ಮೈಸೂರು: ಮನೆಯಿಂದ ಹೊರಗೆ ಹೋಗಿ ಕಾಣೆಯಾಗಿದ್ದ ಅಜ್ಜಿ ಪತ್ತೆ; ಪ್ರಕರಣ ಸುಖಾಂತ್ಯ

Mysuru: ಮರೆವಿನ ಸಮಸ್ಯೆಯಿಂದ ಬಳಲುತ್ತಿದ್ದ ಕಮಲಮ್ಮ ಮನೆಯ ದಾರಿ‌ ಮರೆತು ಹೋಗಿರುವ ಶಂಕೆ ವ್ಯಕ್ತವಾಗಿದೆ. ಅಜ್ಜಿ ಕಾಣಿಸಿದರೆ ಅವರ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ. ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮೈಸೂರು: ಮನೆಯಿಂದ ಹೊರಗೆ ಹೋಗಿ ಕಾಣೆಯಾಗಿದ್ದ ಅಜ್ಜಿ ಪತ್ತೆ; ಪ್ರಕರಣ ಸುಖಾಂತ್ಯ
ಮರೆವಿನ ಸಮಸ್ಯೆಯಿಂದ ಬಳಲುತ್ತಿದ್ದ ಅಜ್ಜಿ
Edited By:

Updated on: Jan 30, 2022 | 10:59 PM

ಮೈಸೂರು: ಮನೆಯಿಂದ ಹೊರಗೆ ಹೋದ ಅಜ್ಜಿ ನಾಪತ್ತೆಯಾದ ಘಟನೆ ಕುವೆಂಪುನಗರ ವಿಜಯ ಬ್ಯಾಂಕ್ ವೃತ್ತದ ಬಳಿಯ ರಾಘವೇಂದ್ರ ಚೌಲ್ಟ್ರಿ ಸಮೀಪ ನಡೆದಿತ್ತು. ಮೈಸೂರಿನ ಕುವೆಂಪುನಗರ ವಿಜಯ ಬ್ಯಾಂಕ್ ವೃತ್ತದ ಬಳಿಯ ರಾಘವೇಂದ್ರ ಚೌಲ್ಟ್ರಿ ಸಮೀಪದಿಂದ ಕಮಲಮ್ಮ (80) ಅಜ್ಜಿ ನಾಪತ್ತೆ ಆಗಿದ್ದರು. ಇದೀಗ ಈ ಪ್ರಕರಣ ಸುಖಾಂತ್ಯವಾಗಿದೆ. ನಾಪತ್ತೆಯಾಗಿರುವ ಅಜ್ಜಿ ಕಮಲಮ್ಮ ಪತ್ತೆ ಆಗಿದ್ದಾರೆ.

ಮರೆವಿನ ಸಮಸ್ಯೆಯಿಂದ ಬಳಲುತ್ತಿದ್ದ ಕಮಲಮ್ಮ ಮನೆಯ ದಾರಿ‌ ಮರೆತು ಹೋಗಿರುವ ಶಂಕೆ ವ್ಯಕ್ತವಾಗಿತ್ತು. ಅಜ್ಜಿ ಕಾಣಿಸಿದರೆ ಅವರ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿತ್ತು. ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಇದೀಗ ಅಜ್ಜಿ ಪತ್ತೆ ಆಗಿದ್ದು ಪ್ರಕರಣ ಸುಖಾಂತ್ಯ ಕಂಡಿದೆ.

ಅಜ್ಜಿ ಸಿಕ್ಕಿದ್ದಾರೆ. ಮನೆಗೆ ಮರಳಿದ್ದಾರೆ. ಅಜ್ಜಿ ಕಮಲಮ್ಮ ಆರೋಗ್ಯವಾಗಿ ಇದ್ದಾರೆ. ಖುಷಿಯಾಗಿದ್ದಾರೆ ಎಂದು ಅಜ್ಜಿ ಪತ್ತೆ ಆದ ಬಳಿಕ ಕುಟುಂಬದವರು ಸಂತಸ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಮೈಸೂರು ಬಳಿಕ ಬೆಂಗಳೂರಿನಲ್ಲಿಯೂ ನಕಲಿ ತುಪ್ಪ ಪತ್ತೆ; ಕೆಎಂಎಫ್ ಅಧಿಕಾರಿಗಳಿಂದ ಪರಿಶೀಲನೆ

ಇದನ್ನೂ ಓದಿ: ಮೈಸೂರು ಅಭಿವೃದ್ಧಿ ಮಾಡಿದ್ದು ನಾನು, ನಾನು, ನಾನು! ಮೈಸೂರು ಮಹಾರಾಜರನ್ನು ಬಿಟ್ಟರೆ ನೆಕ್ಸ್ಟ್​​ ನಾನೇ: ಮೈಸೂರು ಶಾಸಕರಿಗೆ ಸಿಂಹ ಸವಾಲು

Published On - 10:04 pm, Sun, 30 January 22