Mysore Jamboo Savari 2023 Highlights: ನವರಾತ್ರಿಯ ಒಂಬತ್ತು ದಿನಗಳ ನಂತರ ಬರುವುದು ವಿಜಯದಶಮಿ (Vijayadashami). ಈ ವಿಜಯದಶಮಿಯನ್ನು ಕರ್ನಾಟಕದಲ್ಲಿ ದಸರಾ (Dasara) ಎಂದು ಕರೆಯುತ್ತಾರೆ. ನಾಡಹಬ್ಬ ದಸರಾವನ್ನು ರಾಜ್ಯಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದೇವಸ್ಥಾನ, ಮನೆಗಳಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ಇನ್ನು ಮೈಸೂರಿನಲ್ಲಿ ದಸರಾ ಹಬ್ಬವನ್ನು ವೈಭವಪೂರಿತವಾಗಿ ಆಚರಿಸಲಾಗುತ್ತಿದೆ. ಕಳೆದ 9 ದಿನಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅರಮನೆಯಲ್ಲಿ ಖಾಸಗಿ ದರ್ಬಾರ ನಡೆಯಿತು. ಚಾಮುಂಡೇಶ್ವರಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ದೇವಿ ವಿಶೇಷ ಅಲಂಕಾರ ಮಾಡಿ ಪೂಜಿಸಲಾಗುತ್ತಿದೆ. ಇಂದು ವಿಜಯದಶಮಿ ಅಥವಾ ದಸರಾ ನಿಮಿತ್ತ ಮೈಸೂರಿನಲ್ಲಿ ಜಂಬೂಸವಾರಿ ನಡೆಯುತ್ತಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯನವರು ಚಾಲನೆ ನೀಡಿದ್ದಾರೆ. ಪರಂಪರಾಗತವಾಗಿ ಈ ಜಂಬೂಸವಾರಿ ನಡೆದುಕೊಂಡು ಬಂದಿದೆ. ಹಿಂದೆ ಮೈಸೂರಿನ ದೊರೆಗಳು ಜಂಬೂಸವಾರಿ ನಡೆಸುತ್ತಿದ್ದರು. ಆನೆಯ ಮೇಲೆ ಅಂಬಾರಿ ಕೂರಿಸಿ, ಅದರೊಳಗೆ ರಾಜರು ಕುಳಿತು ನಗರದಾದ್ಯಂತ ಮೆರವಣಿಗೆ ಹೋಗುತ್ತಿದ್ದರು. ಕಾಲಾನಂತರ ಪ್ರಜಾಪ್ರಭುತ್ವ ಜಾರಿಗೆ ಬಂದು ಕರ್ನಾಟಕ ರಾಜ್ಯ ಉದಯಿಸಿದ ನಂತರ ಸರ್ಕಾರ ರಚನೆಯಾಯಿತು. ಈಗ ರಾಜ್ಯ ಸರ್ಕಾರದವತಿಯಿಂದ ಮೈಸೂರು ದಸರಾವನ್ನು ಆಚರಿಸಲಾಗುತ್ತದೆ. ಇಂದು ಜಂಬೂಸವಾರಿ ನಡೆಯಲಿದ್ದು, ಈ ಕುರಿತಾದ ಲೇಟೆಸ್ಟ್ ಅಪ್ಡೇಟ್ಸ್ ಟಿವಿ9 ಡಿಜಿಟಲ್ನಲ್ಲಿ….
ಮೈಸೂರು: ಅ.15ರಂದು ನಾದಬ್ರಹ್ಮ ಹಂಸಲೇಖ ಅವರು ಚಾಮುಂಡಿಬೆಟ್ಟದಲ್ಲಿ ದಸರಾಗೆ ಚಾಲನೆ ನೀಡಿದ್ದರು. ಇಂದು 2023ನೇ ಸಾಲಿನ ಮೈಸೂರು ದಸರಾಗೆ ಟಾರ್ಚ್ಲೈಟ್ ಪರೇಡ್ ಮೂಲಕ ತೆರೆ ಎಳೆಯಲಾಯಿತು. ಬನ್ನಿಮಂಟಪದ ಮೈದಾನದಲ್ಲಿ ನಡೆದ ಪಂಜಿನ ಕವಾಯತು ಪರೇಡ್ನಲ್ಲಿ ಪೊಲೀಸ್ ಪ್ರಶಿಕ್ಷಣಾರ್ಥಿಗಳಿಂದ ಆಕರ್ಷಕ ಪಂಜಿನ ಕವಾಯತು ನಡೆದಿದ್ದು, ಪಂಜು ಹಿಡಿದು ಆಕರ್ಷಕ ಆಕೃತಿ ಮೂಡಿಸಿದರು.
ಮೈಸೂರು: ಬನ್ನಿಮಂಟಪ ಮೈದಾನದಲ್ಲಿ ಪಂಜಿನ ಕವಾಯತು ನಡೆಯುತ್ತಿದ್ದು, ಟಾರ್ಚ್ಲೈಟ್ , ಸಿಎಆರ್, ಡಿಎಆರ್, ಕಮಾಂಡೋ ಪೊಲೀಸ್, ಪೊಲೀಸ್ ಬ್ಯಾಂಡ್, ಅಶ್ವಾರೋಹಿ ದಳ, ಪೊಲೀಸ್ ಪಡೆಗಳಿಂದ ಆಕರ್ಷಕ ಪಥಸಂಚಲನ ನಡೆಸಿದವು. ಪೊಲೀಸ್ ಪ್ರಶಿಕ್ಷಣಾರ್ಥಿಗಳಿಂದ ಆಕರ್ಷಕ ಪಂಜಿನ ಕವಾಯತು ನಡೆಯಿತು.
ಮೈಸೂರು: ಬನ್ನಿಮಂಟಪದ ಮೈದಾನದಲ್ಲಿ ಪಂಜಿನ ಕವಾಯತು ಏರ್ಪಡಿಸಲಾಗಿದ್ದು, ಪೊಲೀಸ್ ಇಲಾಖೆಯಿಂದ ಸಾಹಸ ಕ್ರೀಡೆಗಳ ಪ್ರದರ್ಶನ ಕಾರ್ಯಕ್ರಮ ನಡೆಯುತ್ತಿದೆ. ಡ್ರೋನ್ ಲೈಟ್, ಬೈಕ್ ಸ್ಟಂಟ್ಸ್, ಕುದುರೆ ಸವಾರಿ, ಪಂಜಿನ ಕವಾಯತು
ಟೆಂಟ್ ಪೆಗ್ಗಿಂಗ್, ಲೇಸರ್ ಲೈಟ್ ಸೇರಿ ಅನೇಕ ಸಾಹಸ ಕ್ರೀಡೆಗಳ ಪ್ರದರ್ಶನವಾಗುತ್ತಿದೆ.
ಮೈಸೂರು: ಸಂಜೆ 5.09ಕ್ಕೆ ಅರಮನೆ ಮೈದಾನದಿಂದ ಬಂಬೂಸವಾರಿಗೆ ಚಾಲನೆ ನೀಡಲಾಗಿತ್ತು. ಇದೀಗ ಸಂಜೆ 7.25ಕ್ಕೆ ಜಂಬೂಸವಾರಿ ಮೆರವಣಿಗೆ ಬನ್ನಿಮಂಟಪ ತಲುಪಿದೆ. ಸತತ 4ನೇ ಬಾರಿ ‘ಅಭಿಮನ್ಯು’ ಯಶಸ್ವಿಯಾಗಿ ಅಂಬಾರಿ ಹೊತ್ತಿದೆ.
ಮೈಸೂರು:ಮೈಸೂರಿನಲ್ಲಿ ದಸರಾ ಜಂಬೂಸವಾರಿ ಮೆರವಣಿಗೆ ಅದ್ದೂರಿಯಾಗಿ ನಡೆಯುತ್ತಿದೆ. ಇದೀಗ ಜಂಬೂ ಸವಾರಿ ಹೈವೆ ಸರ್ಕಲ್ ತಲುಪಿದೆ. ಜಂಬೂಸವಾರಿಯಲ್ಲಿರುವ ಚಾಮುಂಡೇಶ್ವರಿ ವಿಗ್ರಹಕ್ಕೆ ಜನ ನಮಿಸುತ್ತಿದ್ದಾರೆ.
