘ಮಧುರ ಮಂಡೋದರಿ’ ನೋಡಲು ಶಿರಸಿಗೆ ಬನ್ನಿ
Follow us
ಶ್ರೀದೇವಿ ಕಳಸದ
|

Updated on:Mar 27, 2022 | 10:41 AM

ಅಂಕಪರದೆ | Ankaparade : ಅತ್ಯಾಚಾರವೆಂಬುದು ಕ್ಷಣಿಕವಾಗಿ ನಡೆದುಬಿಡುವ ಅಚಾತುರ್ಯವಲ್ಲ, ಅದು ಹಂತಹಂತವಾಗಿ ಬೆಳೆಯುವ, ಬೆಳೆಸಲ್ಪಡುವ ಮನಸ್ಥಿತಿ. ಹೆಣ್ಣನ್ನು ಅಧೀನಲಿಂಗಿಯಾಗಿ ನೋಡುವ ಪಾಠ ಮನೆಯಂಗಳದಿಂದಲೇ ಆರಂಭವಾಗಿ, ನೆರೆಹೊರೆಯಲ್ಲಿ, ಶಾಲಾ ಪಠ್ಯಗಳಲ್ಲಿ, ಸಿನಿಮಾ– ಧಾರಾವಾಹಿಗಳಲ್ಲಿ, ಆರಾಧಿಸುವ ಹೀರೋಗಳ ನಡೆನುಡಿಯಲ್ಲಿ, ಮಾಧ್ಯಮಗಳಲ್ಲಿ, ರಾಜಕಾರಣಿಗಳ ಹೇಳಿಕೆಗಳಲ್ಲಿ ಕೊನೆಗೆ ಕೋರ್ಟುಗಳಲ್ಲಿ ಅತ್ಯಾಚಾರಿಯನ್ನೇ ಮದುವೆಯಾಗುವ ಪ್ರಸ್ತಾಪವಿಡುವ ನ್ಯಾಯಾಧೀಶರುಗಳವರೆಗೆ, ಸಮಾಜದವರೆಗೆ, ಎಲ್ಲೆಲ್ಲೂ ನಿರಂತರವಾಗಿ ಸಾಗುತ್ತಲೇ ಇರುತ್ತದೆ. ಇದು ಈಗಿನ ಕಥೆಯಲ್ಲ. ಪುರಾಣ ಇತಿಹಾಸಗಳ ಕಾಲದಿಂದಲೂ, ಮೊನ್ನೆಮೊನ್ನೆ ನಡೆದ ಎಳೆ ಹಸುಗೂಸಿನ ಮೇಲಿನ ಅತ್ಯಾಚಾರದವರೆಗೂ ನಮ್ಮ ನಡುವೆ ನಲುಗುವ ಎಷ್ಟೋ ಹೆಣ್ಣು ಹೃದಯಗಳಿವೆ. ಶ್ರೀವಿದ್ಯಾ ಕಾಮತ, ಲೇಖಕಿ

‘ಹಾಂ! ಹೇಳೋದು ಮರೆತಿದ್ದೆ. ಹೇಗೆ ಹೇಳೋದು ನಿಮಗೆ. ಮದುವೆ ಅಂತ ನಿಶ್ಚಯ ಆದ ಮೇಲೆ ಒಂದು ವಿಚಾರದಲ್ಲಿ ತಲ್ಲಣಿಸಿ ಹೋಗಿದ್ದೆ. ನಿಮಗೆ ಗೊತ್ತಲ್ಲ, ಬಲಾತ್ಕಾರಗೊಂಡ ಹೆಣ್ಣು ನಾನು. ಇದರ ಬಗ್ಗೆ ಹುಡುಗನಿಗೆ ಗೊತ್ತಿಲ್ಲ. ಹೇಳುವುದಾ ಬೇಡವಾ?!’

