ಮೈಸೂರು ದಸರಾ: ಬಸ್ ಫ್ರೀ ಇರುವುದರಿಂದ ದಸರಾ ಕಣ್ತುಂಬಿಕೊಳ್ಳಲು ಹೆಚ್ಚು ಜನ ಬರುವ ನಿರೀಕ್ಷೆ, ಹೆಚ್ಚುವರಿ ಬಸ್ ಬಿಟ್ಟ ಕೆಎಸ್​ಆರ್​ಟಿಸಿ

| Updated By: Digi Tech Desk

Updated on: Oct 13, 2023 | 12:45 PM

ಉಚಿತ ಪ್ರಯಾಣದ ಕಾರಣ ಬಸ್​​ಗಳಲ್ಲಿ ಜನದಟ್ಟಣೆ ಹೆಚ್ಚಲಿದೆ. ಸದ್ಯ ಕಾರ್ಯನಿರ್ವಹಿಸುತ್ತಿರುವ 1,000 ಕ್ಕೂ ಹೆಚ್ಚಿನ ಬಸ್‌ಗಳ ಜೊತೆಗೆ, ಜನದಟ್ಟಣೆಯನ್ನು ನಿಯಂತ್ರಿಸಲು ಹೆಚ್ಚುವರಿ 350 ಬಸ್‌ಗಳನ್ನು ಓಡಿಸುತ್ತೇವೆ. ಬೇಡಿಕೆ ಹೆಚ್ಚಾದರೆ ಬೇರೆ ಜಿಲ್ಲೆಗಳ ಡಿಪೋಗಳಿಂದ ಬಸ್ಸುಗಳನ್ನು ತರಬೇಕಾಗಬಹುದು. ದಸರಾ ದಟ್ಟಣೆಯನ್ನು ನಿರ್ವಹಿಸಲು ವಿಭಾಗವು ಸಂಪೂರ್ಣ ಸನ್ನದ್ಧವಾಗಿದೆ" ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಶ್ರೀನಿವಾಸ್ ಹೇಳಿದರು.

ಮೈಸೂರು ದಸರಾ: ಬಸ್ ಫ್ರೀ ಇರುವುದರಿಂದ ದಸರಾ ಕಣ್ತುಂಬಿಕೊಳ್ಳಲು ಹೆಚ್ಚು ಜನ ಬರುವ ನಿರೀಕ್ಷೆ, ಹೆಚ್ಚುವರಿ ಬಸ್ ಬಿಟ್ಟ ಕೆಎಸ್​ಆರ್​ಟಿಸಿ
ಕೆಎಸ್​ಆರ್​ಟಿಸಿ
Follow us on

ಮೈಸೂರು ಅ.11: ದಸರಾ ಸಂಭ್ರಮ (Mysore Dasara 2023) ಆಚರಣೆಗೆ ಸಾಂಸ್ಕೃತಿಕ ನಗರಿ ಮದುವಣಗಿತ್ತಿಯಂತೆ ಸಜ್ಜಾಗಿದೆ. ಭಾನುವಾರ (ಅ.15) ನಾಡಹಬ್ಬ ದಸರಾ ಆಚರಣೆಗೆ ಚಾಲನೆ ದೊರೆಯಲಿದೆ. ರಾಜ್ಯ ಕಾಂಗ್ರೆಸ್ (Congress)​ ಸರ್ಕಾರ ಶಕ್ತಿ ಯೋಜನೆ (Shakti Yojana) ಜಾರಿ ಮಾಡಿದ್ದು, ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ದಸರಾ ವೀಕ್ಷಣೆಗೆ ಬರುವ ಸಾಧ್ಯತೆ ಇದೆ. ಈ ಹಿನ್ನೆಲಯಲ್ಲಿ ಮೈಸೂರಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಅಧಿಕ ಬಸ್​ಗಳನ್ನು ರಸ್ತೆಗೆ ಇಳಿಸಲು ನಿರ್ಧರಿಸಿದೆ.