ಮೈಸೂರು: ದಸರಾ ಜಂಬೂಸವಾರಿ ಮೆರವಣಿಗೆ ಅದ್ದೂರಿಯಾಗಿ ನಡೆಯುತ್ತಿದ್ದು, ಜಂಬೂಸವಾರಿ ಮೈಸೂರಿನ ಆರ್ಎಂಸಿ ವೃತ್ತ ತಲುಪಿದೆ. ಅಭಿಮನ್ಯು ಮೇಲೆ ಚಾಮುಂಡೇಶ್ವರಿ ವಿರಾಜಮಾನವಾಗಿ ಕುಳಿತಿದ್ದು, ಜಂಬೂಸವಾರಿ ಸಾಗುವ ರಸ್ತೆಯುದ್ದಕ್ಕೂ ಲಕ್ಷಾಂತರ ಜನ ನೆರೆದಿದ್ದಾರೆ.
ಮೈಸೂರು: ಬನ್ನಿಮಂಟಪದ ಮೈದಾನದಲ್ಲಿ ಇಂದು ಸಂಜೆ 7 ಗಂಟೆಗೆ ಪಂಜಿನ ಕವಾಯತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಪೊಲೀಸ್ ಇಲಾಖೆಯಿಂದ ಸಾಹಸ ಕ್ರೀಡೆಗಳ ಪ್ರದರ್ಶನ ನಡೆಯಲಿದೆ. ಡ್ರೋನ್ ಲೈಟ್, ಬೈಕ್ ಸ್ಟಂಟ್ಸ್, ಕುದುರೆ ಸವಾರಿ, ಪಂಜಿನ ಕವಾಯಾತು, ಟೆಂಟ್ ಪೀಕಿಂಗ್, ಲೇಸರ್ ಲೈಟ್ ಸೇರಿದಂತೆ ಅನೇಕ ಸಾಹಸ ಕ್ರೀಡೆಗಳ ಪ್ರದರ್ಶನ ಪೊಲೀಸ್ ಇಲಾಖೆ ಮಾಡಲಿದೆ
ಮೈಸೂರು: ದಸರಾ ಜಂಬೂಸವಾರಿ ಮೆರವಣಿಗೆ ಆಯುರ್ವೇದಿಕ್ ಕಾಲೇಜು ವೃತ್ತ ತಲುಪಿದ್ದು, ತಾಯಿ ಚಾಮುಂಡೇಶ್ವರಿ ಅಭಿಮನ್ಯು ಮೇಲೆ ವಿರಾಜಮಾನವಾಗಿ ಕುಳಿತಿರುವಳು. ಜಂಬೂಸವಾರಿ ಸಾಗುವ ರಸ್ತೆಯುದ್ದಕ್ಕೂ ನೆರೆದಿರುವ ಜನ, ಚಾಮುಂಡೇಶ್ವ ವಿಗ್ರಹಕ್ಕೆ ನಮಿಸುತ್ತಿರುವರು.
ಮೈಸೂರು: 7ಘಂಟಗೆ ಬನ್ನಿಮಂಟಪ ಮೈದಾನದಲ್ಲಿ ಪಂಜಿನ ಕವಾಯತ್ತು ಶರುವಾಗಲಿದೆ. ರಾಜ್ಯದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗಿಯಾಗಲಿದ್ದಾರೆ. ಸಿಎಆರ್, ಡಿಎಆರ್, ಕಮಾಂಡೋ ಪೊಲೀಸ್, ಪೊಲೀಸ್ ಬ್ಯಾಂಡ್, ಅಶ್ವಾರೋಹಿ ದಳ, ಪೊಲೀಸ್ ಪಡೆಗಳಿಂದ ಆಕರ್ಷಕ ಪಥಸಂಚಲನ ನಡೆಯಲಿದೆ.
3 ಕಲಾತಂಡಗಳಿಂದ ನಾಡಿನ ಹಿರಿಮೆ ಗರಿಮೆ ನೃತ್ಯರೂಪಕ ಪ್ರದರ್ಶನ ಮಾಡಲಾಗುವುದು. ಶ್ವೇತಾಶ್ವ ತಂಡದಿಂದ ಬೈಕ್ ಸಾಹಸ ಪ್ರದರ್ಶನ ನಡೆಯಲಿದೆ.
ಮೈಸೂರು: ಕೆಆರ್ ಸರ್ಕಲ್ ದಾಟಿ ಆಯುರ್ವೇದಿಕ್ ಸರ್ಕಲ್ ಜಂಬೂ ಸವಾರಿ ತಲುಪಿದೆ. ಬಳಿಕ ತಿಲಕ್ ನಗರ, ಬಂಬೂ ಬಜಾರ್ ಮೂಲಕ ಬನ್ನಿ ಮಂಟಪ್ಪಕ್ಕೆ ತಲುಪಲಿದೆ. ಸುಮಾರು 4ರಿಂದ 5 ಕಿಲೋ ಮೀಟರ್ ಸವಾರಿ ನಡೆಯಲಿದೆ.
ಮೈಸೂರು: ನಿಗದಿತ ಸಮಯಕ್ಕಿಂತ ತಡವಾಗಿ ಜಂಬೂಸವಾರಿಗೆ ಪುಷ್ಪಾರ್ಚನೆ ಮಾಡಲಾಗಿದೆ. 4.40 ರಿಂದ 5 ಗಳೆ ಒಳಗೆ ಸಲ್ಲುವ ಮೀನ ಲಗ್ನದಲ್ಲಿ ಉಪ್ಪಾರ್ಚನೆ ಆಗಬೇಕಿತ್ತು. ಆದರೆ, ನಿಗದಿತ ಸಮಯಕ್ಕೆ ಪುಷ್ಪಾರ್ಚನೆ ಆಗದೆ 5.9 ನಿಮಿಷಕ್ಕೆ ಅಂದರೆ 9 ನಿಮಿಷ ತಡವಾಗಿ ಪುಷ್ಪಾರ್ಚನೆ ನೆರವೇರಿದೆ.
ಮೈಸೂರು: ದಸರಾ ಜಂಬೂ ಸವಾರಿ ಮೆರವಣಿಗೆ ಸಿಎಂ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. ಸತತ 4ನೇ ಬಾರಿಗೆ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ‘ಅಭಿಮನ್ಯು’ ಹೊತ್ತು ಸಾಗುತ್ತಿದ್ದು, ಅಭಿಮನ್ಯುಗೆ ಕುಮ್ಕಿ ಆನೆಗಳಾದ ಲಕ್ಷ್ಮೀ, ವಿಜಯಾ ಸಾಥ್ ನೀಡುತ್ತಿವೆ. ಅರಮನೆಯಿಂದ ಬನ್ನಿಮಂಟಪದವರೆಗೆ ಈ ಜಂಬೂಸವಾರಿ ಸಾಗಲಿದೆ. ಈ ವೇಳೆ ಜಂಬೂಸವಾರಿಯಲ್ಲಿ 49 ಸ್ತಬ್ಧಚಿತ್ರಗಳು, ವಿವಿಧ ಕಲಾತಂಡಗಳು ಭಾಗಿಯಾಗಿವೆ.
ಮೈಸೂರು:ಸತತ 4ನೇ ಬಾರಿಗೆ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ‘ಅಭಿಮನ್ಯು’ ಹೊತ್ತು ಸಾಗುತ್ತಿದ್ದು, ಅಭಿಮನ್ಯುಗೆ ಕುಮ್ಕಿ ಆನೆಗಳಾದ ಲಕ್ಷ್ಮೀ, ವಿಜಯಾ ಸಾಥ್ ನೀಡುತ್ತಿವೆ. ಅರಮನೆಯಿಂದ ಬನ್ನಿಮಂಟಪದವರೆಗೆ ಈ ಜಂಬೂಸವಾರಿ ಸಾಗಲಿದೆ. ಈ ವೇಳೆ ಜಂಬೂಸವಾರಿಯಲ್ಲಿ 49 ಸ್ತಬ್ಧಚಿತ್ರಗಳು, ವಿವಿಧ ಕಲಾತಂಡಗಳು ಭಾಗಿಯಾಗಿವೆ.
ಮೈಸೂರು: ಕೆಲವೇ ಕ್ಷಣಗಳಲ್ಲಿ ದಸರಾ ಜಂಬೂ ಸವಾರಿ ಮೆರವಣಿಗೆ ನಡೆಯಲಿದ್ದು, 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತಿರುವ ಅಭಿಮನ್ಯುಗೆ ಕುಮ್ಕಿ ಆನೆಗಳಾದ ಲಕ್ಷ್ಮೀ, ವಿಜಯಾ ಸಾಥ್ ನೀಡಿದೆ. ಸತತ 4ನೇ ಬಾರಿ ಚಿನ್ನದ ಅಂಬಾರಿಯನ್ನು ಅಭಿಮನ್ಯು ಹೊತ್ತಿದ್ದು, ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂಸವಾರಿ ಸಾಗಲಿದೆ.