ಹೆಣ್ಣುಮಕ್ಕಳ ಅಸಹಾಯಕತೆ ಹಾಗೂ ಆಘಾತದಿಂದ ಅವರು ಹೊರಬಂದ ರೀತಿ ಇವುಗಳ ಸುತ್ತಲಿನ ಕಥೆಯೇ ಮಧುರ ಮಂಡೋದರಿ. ಅತ್ಯಾಚಾರದ ನಂತರ ಜೀವನ ಮುಗಿದಂತೇ? ಹೆಣ್ಣು ಸಮಾಜಕ್ಕೆ ಹೆದರಿ ಕತ್ತಲೆ ಸೇರಬೇಕಾ?

‘ಗಂಡಸು ತನ್ನ ಕಾಮತೃಷೆ ತೀರಿಸಿಕೊಳ್ಳಲು ಎಷ್ಟು ಕೆಳಮಟ್ಟಕ್ಕೆ ಇಳಿದುಬಿಡುತ್ತಾನೆ?! ರೂಪಾನ ಅಣ್ಣ ಮತ್ತವನ ಸ್ನೇಹಿತರು ನನ್ನ ಮೇಲೆ ಪೈಶಾಚಿಕ ಕೃತಿ ನಡೆಸಿದುದರ ಬಗ್ಗೆ ಅಪ್ಪನ ಹತ್ರ ಹೇಳೋಣ ಅಂತ ಓಡಿಓಡಿ ಹೋದೆ. ಮನೆಗಿನ್ನು ಬಂದಿರಲಿಲ್ಲ ಅಪ್ಪ. ಅಮ್ಮ ಜೊತೆಗಿಲ್ಲ. ಅತ್ತು ಅತ್ತು ಹಾಗೆಯೆ ಮಲಗಿಬಿಟ್ಟಿದ್ದೆ. ಅಪ್ಪ ಎಷ್ಟೊತ್ತಿಗೆ ಬಂದ್ರೋ ಗೊತ್ತಿಲ್ಲ. ನನಗೆ ಎಚ್ಚರವಾದಾಗ ಸೂರ್ಯ ಮೇಲೆದ್ದಿದ್ದ. ತಲೆ ಸಿಡೀತಿತ್ತು. ಅಪ್ಪನ ಹತ್ತಿರ ಎಲ್ಲವನ್ನು ಹೇಳುವ ಎಂದು ಓಡಿಹೋದೆ. ಹೊರಗಿನಿಂದಲೇ ಅಪ್ಪ… ಎಂದು ಕೂಗಿದೆ! ಏನು ಮಗಳೇ?! ಸ್ನಾನದ ಮನೆಯಿಂದ ಅವನ ದನಿ ಬಂದಿತ್ತು. ಜಗತ್ತಿನ ಅಷ್ಟೂ ಪ್ರೀತಿ ಕಾಳಜಿ ಅವನ ದನಿಯಲ್ಲಿತ್ತು ಅನಿಸಿತ್ತು. ಅಪ್ಪನಿಗೆ ಏನೂ ಹೇಳದಾದೆ.’

ಇದನ್ನೂ ಓದಿ : Theatre: ಅಂಕಪರದೆ; ‘ಸಮಷ್ಟಿ’ ಯಿಂದ ‘ ಮಿಸ್ ಸದಾರಮೆ’ ನಾಟಕದ 50ನೇ ಪ್ರಯೋಗ ರಂಗಶಂಕರದಲ್ಲಿ

ಅತ್ಯಾಚಾರಕ್ಕೊಳಗಾದ ಹೆಣ್ಣೊಬ್ಬಳು ಏನೆಲ್ಲಾ ಯೋಚಿಸಬಹುದು?! ಆಕೆಯ ಮನಸ್ಥಿತಿ ಎಂತಹುದಿರಬಹುದು.