ಶಕ್ತಿಯೋಜನೆ ಜಾರಿಯಾದಾಗಿನಿಂದ ಪ್ರತಿದಿನ ಒಟ್ಟು 3.75 ಲಕ್ಷ ಜನರು ಪ್ರಯಾಣಿಸುತ್ತಿದ್ದಾರೆ. ಈ ಸಂಖ್ಯೆ ಐದು ಲಕ್ಷಕ್ಕೆ ತಲುಪಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಮತ್ತು ಸಾರ್ವಜನಿಕರ ಮನವಿ ಮೇರೆಗೆ ಮೈಸೂರು ಕೆಎಸ್‌ಆರ್‌ಟಿಸಿ ವಿಭಾಗವು ಅಕ್ಟೋಬರ್ 15 ರಿಂದ ತಿಂಗಳಾಂತ್ಯದವರೆಗೆ ಸುಮಾರು 350 ಹೆಚ್ಚುವರಿ ಬಸ್‌ಗಳನ್ನು ಬಿಡಲಿದೆ.

“ಉಚಿತ ಪ್ರಯಾಣದ ಕಾರಣ ಬಸ್​​ಗಳಲ್ಲಿ ಜನದಟ್ಟಣೆ ಹೆಚ್ಚಲಿದೆ. ಸದ್ಯ ಕಾರ್ಯನಿರ್ವಹಿಸುತ್ತಿರುವ 1,000 ಕ್ಕೂ ಹೆಚ್ಚಿನ ಬಸ್‌ಗಳ ಜೊತೆಗೆ, ಜನದಟ್ಟಣೆಯನ್ನು ನಿಯಂತ್ರಿಸಲು ಹೆಚ್ಚುವರಿ 350 ಬಸ್‌ಗಳನ್ನು ಓಡಿಸುತ್ತೇವೆ. ಬೇಡಿಕೆ ಹೆಚ್ಚಾದರೆ ಬೇರೆ ಜಿಲ್ಲೆಗಳ ಡಿಪೋಗಳಿಂದ ಬಸ್ಸುಗಳನ್ನು ತರಬೇಕಾಗಬಹುದು. ದಸರಾ ದಟ್ಟಣೆಯನ್ನು ನಿರ್ವಹಿಸಲು ವಿಭಾಗವು ಸಂಪೂರ್ಣ ಸನ್ನದ್ಧವಾಗಿದೆ” ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಶ್ರೀನಿವಾಸ್ ಹೇಳಿದರು.

ಇದನ್ನೂ ಓದಿ: 5 ವರ್ಷದ ಬಳಿಕ ದಸರಾ ಏರ್​ ಶೋ: ಸಮಯ, ದಿನಾಂಕ, ಸ್ಥಳದ ಬಗ್ಗೆ ಮಾಹಿತಿ ನೀಡಿದ ಮೈಸೂರು ಜಿಲ್ಲಾಧಿಕಾರಿ

ರಾಜಹಂಸ, ಐರಾವತ ಸೇರಿದಂತೆ ಎಲ್ಲ ರೀತಿಯ ಹೆಚ್ಚುವರಿ ಬಸ್‌ಗಳನ್ನು ಓಡಿಸಲು ನೆರೆಯ ಜಿಲ್ಲೆಗಳಿಂದ ಹೆಚ್ಚುವರಿ ಚಾಲಕರು ಮತ್ತು ಕಂಡಕ್ಟರ್‌ಗಳನ್ನು ನಿಯೋಜಿಸಲಾಗುತ್ತಿದೆ. ಶಕ್ತಿ ಯೋಜನೆಯಿಂದಾಗಿ ಜನದಟ್ಟಣೆ ಹೆಚ್ಚಲಿದೆ. ಪ್ರತಿ ವರ್ಷ ದಸರಾ ಸಮಯದಲ್ಲಿ ಮೈಸೂರು ವಿಭಾಗವು ಮಂಡ್ಯ ಮತ್ತು ಚಾಮರಾಜನಗರ ಕೆಎಸ್‌ಆರ್‌ಟಿಸಿ ವಿಭಾಗಗಳ ಸಹಾಯದೊಂದಿಗೆ ಬಸ್​ಗಳ ಸಂಖ್ಯೆ ಹೆಚ್ಚಿಸಿಕೊಳ್ಳುತ್ತದೆ.​