ಮೈಸೂರು: ಅರಮನೆಯಿಂದ ಹೊಡಲಿರುವ ಜಂಬೂ ಸವಾರಿ, ಕೆ.ಆರ್.ಸರ್ಕಲ್ , ಆರ್ಯವೇದ ಸರ್ಕಲ್, ತಿಲಕ್ ನಗರ, ಬಂಬೂ ಬಜಾರ್ ಮೂಲಕ ಬನ್ನಿ ಮಂಟಪ್ಪಕ್ಕೆ ತಲುಪಲಿದೆ. ಸುಮಾರು 4 ರಿಂದ 5 ಕಿಲೋ ಮೀಟರ್ ಈ ಸವಾರಿ ನಡೆಯಲಿದೆ.
ಮೈಸೂರು: ಕೆಲವೇ ಹೊತ್ತಿನಲ್ಲಿ ವಿಶ್ವವಿಖ್ಯಾತ ದಸರಾ ಜಂಬೂಸವಾರಿಗೆ ಚಾಲನೆ ಸಿಗಲಿದೆ. ಹೌದು, ಸಂಜೆ 4.40ರಿಂದ 5 ಗಂಟೆ ಒಳಗೆ ಚಾಮುಂಡಿಮೂರ್ತಿಗೆ ಪುಷ್ಪಾರ್ಚನೆ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ಸತತ 4ನೇ ಬಾರಿ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು ಅಭಿಮನ್ಯು ಸಾಗಲಿದೆ. ಅರಮನೆಯಿಂದ ಬನ್ನಿಮಂಟಪದವರೆಗೆ ಈ ಮೆರವಣಿಗೆ ನಡೆಯಲಿದೆ. ಜಂಬೂಸವಾರಿಯಲ್ಲಿ 49 ಸ್ತಬ್ದಚಿತ್ರಗಳು, ವಿವಿಧ ಕಲಾತಂಡಗಳು ಭಾಗಿಯಾಗಿದ್ದು, ಲಕ್ಷಾಂತರ ಜನರು ದಸರಾ ಜಂಬೂಸವಾರಿಗೆ ಸಾಕ್ಷಿಯಾಗಲಿದ್ದಾರೆ.
ಮೈಸೂರು: ದಸರ ಜಂಬೂ ಸವಾರಿ ಕ್ಷಣಗಣನೆ ಶುರುವಾಗಲಿದ್ದು, ಇದೀಗ ತಾಯಿ ಚಾಮುಂಡೇಶ್ವರಿಗೆ ಅಂಬಾರಿ ಜೋಡಣೆ ಕಾರ್ಯಕ್ರಮ ಮುಕ್ತಾಯವಾಗಿದೆ. ಕೆಲವೇ ಕ್ಷಣಗಳಲ್ಲಿ ಅಂಬಾರಿ ಹೊರ ಬರಲಿದೆ.
ಮೈಸೂರು: ಆನೆಗಳ ವಯಸ್ಸು, ತೂಕ ಮತ್ತು ಎತ್ತರದ ವಿವರ
1)ಅಭಿಮನ್ಯು 57ವರ್ಷ,ಮತ್ತಿಗೋಡು ಆನೆ ಶಿಬಿರ,274ಮೀ ಎತ್ತರ, 4,700ರಿಂದ 5,000ಕೆಜಿ.
2) ವಿಜಯ 63ವರ್ಷ,ದುಬಾರೆ ಆನೆ ಶಿಬಿರ, 244ಮೀ ಎತ್ತರ, 3,250ರಿಂದ 3,500ಕೆಜಿ.
3) ವರಲಕ್ಷ್ಮಿ 67ವರ್ಷ, ಭೀಮನಕಟ್ಟೆ, 236ಮೀ ಎತ್ತರ, 3,300ರಿಂದ 3,500ಕೆಜಿ.
4) ಅರ್ಜುನ 65ವರ್ಷ, ಬಳ್ಳೆ, 288ಮೀ ಎತ್ತರ, 5,800ರಿಂದ 6,000 ಕೆಜಿ.
5) ಧನಂಜಯ 43ವರ್ಷ, ದುಬಾರೆ, 280ಮೀ ಎತ್ತರ,4,000ರಿಂದ 4,200 ಕೆಜಿ.
6) ಮಹೇಂದ್ರ 40ವರ್ಷ, ಮತ್ತಿಗೋಡು, 275ಮೀ ಎತ್ತರ, 3,800ರಿಂದ 4,000 ಕೆಜಿ.
7) ಭೀಮ 23ವರ್ಷ, ಮತ್ತಿಗೋಡು, 285ಮೀ ಎತ್ತರ, 3,800ರಿಂದ 4,000ಕೆಜಿ.
8) ಗೋಪಿ 41ವರ್ಷ, ದುಬಾರೆ, 286ಮೀ ಎತ್ತರ, 3,700ರಿಂದ 3,800ಕೆಜಿ.
9) ಪ್ರಶಾಂತ್ 50ವರ್ಷ, ದುಬಾರೆ,300ಮೀ ಎತ್ತರ,,4000ರಿಂದ 4,200ಕೆಜಿ.
10) ಸುಗ್ರೀವ 41ವರ್ಷ,ದುಬಾರೆ,277ಮೀ ಎತ್ತರ, 4,000ರಿಂದ 4,100ಕೆಜಿ.
11)ಕಂಜನ್ 24ವರ್ಷ,ದುಬಾರೆ, 262ಮೀ ಎತ್ತರ, 3,700ರಿಂದ 3,900ಕೆಜಿ.
12)ರೋಹಿತ್ 21ವರ್ಷ, ರಾಮಾಪುರ,270ಮೀ ಎತ್ತರ, 2,900ರಿಂದ 3,000ಕೆಜಿ.
13)ಲಕ್ಷ್ಮಿ 52 ವರ್ಷ, ದೊಡ್ಡಹರವೆ, 252 ಮೀ. ಎತ್ತರ, 3,000ರಿಂದ 3,200ಕೆಜಿ.
14) ಹಿರಣ್ಯ 46 ವರ್ಷ, ರಾಮಾಪುರ, 250ಮೀ ಎತ್ತರ, 3,000ರಿಂದ 3,200ಕೆಜಿ ತೂಕವಿದ್ದು, ಕಂಜನ್, ಲಕ್ಷ್ಮೀ ಹಾಗೂ ಹಿರಣ್ಯರಿಗೆ ಇದು ಮೊದಲ ದಸರಾವಾಗಿದೆ. ಅರ್ಜುನ ಈ ಬಾರಿಯ ದಸರಾ ಮಹೋತ್ಸವದ ಹಿರಿಯ ವಯಸ್ಸಿನ ಆನೆಯಾಗಿದೆ. ರೋಹಿತ್ ಅತ್ಯಂತ ಕಿರಿಯ ವಯಸ್ಸಿನ ಆನೆ ಹಾಗೂ ಮೊದಲ ಬಾರಿಗೆ ದಸರಾದಲ್ಲಿ ಭಾಗಿಯಾಗಲಿದೆ.
ಮೈಸೂರು: ದಸರಾ ವಿರೋಧಿಸಿ ಪ್ರತಿಭಟನೆಗೆ ಮುಂದಾಗಿದ್ದ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೈತ ಮುಖಂಡ ಭಾಗ್ಯರಾಜ್ ಸೇರಿದಂತೆ ಜಂಬೂ ಸವಾರಿ ವೀಕ್ಷಣೆಗೆ ಹಾಕಿದ್ದ ಗ್ಯಾಲರಿಯಲ್ಲಿ ಕುಳಿತಿದ್ದ ರೈತರನ್ನು ಬಂಧಿಸಿದ ಪೊಲೀಸರು ಜೀಪ್ನಲ್ಲಿ ಕರೆದೊಯ್ದಿದ್ದಾರೆ.