ಪ್ರಸನ್ನ ಕುಮಾರ್ ಕೆರೆಗೋಡುರವರ ‘ಮಧುರ ಮಂಡೋದರಿ’ ನಾಟಕವನ್ನು ಯುವ ನಿರ್ದೇಶಕ ಮಧು ಮಳವಳ್ಳಿಯವರ ನಿರ್ದೇಶನದಲ್ಲಿ ವನಿತಾ ರಾಜೇಶ್ ಮನೋಜ್ಞ ಅಭಿನಯವಿದೆ. ಎಲ್ಲಕ್ಕೂ ಮಿಗಿಲಾಗಿ, ನಾಟಕಕ್ಕೆ ಸುಮಧುರವಾದ ಸಂಗೀತ ನಿರ್ದೇಶನ ಮಾಡಿರುವ ಸುಬ್ರಹ್ಮಣ್ಯ ಎಸ್. ಅವರ ಸಂಗೀತ ನೈಪುಣ್ಯತೆ, ಹೊಸ ಪೀಳಿಗೆಯೊಂದು ಕನ್ನಡ ರಂಗಭೂಮಿಯಲ್ಲಿ ಬೇರೂರುತ್ತಿರುವ ಬಗ್ಗೆ ಹೆಮ್ಮೆ ಮತ್ತು ವಿಶ್ವಾಸ ಮೂಡಿಸುತ್ತದೆ.

ಮೈಸೂರು, ಮಂಡ್ಯ, ಶಿವಮೊಗ್ಗ, ಬೆಂಗಳೂರು ಮುಂತಾದೆಡೆಗಳಲ್ಲಿ ಹಲವು ಯಶಸ್ವಿ ಪ್ರದರ್ಶನಗಳನ್ನು ಕಂಡಿರುವ ನಾಟಕ ಶಿರಸಿಯಲ್ಲಿದೆ.

ನಾಟಕ : ಮಧುರ ಮಂಡೋದರಿ ರಚನೆ : ಪ್ರಸನ್ನ ಕುಮಾರ್ ಕೆರೆಗೋಡು ನಿರ್ದೇಶನ : ಮಧು ಮಳವಳ್ಳಿ ತಂಡ : ರಂಗಬಂಡಿ ಸಂಗೀತ : ಸುಬ್ರಮಣ್ಯ ಎಸ್ ದಿನಾಂಕ : 28.3.2022 ಸಮಯ : ಸಂಜೆ 7ಕ್ಕೆ. ಸ್ಥಳ : ಶಂಕರಮಠ, ಸಿದ್ದಾಪುರ, ಶಿರಸಿ

ಗಮನಿಸಿ : ‘ಅಂಕಪರದೆ’ಯ ಮೂಲಕ ಕಲಾಸಕ್ತರನ್ನು ನೀವು ತಲುಪಲು ಬಯಸಿದಲ್ಲಿ ಪ್ರದರ್ಶನಕ್ಕೆ ಒಂದು ವಾರವಿರುವಾಗ ನಮಗೆ ತಿಳಿಸಿ. ಹಾಗೆಯೇ ಕಲಾಸಕ್ತರು, ಕಲಾತಜ್ಞರು, ಪ್ರದರ್ಶನ ಕಲೆಗಳಿಗೆ ಸಂಬಂಧಿಸಿದ ಯಾವುದೇ ವಿಷಯ, ವಿಚಾರ, ಒಳನೋಟಗಳನ್ನು ಹಂಚಿಕೊಳ್ಳಲು ನಮ್ಮನ್ನು ಸಂಪರ್ಕಿಸಿ :tv9kannadadigital@gmail.com

ಇದನ್ನೂ ಓದಿ : Yakshagana: ಅಂಕಪರದೆ; ಅತಿಕಾಯನೆದುರು ಇರುವವನು ರಾಮನೋ ಲಕ್ಷ್ಮಣನೋ? ಕ್ಲೈಮ್ಯಾಕ್ಸ್​ಗಾಗಿ ತುಮಕೂರಿಗೆ ಬನ್ನಿ 

Published On - 10:38 am, Sun, 27 March 22

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