ಜಾವಾ ಹವಾ, ಅರಮನೆಯಂಗಳದಲ್ಲಿ ರಂಗೋಲಿಯ ಚಿತ್ತಾರ: ಮೈಸೂರು ದಸರಾ 2ನೇ ದಿನ ಕಲರ್ ಫುಲ್

|

Updated on: Oct 04, 2024 | 9:53 PM

ದಸರಾ ಮಹೋತ್ಸವ ಸಂಭ್ರಮ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದೂ ಕೂಡ ಹತ್ತು-ಹಲವು ಕಾರ್ಯಕ್ರಮಗಳು ಮೇಳೈಸಿವೆ. ಪಾರಂಪರಿಕ ಜಾವಾ ಮೋಟಾರ್ ರೈಡ್, ರಂಗೋಲಿ ಸ್ಪರ್ಧೆ ಹಾಗೂ ಮಕ್ಕಳ ದಸರಾ ಕಾರ್ಯಕ್ರಮಗಳಿಗೆ ಇಂದು ಚಾಲನೆ ದೊರೆತಿದ್ದು, ದಸರಾ ಸಂಭ್ರಮದಲ್ಲಿ ಮಹಿಳೆಯರು ಭಾಗಿಯಾಗಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಜಾವಾ ಹವಾ, ಅರಮನೆಯಂಗಳದಲ್ಲಿ ರಂಗೋಲಿಯ ಚಿತ್ತಾರ: ಮೈಸೂರು ದಸರಾ 2ನೇ ದಿನ ಕಲರ್ ಫುಲ್
ಜಾವಾ ಹವಾ, ಅರಮನೆಯಂಗಳದಲ್ಲಿ ರಂಗೋಲಿಯ ಚಿತ್ತಾರ
Follow us on

ಮೈಸೂರು, ಅ.04: ವಿಶ್ವವಿಖ್ಯಾತ ಮೈಸೂರು ದಸರಾ(Mysore Dasara) ಮಹೋತ್ಸವ ಸಂಭ್ರಮ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದೂ ಕೂಡ ಹತ್ತು-ಹಲವು ಕಾರ್ಯಕ್ರಮಗಳು ಮೇಳೈಸಿವೆ. ಪಾರಂಪರಿಕ ಜಾವಾ ಮೋಟಾರ್ ರೈಡ್, ರಂಗೋಲಿ ಸ್ಪರ್ಧೆ ಹಾಗೂ ಮಕ್ಕಳ ದಸರಾ ಕಾರ್ಯಕ್ರಮಗಳಿಗೆ ಇಂದು ಚಾಲನೆ ದೊರೆತಿದ್ದು, ದಸರಾ ಸಂಭ್ರಮದಲ್ಲಿ ಮಹಿಳೆಯರು ಭಾಗಿಯಾಗಿ ಸಂತಸ ವ್ಯಕ್ತಪಡಿಸಿದ್ದಾರೆ.

ದಸರಾ ಮಹೋತ್ಸವದ ಎರಡನೇ ದಿನವಾದ ಇಂದು ಹಲವು ಕಾರ್ಯಕ್ರಮಗಳಿಗೆ ಚಾಲನೆ ದೊರತಿದೆ. ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಿಂದ ಜಾವಾ ಮೋಟಾರ್ ಬೈಕ್ ರೈಡ್ ಆಯೋಜನೆ ಮಾಡಲಾಗಿತ್ತು. ಜನಸಾಮಾನ್ಯರಿಗೆ ಹಾಗೂ ಪ್ರವಾಸಿಗರಿಗೆ ನಗರದ ಪಾರಂಪರಿಕ ಕಟ್ಟಡಗಳ ಪರಿಚಯ ಮಾಡಿಕೊಡುತ್ತಾ ಜಾವ ಬೈಕ್​ಗಳಲ್ಲಿ ಸವಾರಿ ಮಾಡಿದರು. ನಗರದ ಟೌನ್ ಹಾಲ್ ವೃತ್ತದಿಂದ ಪ್ರಾರಂಭಗೊಂಡ ಜಾವಾ ರೈಡ್​, 80 ಕ್ಕೂ ಹೆಚ್ಚು ಬೈಕ್​ಗಳು ಭಾಗಿಯಾಗಿ ನಗರದ ಪ್ರಮುಖ ಪಾರಂಪರಿಕ ಕಟ್ಟಡಗಳ ಮುಂದೆ ಸಂಚಾರ ಮಾಡಲಾಯಿತು.

ಇದನ್ನೂ ಓದಿ:ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ

ಇನ್ನು ಮಹಿಳಾ ಮತ್ತು ಮಕ್ಕಳ ದಸರಾ ಸಮಿತಿ ವತಿಯಿಂದ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಕಲರ್‌ಫುಲ್ ರಂಗೋಲಿಗಳು ದಸರಾಗೆ ಮೆರಗು ನೀಡಿದವು. ರಂಗೋಲಿ ಸ್ಪರ್ಧೆಯಲ್ಲಿ 100ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗಿಯಾಗಿದ್ದು, ದುರ್ಗಿ, ಗಣೇಶ, ನವಿಲು, ಅರ್ಜುನ ಆನೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಸೇರಿ ಹತ್ತು ಹಲವು ಚಿತ್ರಗಳು ರಂಗೋಲಿಯಲ್ಲಿ ಮೂಡಿಬಂದವು.

ಮಕ್ಕಳ ದಸರಾ ಹಿನ್ನೆಲೆಯಲ್ಲಿ ನಡೆದ ಕಲಾಥಾನ್ ಆಕರ್ಷಣೆಯಾಗಿತ್ತು. ಕೋಟೆ ಆಂಜನೇಯಸ್ವಾಮಿ ದೇಗುಲದ ಮುಂಭಾಗ ಕಲಾಥಾನ್ ಚಾಲನೆ ಸಿಕ್ಕಿತು. ಮೈಸೂರು ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳು ಭಾಗಿಯಾಗಿ ಹತ್ತು ಹಲವು ಕಲೆಗಳ ಪ್ರದರ್ಶನ ನೀಡುತ್ತಾ ಮಕ್ಕಳು ಸಾಗಿದರು. ಡೊಳ್ಳು ಕುಣಿತ, ಪೂಜಾ ಕುಣಿತ, ಕಂಸಾಳೆ, ತಮಟೆ, ನಗಾರಿ,‌ ವೀರಗಾಸೆ ಕೋಲಾಟ ಸೇರಿದಂತೆ ಹಲವು ಕಲೆಗಳ‌ ಪ್ರದರ್ಶನ ಮಾಡಿದ್ರು.ನಮ್ಮ ಸಂಸ್ಕೃತಿ, ಪರಂಪರೆ ಬಿಂಬಿಸುವ ವೇಷ ಭೂಷಣ ತೊಟ್ಟು ಚಿಣ್ಣರ ಹೆಜ್ಜೆ. ಸಾಹಿತಿಗಳು, ಸಂತರು, ಮಹನೀಯರು ಭಾವಚಿತ್ರಗಳನ್ನ ಹಿಡಿದು ಮಕ್ಕಳು ಸಾಗಿದರು.

ಒಟ್ಟಾರೆ ದಸರಾ ಮಹೋತ್ಸವದ ಎರಡನೇ ದಿನವೂ ವಿವಿಧ ಕಾರ್ಯಕ್ರಮಗಳು ಪ್ರವಾಸಿಗರ ಗಮನಸೆಳೆದಿವೆ. ಮಹಿಳೆಯರು ಹಾಗೂ‌ ಮಕ್ಕಳು ದಸರಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಎಂಜಾಯ್ ಮಾಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