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಇದ್ದು, ಈ ಬಾರಿ ಜಂಬೂಸವಾರಿ ಮೆರವಣಿಗೆಯಲ್ಲಿ 49 ಟ್ಯಾಬ್ಲೋಗಳು ಭಾಗಿಯಾಗಲಿವೆ. ಬಾಗಲಕೋಟೆ-ಬಾದಾಮಿ ಚಾಲುಕ್ಯರ ರಾಜವಂಶ&ಬನಶಂಕರಿ ದೇವಿ ಟ್ಯಾಬ್ಲೋ, ಬಳ್ಳಾರಿ-ಕುಮಾರಸ್ವಾಮಿ ದೇವಸ್ಥಾನ, ಪಾರ್ವತಿ ದೇವಾಲಯ ಟ್ಯಾಬ್ಲೋ, ಬೆಳಗಾವಿ-ಮಹಾಲಿಂಗೇಶ್ವರ ದೇವಸ್ಥಾನ, ಗೋಕಾಕ್ ಫಾಲ್ಸ್, ಸುವರ್ಣಸೌಧ, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಸ್ತಬ್ಧಚಿತ್ರ, ಬೆಂಗಳೂರು ಗ್ರಾಮಾಂತರ-ದಕ್ಷಿಣ ಕಾಶಿ ಶಿವಗಂಗೆ ದೇವಸ್ಥಾನ ಟ್ಯಾಬ್ಲೋ, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ-ಚಂದ್ರಯಾನ-3 ಸ್ತಬ್ಧಚಿತ್ರ, ಬೀದರ್-ಕೃಷ್ಣಮೃಗ ಸಂರಕ್ಷಣಾಧಾಮದ ಅರಣ್ಯ ಪ್ರದೇಶ ಟ್ಯಾಬ್ಲೋ, ಚಾಮರಾಜನಗರ-ಜಾನಪದ, ಭಕ್ತಿಯ ಬೀಡು ಹುಲಿ, ಆನೆಗಳ ಸಂತೃಪ್ತಿಯ ಕಾಡು, ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ-ಏಕತೆಯಲ್ಲಿ ಅನೇಕತೆ ಸ್ತಬ್ಧಚಿತ್ರ,
ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ-ಬೆಟ್ಟದಿಂದ ಬಟ್ಟಲಿಗೆ ಸ್ತಬ್ಧಚಿತ್ರ, ಚಿತ್ರದುರ್ಗ-ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ ಟ್ಯಾಬ್ಲೋ, ದ.ಕನ್ನಡ-ಪಿಲಕುಳ ಗುತ್ತಿನಮನೆ, ವಿವೇಕಾನಂದ ತಾರಾಲಯ, ಬೀಚ್ ಸರ್ಫಿಂಗ್, ದಾವಣಗೆರೆ-ಸಂತ ಸೇವಾಲಾಲ ಹುಟ್ಟೂರು ಮತ್ತು ಬಂಜಾರ ಸಂಪ್ರದಾಯ, ಧಾರವಾಡ-ಧಾರವಾಡ ಪೇಡಾ, ಧಾರವಾಡಿ ಎಮ್ಮೆ ನಮ್ಮ ಹೆಮ್ಮೆ ಟ್ಯಾಬ್ಲೋ, ಗದಗ ಜಿಲ್ಲೆ-ಸಬರಮತಿ ಆಶ್ರಮ ಸ್ತಬ್ಧಚಿತ್ರ, ಹಾಸನ- ಹಾಸನಾಂಬ ದೇವಾಲಯ, ಹಲ್ಮಡಿ ಈಶ್ವರ ದೇವಸ್ಥಾನ ಟ್ಯಾಬ್ಲೋ, ಹಾವೇರಿ-ಶಂಕನಾದ ಮೊಳಗಿಸುತ್ತಿರುವ ಕನಕದಾಸರು & ಗದ್ದಿಗೆ ಕಾಗಿನೆಲೆ, ಕಲಬುರಗಿ-ರಾಜವಂಶಸ್ಥರ ಕೋಟೆ, ಚಿಂಚೋಳಿ ಅರಣ್ಯಪ್ರದೇಶ ವನ್ಯಜೀವಿ ಧಾಮ, ಕೊಡಗು ಜಿಲ್ಲಾ ಪಂಚಾಯಿತಿ-ಕೊಡಗಿನ ಪ್ರೇಕ್ಷಣೀಯ ಸ್ಥಳ ಸ್ತಬ್ಧಚಿತ್ರ,
ಕೋಲಾರ-ನರೇಗಾ ಯೋಜನೆಯಡಿ ವೀರಗಲ್ಲುಗಳ ಉತ್ಖನನ ಮತ್ತು ಮರುಸ್ಥಾಪನೆ, ಕೊಪ್ಪಳ-ಕಿನ್ನಾಳ ಕಲೆ ಹಾಗೂ ಕೈಮಗ್ಗ ಸ್ತಬ್ಧಚಿತ್ರ, ಮಂಡ್ಯ-ಸಾಂಪ್ರದಾಯಿಕ ಉದ್ಯಮ ಆಲೆಮನೆ ಸ್ತಬ್ಧಚಿತ್ರ, ಮೈಸೂರು-ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆಗಳ ಸ್ತಬ್ಧಚಿತ್ರ, ರಾಯಚೂರು-ನವರಂಗ ದರ್ವಾಜ ಹಾಗೂ ಆರ್ಟಿಪಿಎಸ್ ಟ್ಯಾಬ್ಲೋ, ರಾಮನಗರ-ಚನ್ನಪಟ್ಟಣದ ಚೆಂದದ ಗೊಂಬೆಗಳು ಇತ್ಯಾದಿ ಕಲೆಗಳು, ಶಿವಮೊಗ್ಗ-ಕುವೆಂಪು ಪ್ರತಿಮೆ, ಕುಪ್ಪಳ್ಳಿ, ಗುಡವಿ ಪಕ್ಷಿಧಾಮ, ನಗರ ಕೋಟೆ, ಹುಲಿ ಸಿಂಹಧಾಮ, ಶಿವಪ್ಪ ನಾಯಕ ಪ್ರತಿಮೆ ಟ್ಯಾಬ್ಲೋ ಮೆರವಣಿಗೆಯಲ್ಲಿ ಇರಲಿವೆ.
ಮೈಸೂರು: ವಿಶ್ವ ವಿಖ್ಯಾತ ಜಂಬೂ ಸವಾರಿಗೆ ಇನ್ನೇನು ಕ್ಷಣಗಣನೆ ಇದ್ದು, ಈ ಬಾರಿ ದಸರಾ ಮೆರವಣಿಗೆಯಲ್ಲಿ ಗಂಡುಕಲೆ ಎಂತಲೇ ಖ್ಯಾತಿ ಪಡೆದಿರುವ ಆಕರ್ಷಕ ನಂದಿಧ್ವಜ ಕುಣಿತದಲ್ಲಿ ಇದೇ ಮೊದಲ ಬಾರಿಗೆ 108 ನಂದಿಧ್ವಜ ಕುಣಿತ ಮಾಡಲಿದೆ. ಇದಕ್ಕೋಸ್ಕರ ತುಮಕೂರಿನಿಂದ ಕಲಾವಿದರು ಆಗಮಿಸಿದ್ದಾರೆ.
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ ಶುರುವಾಗಲಿದೆ. ಅರಮನೆ ಬಲರಾಮ ಗೇಟ್ ಬಳಿ ಸಿಎಂರಿಂದ ಈಗಾಗಲೇ ನಂದಿಧ್ವಜ ಪೂಜೆ ನೆರವೇರಿದ್ದು, ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ, ಸಚಿವರಾದ ಕೆ.ಹೆಚ್.ಮುನಿಯಪ್ಪ, ವೆಂಕಟೇಶ್, ಶಿವರಾಜ್ ತಂಗಡಗಿ, ಕೆ.ಎನ್.ರಾಜಣ್ಣ, ಭೈರತಿ ಸುರೇಶ್ ಹಾಗೂ ಸಂಸದ ಪ್ರತಾಪ್ ಸಿಂಹ ಉಪಸ್ಥಿತರಿದ್ದಾರೆ. ಮಧ್ಯಾಹ್ನ 1.46ರಿಂದ 2.48ರ ಶುಭ ಮಕರ ಲಗ್ನದಲ್ಲಿ ನಂದಿಧ್ವಜ ಪೂಜೆ ನೆರವೇರಿದೆ.
ಮೈಸೂರು: ಇನ್ನೇನೂ ಕೆಲವೇ ನಿಮಿಷಗಳಲ್ಲಿ ಅರಮನೆಯ ಬಲರಾಮ ಗೇಟ್ ಮುಂಭಾಗ ನಂದಿಧ್ವಜ ಪೂಜೆ ಸಲ್ಲಿಸಲಾಗುತ್ತದೆ. ನಂದಿಧ್ವಜಕ್ಕೆ ಸಿಎಂ ಸಿದ್ದರಾಮಯ್ಯ ಮಧ್ಯಾಹ್ನ 1.40 ಕ್ಕೆ ಪೂಜೆ ನೆರವೇರಿಸಲಿದ್ದಾರೆ. ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ನಂತರ ಬಂಜೂಸವಾರಿಗೆ ಚಾಲನೆ ನೀಡಲಾಗುತ್ತದೆ. ನಂತರ ನಂದಿಧ್ವಜ, ಸ್ತಬ್ದಚಿತ್ರ, ಕಲಾತಂಡಗಳು ಮೆರವಣಿಗೆಯಲ್ಲಿ ಸಾಗಲಿವೆ.