ಈ ವರ್ಷ ಶಕ್ತಿ ಯೋಜನೆಯಿಂದ ಅಧಿಕ ಸಂಖ್ಯೆಯಲ್ಲಿ ಜನರು ದಸರಾ ವೀಕ್ಷಣೆಗೆ ಬರಲಿದ್ದಾರೆ. ಹೀಗಾಗಿ ಮೈಸೂರು ವಿಭಾಗವು ಮಂಡ್ಯ ಮತ್ತು ಚಾಮರಾಜನಗರ ಸೇರಿಂದಂತೆ ಹಾಸನ ಮತ್ತು ಚಿಕ್ಕಮಗಳೂರು ವಿಭಾಗಗಳಿಂದಲೂ ಬಸ್​ಗಳನ್ನು ತರಿಸಲು ಮುಂದಾಗಿದೆ. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ದೈನಂದಿನ ಪ್ರಯಾಣಿಕರ ಸಖ್ಯೆ 3.75 ರಿಂದ 3.80 ಲಕ್ಷ ಇತ್ತು. ಆದಾಗ್ಯೂ, ಸೆಪ್ಟೆಂಬರ್‌ನಲ್ಲಿ, ದೈನಂದಿನ 3.55 ಲಕ್ಷ ಜನರು ಪ್ರಯಾಣಿಸುವ ಮೂಲಕ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ.

ಮೈಸೂರು ವಿಭಾಗವು ಬೆಂಗಳೂರಿಗೆ ಮಾತ್ರ ಐಷಾರಾಮಿ ಮತ್ತು ಪ್ರೀಮಿಯಂ ಸೇವೆಗಳನ್ನು ಒಳಗೊಂಡಂತೆ ಸುಮಾರು 300 ಟ್ರಿಪ್‌ಗಳನ್ನು ನಡೆಸುತ್ತದೆ. ಮೈಸೂರು ದಸರಾ ವೇಳೆ ಬಸ್​​ ವೇಳಾಪಟ್ಟಿ ಹೆಚ್ಚಾಗಲಿದೆ. ವಿಭಾಗವು ಒಂಬತ್ತು ಡಿಪೋಗಳನ್ನು ಹೊಂದಿದೆ. ಪ್ರಯಾಣಿಕರ ಹೊರೆಯು ಶೇ100 ರಷ್ಟು ದಾಟುವುದರಿಂದ ಇಂಟರ್​-ಸಿಟಿ ಸೇವೆಗಳನ್ನು ನಿರ್ವಹಿಸುವುದು ವಿಭಾಗಕ್ಕೆ ಸವಾಲಾಗಿದೆ. ದಸರಾ ಸಂದರ್ಭದಲ್ಲಿ ನಗರ ಬಸ್ ನಿಲ್ದಾಣವು ಚಾಮುಂಡಿ ಬೆಟ್ಟ ಮತ್ತು ಬೃಂದಾವನ ಉದ್ಯಾನವನಗಳಿಗೆ ದಾಖಲೆಯ ದಟ್ಟಣೆಗೆ ಸಾಕ್ಷಿಯಾಗಲಿದೆ. ಪ್ರವಾಸಿ ತಾಣಗಳಿಗೆ ಬಸ್‌ಗಳು ಸಾಮಾನ್ಯವಾಗಿ ತುಂಬಿರುತ್ತವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:42 am, Fri, 13 October 23