ಮೈಸೂರು ಅರಮನೆಯಿಂದ ಹೊಡಲಿರುವ ಜಂಬೂ ಸವಾರಿ ಕೆ.ಆರ್.ಸರ್ಕಲ್ , ಆರ್ಯವೇದ ಸರ್ಕಲ್, ತಿಲಕ್ ನಗರ ಬಂಬೂ ಬಜಾರ್ ಮೂಲಕ ಬನ್ನಿ ಮಂಟಪ್ಪಕ್ಕೆ ತಲುಪಲಿದೆ. ಸುಮಾರು 4 ರಿಂದ 5 ಕಿ ಮೀ ಜಂಬೂ ಸವಾರಿ ನಡೆಯಲಿದೆ.
ಮೈಸೂರು: ಭುವನೇಶ್ವರಿ ದೇಗುಲದ ಬನ್ನಿಮಂಟಪದಲ್ಲಿ ಶಮಿ ಪೂಜೆ ನಡೆಯಿತು. ರಾಜ ಯದುವೀರ್ ಒಡೆಯರ್ ಶಮಿ ನೆರವೇರಿಸಿದರು. ಯದುವೀರ್ ಒಡೆಯರ್ ಪೂಜೆ ನೇರವೇರಿಸದ ಬಳಿಕ ಶಮಿ ಪತ್ರೆ ವಿತರಿಸಿದರು.
ಮೈಸೂರು: ಜಂಬೂಸವಾರಿ ಹಿನ್ನೆಲೆಯಲ್ಲಿ ಮೈಸೂರಿನ ಕೆಆರ್ ಸರ್ಕಲ್ನಲ್ಲಿ ಜನರ ಓಡಾಟಕ್ಕೆ ಸಂಪೂರ್ಣ ನಿರ್ಬಂಧಿಸಲಾಗಿದೆ. ಜನರು ರಸ್ತೆಯ ಇಕ್ಕೆಲಗಳಲ್ಲಿ ಜಮಾವಣೆಗೊಂಡಿದ್ದಾರೆ. ಅರಮನೆಯಿಂದ ಕೆಆರ್ ಸರ್ಕಲ್ ಮೂಲಕ ಜಂಬೂ ಸವಾರಿ ಹಾದು ಹೋಗುತ್ತದೆ. ಬಂಜೂ ಸವಾರಿ ಮಾರ್ಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಮೈಸೂರು: ವಿಜಯ ದಶಮಿ ಹಿನ್ನೆಲೆಯಲ್ಲಿ ಅರಮನೆಯ ಶ್ವೇತ ವರಹ ದೇವಸ್ಥಾನದಲ್ಲಿ ವಜ್ರ ಮುಷ್ಟಿ ಕಾಳಗ ನಡೆಯಿತು. ಕಾಳಗದಲ್ಲಿ ಬೆಂಗಳೂರಿನ ಪ್ರಮೋದ್ ಜೆಟ್ಟಿಯಿಂದ ಚಾಮರಾಜನಗರದ ವೆಂಕಟೇಶ್ ಜೆಟ್ಟಿಗೆ ಪ್ರಹಾರ ಮಾಡಲಾಯಿತು. ಚನ್ನಪಟ್ಟಣದ ಪ್ರವೀಣ್ ಜೆಟ್ಟಿಯಿಂದ ಮೈಸೂರು ಪ್ರದೀಪ್ ಜೆಟ್ಟಿಗೆ ಪ್ರಹಾರ ಮಾಡಿದ್ದು, ತಲೆಯಿಂದ ರಕ್ತ ಚಿಮ್ಮಿದೆ.
ಜಂಬೂ ಸವಾರಿಯಲ್ಲಿ ತುಮಕೂರು-ಮೂಡಲಪಾಯ ಯಕ್ಷಗಾನ, ತವರು ಸ್ತಬ್ದಚಿತ್ರ, ಉಡುಪಿ-ತ್ಯಾಜ್ಯ ಮುಕ್ತ ಮತ್ಸ್ಯಸ್ನೇಹಿ ಸಮುದ್ರ, ಉತ್ತರ ಕನ್ನಡ- ಶರಾವತಿ ಮಡಿಲಲ್ಲಿ ವನ್ಯಜೀವಿ ಹಾಗೂ ಸಿಂಹದ ಬಾಲದ ಸಂಗಳಿಕ ಸಂರಕ್ಷಣೆ, ವಿಜಯಪುರ-ಜ್ಞಾನ ಯೋಗಾಶ್ರಮದ ಪೂಜ್ಯಶ್ರೀ ಸಿದ್ದೇಶ್ವರ ಸ್ವಾಮೀಜಿ, ವಿಜಯನಗರ- ವಿಠಲ ದೇವಸ್ಥಾನ, ಯಾದಗಿರಿ-ವೇಣುಗೋಪಾಲಸ್ವಾಮಿ ದೇವಸ್ಥಾನ, ಸ್ತಬ್ದಚಿತ್ರ ಉಪಸಮಿತಿ- ಅರಮನೆ ವಾದ್ಯಗೋಷ್ಠಿ,
ಸ್ತಬ್ದಚಿತ್ರ ಉಪಸಮಿತಿ-ಹೊಯ್ಸಳ ದೇವಸ್ಥಾನ, ಬೇಲೂರು ಹಳೇಬೀಡು ಸೋಮನಾಥಪುರ ದೇಗುಲ, ಸಮಾಜಕಲ್ಯಾಣ ಇಲಾಖೆ-ಸಂವಿಧಾನ ಪೀಠಿಕೆ, ಇಲಾಖೆ ಯೋಜನೆಗಳು, ವಾರ್ತಾ ಮತ್ತು ಪ್ರಚಾರ ಇಲಾಖೆ- ಸರ್ಕಾರದ ಗ್ಯಾರಂಟಿ ಯೋಜನೆಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ-ಗೃಹಲಕ್ಷ್ಮೀ ಯೋಜನೆ ಮತ್ತು ಇತರೆ ಯೋಜನೆಗಳು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ-ವಾಲ್ಮಿಕಿ ಪುತ್ಥಳಿ ಮತ್ತು ಇಲಾಖೆಯ ಯೋಜನೆ, ಆಹಾರ ಇಲಾಖೆ-ಹಸಿವಿನಿಂದ ಯಾರೂ ಬಳಲಬಾರದು ಅದಕ್ಕಾಗಿ ಅನ್ನಭಾಗ್ಯ, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ-ಶೌರ್ಯ-ನ್ಯಾಯ-ರಕ್ಷೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ-ಅಂಗಾಂಗ ದಾನ, STEMI, ಆಶಾಕಿರಣ, ಸಹಕಾರಿ ಹಾಲು ಉತ್ಪಾದಕರ ಮಹಲಾ ಮಂಡಳಿ ನಿಯಮಿತ-ಕ್ಷೀರಭಾಗ್ಯ ಯೋಜನೆ, ಚೆಸ್ಕಾಂ-ಗೃಹಜ್ಯೋತಿ, ಕೃಷಿ ಸೋಲಾರ ಸೆಟ್, ಗ್ರಾಹಕರ ಸಲಹಾ ಸಮಿತಿ, ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ-ಮೈಸೂರು ವೈದ್ಯಕೀಯ ಮಹಾವಿದ್ಯಾಲಯ, ಪ್ರವಾಸೋದ್ಯಮ ಇಲಾಖೆ-ಲಕ್ಕುಂಡಿ ಬ್ರಹ್ಮ ದೇವಾಲಯ
ಕಾವೇರಿ ನೀರಾವರಿ ನಿಗಮ-ಸಹಭಾಗಿತ್ವದ ನೀರಾವರಿ ನಿರ್ವಹಣಾ ಪದ್ಧತಿ, ವಾಕ್ ಶ್ರವಣ ಸಂಸ್ಥೆ-ವಾಕ್ ಶ್ರವಣ ದೋಷದಿಂದ ಉತ್ತಮ ಜೀವನದೆಡೆಗೆ ಆಯುಷ್ನ ಕೊಡುಗೆ, ಜಗಜೀವನ ರಾಮ್ ಚರ್ಮ ಕೈಗಾರಿಕ ಅಭಿವೃದ್ಧಿ ನಿಗಮ-ಲಿಡ್ಕರ್ ಅಪ್ಪಟ ಚರ್ಮ ಉತ್ಪನ್ನಗಳ ಆಗರ ಮತ್ತು ಚರ್ಮ ಕುಶಲಕರ್ಮಿಗಳ ಅಭಿವೃದ್ಧಿ ಆಶಾಕಿರಣ
ಸಮಾಜ ಕಲ್ಯಾಣ ಇಲಾಖೆ-ಭಾರತೀಯ ಸಂವಿಧಾನ ಮತ್ತು ಡಾ. ಬಿಆರ್.ಅಂಬೇಡ್ಕರ್, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ- ಸಂವಿಧಾನ ಪೀಠಿಕೆ ಓದು ಕಡ್ಡಾಯ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಸಾಗಲಿವೆ.
ಮೈಸೂರು: ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ 49 ಟ್ಯಾಬ್ಲೋಗಳು ಭಾಗಿಯಾಗಲಿವೆ. ಬಾಗಲಕೋಟೆ-ಬಾದಾಮಿ ಚಾಲುಕ್ಯರ ರಾಜವಂಶ ಮತ್ತು ಬನಶಂಕರಿ ದೇವಿ, ಬಳ್ಳಾರಿ-ಕುಮಾರಸ್ವಾಮಿ ದೇವಸ್ಥಾನ, ಪಾರ್ವತಿ ದೇವಾಲಯ, ಬೆಳಗಾವಿ-ಮಹಾಲಿಂಗೇಶ್ವರ ದೇವಸ್ಥಾನ, ಗೋಕಾಕ್ ಫಾಲ್ಸ್, ಸುವರ್ಣಸೌಧ, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಬೆಂಗಳೂರು ಗ್ರಾಮಾಂತರ ದಕ್ಷಿಣ ಕಾಶಿ ಶಿವಗಂಗೆ ದೇವಸ್ಥಾನ, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ-ಚಂದ್ರಯಾನ-3, ಬೀದರ್- ಕೃಷ್ಣಮೃಗ ಸಂರಕ್ಷಣಾಧಾಮದ ಅರಣ್ಯ ಪ್ರದೇಶ, ಚಾಮರಾಜನಗರ-ಜಾನಪದ, ಭಕ್ತಿಯ ಬೀಡು ಹುಲಿ, ಆನೆಗಳ ಸಂತೃಪ್ತಿಯ ಕಾಡು, ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ-ಏಕತೆಯಲ್ಲಿ ಅನೇಕತೆ, ಚಿಕ್ಕಮಗಳೂರು ಜಿಲ್ಲೆ-ಬೆಟ್ಟದಿಂದ ಬಟ್ಟಲಿಗೆ, ಚಿತ್ರದುರ್ಗ-ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ, ದಕ್ಷಿಣ ಕನ್ನಡ- ಪಿಲಕುಳ ಗುತ್ತಿನಮನೆ-ವಿವೇಕಾನಂದ ತಾರಾಲಯ-ಬೀಚ್ ಸರ್ಫಿಂಗ್, ದಾವಣಗೆರೆ-ಸಂತ ಸೇವಾವಾಲ ಹುಟ್ಟೂರು ಮತ್ತು ಬಂಜಾರ ಸಂಪ್ರದಾಯ, ಧಾರವಾಡ-ಧಾರವಾಡ ಪೇಡಾ, ಧಾರವಾಡದ ಎಮ್ಮೆ ನಮ್ಮ ಹೆಮ್ಮೆ, ಗದಗ ಜಿಲ್ಲೆ-ಸಬರಮತಿ ಆಶ್ರಮ ಸ್ತಬ್ದಚಿತ್ರ ಮೆರವಣಿಗೆ, ಹಾಸನ- ಹಾಸನಾಂಬ ದೇವಾಲಯ-ಹಲ್ಮಡಿ-ಈಶ್ವರ ದೇವಸ್ಥಾನ, ಹಾವೇರಿ-ಶಂಕನಾದ ಮೊಳಗಿಸುತ್ತಿರುವ ಕನಕದಾಸರು ಮತ್ತು ಗದ್ದಿಗೆ ಕಾಗಿನೆಲೆ, ಕಲಬುರಗಿ-ರಾಜವಂಶಸ್ಥರ ಕೋಟೆ, ಚಿಂಚೋಳಿ ಅರಣ್ಯಪ್ರದೇಶ ವನ್ಯಜೀವಿ ಧಾಮ, ಕೊಡಗು ಜಿಲ್ಲೆ-ಕೊಡಗಿನ ಪ್ರೇಕ್ಷಣೀಯ ಸ್ಥಳ, ಕೋಲಾರ- ನರೇಗಾ ಯೋಜನೆಯಡಿ ವೀರಗಲ್ಲುಗಳ ಉತ್ಖನನ ಮತ್ತು ಮರುಸ್ಥಾಪನೆ, ಕೊಪ್ಪಳ- ಕಿನ್ನಾಳ ಕಲೆ ಹಾಗೂ ಕೈಮಗ್ಗ, ಮಂಡ್ಯ- ಸಾಂಪ್ರದಾಯಿಕ ಉದ್ಯಮ ಆಲೆಮನೆ, ಮೈಸೂರು- ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆಗಳು, ರಾಯಚೂರು- ನವರಂಗ ದರ್ವಾಜ ಹಾಗೂ ಆರ್ಟಿಪಿಎಸ್, ರಾಮನಗರ- ಚೆನ್ನಪಟ್ಟಣದ ಚೆಂದದ ಗೊಂಬೆಗಳು ಇತ್ಯಾದಿ ಕಲೆಗಳು, ಶಿವಮೊಗ್ಗ-ಕುವೆಂಪು ಅವರ ಪ್ರತಿಮೆ, ಕುಪ್ಪಳ್ಳಿ, ಗುಡವಿ ಪಕ್ಷಿಧಾಮ ಮತ್ತು ಚಿತ್ರದುರ್ಗ- ನಗರ ಕೋಟೆ, ಹುಲಿ ಸಿಂಹಧಾಮ, ಶಿವಪ್ಪ ನಾಯಕ ಪ್ರತಿಮೆ ಟ್ಯಾಬ್ಲೋಗಳು ಭಾಗಿಯಾಗಲಿವೆ.
ಮೈಸೂರು: ಪ್ರತಿ ಬಾರಿಯಂತೆ ಈ ಬಾರಿಯೂ ಜಂಬೂಸವಾರಿಯಲ್ಲಿ 14 ಆನೆಗಳು ಭಾಗಿಯಾಗಲಿವೆ. 14 ಆನೆಗಳು: ಅಭಿಮನ್ಯು, ವಿಜಯ, ವರಲಕ್ಷ್ಮೀ, ಅರ್ಜುನ, ಧನಂಜಯ, ಮಹೇಂದ್ರ, ಭೀಮ, ಗೋಪಿ, ಪ್ರಶಾಂತ್, ಸುಗ್ರೀವ, ಕಂಜನ್, ರೋಹಿತ್, ಲಕ್ಷ್ಮೀ, ಹಿರಣ್ಯ ಆನೆಗಳು ಭಾಗಿಯಾಗಲಿವೆ
ಮೈಸೂರು: ಅಂಬಾರಿ ಹೊತ್ತು ಗಜ ಗಾಂಭೀರ್ಯದಿಂದ ಸಾಗುವ ಅಭಿಮನ್ಯುವಿನ ಇತಿಹಾಸವೇ ಬಲು ರೋಚಕ. ಅಭಿಮನ್ಯು ಅಂಬಾರಿ ಹೊರಲು ಸೈ ಕೂಂಬಿಂಗ್ ಮಾಡಲೂ ಬದ್ದನಾಗಿದ್ದಾನೆ. ಒಮ್ಮೆ ಅಭಿಮನ್ಯು ಕೂಂಬಿಂಗ್ಗೆ ಇಳಿದರೇ ಇದುವರೆಗೂ ಸೋತಿಲ್ಲ. ಅಭಿಮನ್ಯು ಹುಲಿ ಹಾಗೂ ಒಂಟಿ ಸಲಗವನ್ನ ಖೆಡ್ಡಾಗೆ ಕೆಡುವುದರಲ್ಲಿ ನಿಸ್ಸೀಮನಾಗಿರುವ ಚತುರ. ಅಭಿಮನ್ಯು ಹಾಗೂ ಮಾವುತ ವಸಂತನ ಕಾಂಬಿನೇಷನ್ಗೆ ಅರಣ್ಯಾಧಿಕಾರಿಗಳು ಫುಲ್ ಫಿದಾ ಆಗಿದ್ದಾರೆ. ಯಾವುದೇ ಕೂಂಬಿಂಗ್ಗೆ ತೆರಳ ಬೇಕಿದ್ದರೂ ಅಭಿಮನ್ಯುನೇ ಬೇಕು. 1970 ರಲ್ಲಿ ಕೊಡುಗಿನಲ್ಲಿ ನಡೆದ ಕೂಂಬಿಂಗ್ ಕಾರ್ಯಚರಣೆಯಲ್ಲಿ ಅಭಿಮನ್ಯು ಸೆರೆ ಸಿಕ್ಕಿದ್ದಾನೆ. ಅಭಿಮನ್ಯು ಈಗ ಮತ್ತಿಗೂಡು ಆನೆ ಬಿಡಾರದಲ್ಲಿದ್ದಾರೆ.
ಮೈಸೂರು: ರಾಜ್ಯದ ಜನರಿಗೆ ವಿಜಯದಶಮಿ ಹಾಗೂ ದಸರಾ ಮಹೋತ್ಸವದ ಶುಭಾಷಯಗಳು. ಮಧ್ಯಾಹ್ನ 1.45ಕ್ಕೆ ನಂದಿಧ್ವಜ ಪೂಜೆ ನೆರವೇರಲಿದೆ. ರಾತ್ರಿ ಬನ್ನಿ ಮಂಟಪದಲ್ಲಿ ಪಂಜಿನ ಕವಾಯತು ನಡೆಯಲಿದೆ. ರಾಜ್ಯದಲ್ಲಿ ಈ ಬಾರಿ ಮಳೆ ಬರಲಿಲ್ಲ, ವಿದ್ಯುತ್ ಕೊರತೆ ಆಯ್ತು. ರಾಜ್ಯದಲ್ಲಿ ಈಗಲಾದರೂ ಮಳೆ ಬರಲಿ ಅಂತ ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಜಯ ದಶಮಿ ಹಿನ್ನೆಲೆಯಲ್ಲಿ ಅರಮನೆಯ ಶ್ವೇತ ವರಹ ದೇವಸ್ಥಾನದಲ್ಲಿ ವಜ್ರ ಮುಷ್ಟಿ ಕಾಳಗಕ್ಕೆ ತಯಾರಿ ನಡೆದಿದೆ. ಜಟ್ಟಿ ಕಾಳಗಕ್ಕೆ ಎರಡು ಜೋಡಿ ಜಟ್ಟಿಗಳು ಸಿದ್ಧರಾಗಿದ್ದಾರೆ. ಚನ್ನಪ್ಪಟ್ಟಣ ಪ್ರವೀಣ್ ಜಟ್ಟಿ, ಮೈಸೂರು ಪ್ರದೀಪ್ ಜಟ್ಟಿ ನಡುವೆ ಕಾಳಾಗ ನಡೆಯಲಿದೆ. ಮತ್ತು ಬೆಂಗಳೂರಿನ ಪ್ರಮೋದ್ ಜಟ್ಟಿ , ಚಾಮರಾಜನಗರ ವೆಂಕಟೇಶ್ ಜಟ್ಟಿ ನಡುವೆ ಕಾಳಗ ನಡೆಯಲಿದೆ. ವಿಜಯದಶಮಿ ದಿನ ಜಟ್ಟಿಗಳು ಚಾಮುಂಡೇಶ್ವರಿ ದೇವಿಗೆ ಶಿರಭಾಗದಿಂದ ರಕ್ತಾರ್ಪಣೆ ಮಾಡಲಿದ್ದಾರೆ. ಮಟ್ಟಿ ಮೇಲೆ ಜಟ್ಟಿ ರಕ್ತ ಬಿದ್ದ ಮೇಲೆ ವಿಜಯದಶಮಿ ಮೆರವಣಿಗೆ ನಡೆಯಲಿದೆ. ವಜ್ರಮುಷ್ಠಿ ಕಾಳಗದ ನಂತರ ರಾಜ ಯಧುವೀರ್ ಒಡೆಯರು ವಿಜಯ ಯಾತ್ರೆ ಹೊರಡಲಿದ್ದಾರೆ.
ಮೈಸೂರು: ಜಂಬೂಸವಾರಿಗೆ ಕೆಲ ಗಂಟೆಗಳು ಬಾಕಿ ಇದ್ದು, ಅರಮನೆ ಆವರಣದಲ್ಲಿ ಜಂಬೂ ಸವಾರಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 11 ಐಪಿಎಸ್ ಅಧಿಕಾರಿಗಳು ಸೇರಿ 4,000 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿ ಅರಮನೆ ಮೈದಾನಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ಮಧ್ಯಾಹ್ನ 1.46ರಿಂದ 2.08ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿ ಪೂಜೆ ನಡೆಯಲಿದೆ. ಸಂಜೆ 4.40ರಿಂದ 5 ಗಂಟೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಜಂಬೂ ಸವಾರಿಯಲ್ಲಿನ ತಾಯಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಲಾಗುತ್ತದೆ. ನಂತರ ಜಂಬೂಸವಾರಿ ಆರಂಭವಾಗುತ್ತದೆ.
ಮೈಸೂರು: ರಾಜ್ಯ ಸರ್ಕಾರದ ಐದು ಯೋಜನೆಗಳ ಸಂದೇಶ ಸಾರುವ ಸ್ತಬ್ಧ ಚಿತ್ರಗಳು ಕೂಡ ಜಂಬೂ ಸವಾರಿ ಮೆರವಣಿಗೆಯಲ್ಲಿ ಸಾಗಲಿವೆ. ಶಕ್ತಿ ಯೋಜನೆ, ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆ, ಯುವನಿಧಿ ಯೋಜನೆಯ ಸ್ಥಬ್ಧ ಚಿತ್ರಗಳನ್ನು ನಿರ್ಮಾಣ ಮಾಡಲಾಗಿದೆ. ಜಂಬೂ ಸವಾರಿ ಮುನ್ನ ವಿಶೇಷ ಟ್ಯಾಬ್ಲೊಗಳು ಸಾಗಲಿವೆ. ಅರಮನೆಯಿಂದ ಬನ್ನಿ ಮಂಟಪದವರೆಗೂ ಸ್ಥಬ್ಧ ಚಿತ್ರಗಳು ಸಾಗಲಿವೆ. ರಾಜ್ಯದ ವಿವಿಧ ಭಾಗಗಳಿಂದ ಟ್ಯಾಬ್ಲೊಗಳು ಆಗಮಿಸಿವೆ.
ಜಂಬೂಸವಾರಿ ಆರಂಭಕ್ಕೂ ಮುನ್ನ ನಂದಿಧ್ವಜ ಸ್ಥಂಭಕ್ಕೆ ಪೂಜೆ ನೆರವೇರಿಸಲಾಗುತ್ತದೆ. ಉಡಿಗಾಲು ಮಹದೇವಪ್ಪ ಅವರ ಕುಟುಂಬ 60 ವರ್ಷಗಳಿಂದ ನಂದಿಧ್ವಜ ಸ್ಥಂಭ ಹೊತ್ತು ಸಾಗುತ್ತಿದೆ. ಮಹದೇವಪ್ಪ ಅವರ ಪುತ್ರ ಸಾಫ್ಟ್‌ವೇರ್ ಇಂಜಿನಿಯರ್ ಮಲ್ಲಿಕಾರ್ಜುನ್ ಅವರ ಮಗ ಸ್ಮರಣ್ ನಂದಿಧ್ವಜ ಸ್ಥಂಭ ಹೊತ್ತು ಸಾಗಲಿದ್ದಾರೆ. ನಂದಿ ಧ್ವಜಸ್ಥಂಭ 33 ಅಡಿ ಎತ್ತರ 150 ಕೆಜಿ ತೂಕವಿದೆ. ನಂದಿಧ್ವಜ ಸ್ಥಂಭ ನಂದಿ ವಿಗ್ರಹ, ಹರಡೆ ಚತ್ತು, ಪಂಚಕಳಶವನ್ನು ಒಳಗೊಂಡಿದೆ. ಸುಮಾರು 20 ಕಲಾವಿದರಿಂದ ಕರಡಿ ಮೇಳದ ಜೊತೆ ನಂದಿಧ್ವಜ ಸ್ಥಂಭ ಕುಣಿತ ನಡೆಯುತ್ತದೆ.
ಮೈಸೂರು: ಜಂಬೂ ಸವಾರಿ ವೀಕ್ಷಿಸಲು ಅರಮನೆಗೆ ಬರುವವರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 12 ಗಂಟೆ ಬಳಿಕ ನಿಗದಿತ ದ್ವಾರದಲ್ಲಿ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಪೊಲೀಸರು ಎಲ್ಲರನ್ನೂ ತಪಾಸಣೆ ಮಾಡಿ ಅರಮನೆಯೊಳಗೆ ಬಿಡುತ್ತಿದ್ದಾರೆ. ಜಂಬೂ ಸವಾರಿ ವೀಕ್ಷಿಸಲು ಬರುವವರಿಗೆ ಸೂಕ್ತ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ತೆ ಮಾಡಲಾಗಿದೆ. ಯಾವುದೇ ಗೊಂದಲಗಳಿಗೆ ಅವಕಾಶವಾಗದಂತೆ ಕ್ರಮ ಕೈಗೊಂಡಿದ್ದೇವೆ ಎಂದು ಕಾನೂನು ಸುವ್ಯವಸ್ಥೆ ಡಿಸಿಪಿ ಎಂ.ಮುತ್ತುರಾಜ್ ಮಾಹಿತಿ ನೀಡಿದ್ದಾರೆ.
ಜಂಬೂ ಸವಾರಿ ಮೆರವಣಿಗೆಗೆ ಕೆಲ ಗಂಟೆಗಳಷ್ಟೆ ಬಾಕಿ ಉಳಿದಿದ್ದು, ಚಿನ್ನದ ಅಂಬಾರಿಗೆ ಅಲಂಕಾರ ಮಾಡಲಾಗುತ್ತಿದೆ. ಮೈಸೂರಿನ ದೇವರಾಜ ಮಾರುಕಟ್ಟೆಯ ಗಾಯತ್ರಿ ಫ್ಲವರ್ ಸ್ಟಾಲ್‌ನ ಮಂಜುನಾಥ್ ಪ್ರತಿ ವರ್ಷ ಅಂಬಾರಿಗೆ ಹೂವಿನ ಅಲಂಕಾರ ಮಾಡುತ್ತಾರೆ. ಈ ಬಾರಿಯೂ ಮಂಜುನಾಥ್ ತಂಡದಿಂದ ಅಂಬಾರಿಗೆ ಹೂವಿನ ಅಲಂಕಾರ ಮಾಡಲಾಗಿತ್ತಿದೆ. ಮಂಜುನಾಥ್ ಕಳೆದ 25 ವರ್ಷಗಳಿಂದ ಅಂಬಾರಿಗೆ ಹೂವಿನ ಅಲಂಕಾರ ಮಾಡುತ್ತಿದ್ದಾರೆ. ಕನಕಾಂಬರ, ಮೈಸೂರು ಮಲ್ಲಿಗೆ, ಸೇವಂತಿಗೆ, ಬ್ಲೂ ಡೈಸಿ, ಸ್ಲಾಟರ್ ಡೈಸಿ ಡೆಚ್ ರೋಸ್, ಮಿಸರಿ ಆಫಲ್ ಬಳಸಿ ಅಲಂಕಾರ ಮಾಡಲಾಗುತ್ತಿದೆ.
ಮೈಸೂರು: ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿ ಮೆರವಣಿಗೆ ಮೂಲಕ ಬೆಳ್ಳಿರಥದಲ್ಲಿ ಜನಪದ ಕಲಾತಂಡಗಳ ಜೊತೆಗೆ ಅರಮನೆಯತ್ತ ಹೊರಟಿದೆ. ಮೆರವಣಿಗೆ ವೇಳೆ ಚಾಮುಂಡಿಗೆ ಜೈಕಾರ ಕೂಗಿ ಭಕ್ತರ ಹರ್ಷೋದ್ಗಾರ ಮೊಳಗಿದೆ.
ವಿಶ್ವವಿಖ್ಯಾತ ಜಂಬೂಸವಾರಿಗೆ ಕೆಲಗಂಟೆಗಳು ಬಾಕಿ ಉಳಿದಿದೆ. ಜಂಬೂಸವಾರಿ ಮೆರವಣಿಗೆಯ ಪ್ರಮುಖ ಆಕರ್ಷಣೆ 750 ಕೆ ಜಿ ತೂಕದ ಚಿನ್ನದ ಅಂಬಾರಿ. ಆನೆ ಮೇಲೆ ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ವಿಗ್ರಹ ಪ್ರತಿಷ್ಟಾಪಿಸಲಾಗುತ್ತದೆ. ಈ ಚಿನ್ನದ ಚಿನ್ನದ ಅಂಬಾರಿ ವಿನ್ಯಾಸ ಮತ್ತು ಅದರ ಹಿನ್ನೆಲೆ ಬಗ್ಗೆ ಇತಿಹಾಸ ತಜ್ಞ ಡಾ. ಶೆಲ್ವಪಿಳೈ ಅಯ್ಯಂಗಾರ್ ಜೊತೆ ನಡೆಸಿರುವ ಮಾತುಕತೆ ಇಲ್ಲಿದೆ.
ಮೈಸೂರು: ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಬೆಳಗ್ಗೆ 9.45ಕ್ಕೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಆನೆ ಬಾಗಿಲಿಗೆ ಆಗಮಿಸಲಿವೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಬಳಿಕ ಅರಮನೆ ಕಲ್ಯಾಣಮಂಟಪದಲ್ಲಿ ಖಾಸಾ ಆಯುಧಗಳಿಗೆ ಪೂಜೆ ನೆರವೇರುತ್ತದೆ. ಬೆಳಗ್ಗೆ 11ರಿಂದ 11.40ರವರೆಗೆ ಅರಮನೆಯ ಆನೆ ಬಾಗಿಲಿನಿಂದ ಭುವನೇಶ್ವರಿ ದೇಗುಲದವರೆಗೂ ಮೆರವಣಿಗೆ ನಡೆಯುತ್ತದೆ. ಭುವನೇಶ್ವರಿ ದೇಗುಲದಲ್ಲಿ ಯದುವೀರ್ ಒಡೆಯರ್ ಅವರು ಶಮಿ ಪೂಜೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 1.46ರಿಂದ 2.48ರವರೆಗೆ ಶುಭ ಮಕರ ಲಗ್ನದಲ್ಲಿ ನಂದಿಧ್ವಜಕ್ಕೆ ಪೂಜೆ ಮಾಡಲಾಗುತ್ತದೆ. ಕೋಟೆ ಆಂಜನೇಯಸ್ವಾಮಿ ದೇಗುಲ ಬಳಿ ನಂದಿಧ್ವಜಕ್ಕೆ ಸಿಎಂ ಸಿದ್ದರಾಮಯ್ಯ ಅವರಿಂದ ಪೂಜೆ ನೆರವೇರುತ್ತದೆ. ಸಂಜೆ 4.40ರಿಂದ 5ರ ನಡುವೆ ಶುಭಮೀನ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸುವ ಚಾಮುಂಡಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಲಾಗುತ್ತದೆ. ಜಂಬೂ ಸವಾರಿಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ
ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಯದುವೀರ್ ಒಡೆಯರ್ ಪಾಲ್ಗೊಳ್ಳಲಿದ್ದಾರೆ.
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಕೆಲ ಗಂಟೆಗಳು ಬಾಕಿ ಉಳಿದಿವೆ. ಈ ಬಾರಿ ಜಂಬೂಸವಾರಿ ಮೆರವಣಿಗೆಯಲ್ಲಿ 49 ಟ್ಯಾಬ್ಲೋಗಳು ಭಾಗಿಯಾಗಲಿವೆ. ದಸರಾ ಗಜಪಡೆ ಜೊತೆ ಕಲಾತಂಡಗಳು, ಸ್ತಬ್ದಚಿತ್ರಗಳು ಸಾಗಲಿವೆ. 31 ಜಿಲ್ಲೆಗಳ ಕಲೆ, ಸಂಸ್ಕೃತಿ ಪರಂಪರೆ ಪ್ರವಾಸಿತಾಣಗಳ ಸ್ತಬ್ದಚಿತ್ರಗಳು, ಸರ್ಕಾರದ ವಿವಿಧ ಇಲಾಖೆಗಳ ಸ್ತಬ್ದಚಿತ್ರ, ಗ್ಯಾರಂಟಿ ಯೋಜನೆಯ ಟ್ಯಾಬ್ಲೋ ಸೇರಿದಂತೆ 49 ಸ್ತಬ್ದಚಿತ್ರಗಳ ಮೆರವಣಿಗೆಯಲ್ಲಿರಲಿವೆ. 49 ಟ್ಯಾಬ್ಲೋಗಳ ಜೊತೆ 95 ವಿವಿಧ ಕಲಾತಂಡಗಳು ಕೂಡ ಭಾಗಿಯಾಗಲಿವೆ.
ಮೈಸೂರು: ನವರಾತ್ರಿಯ ಕೊನೆಯ ದಿನ ವಿಜಯದಶಮಿ ಅಥವಾ ದಸರಾ. ನಾಡಹಬ್ಬ ದಸರಾ ಅಂಗವಾಗಿ ಮೈಸೂರಿನಲ್ಲಿ ಇಂದು (ಅ.24) ಜಂಬೂ ಸವಾರಿ ನಡೆಯಲಿದೆ. ಸಂಜೆ 4.40ರಿಂದ 5 ಗಂಟೆ ನಡುವೆ ದಸರಾ ಜಂಬೂಸವಾರಿಗೆ ಚಾಲನೆ ನೀಡಲಾಗುತ್ತದೆ. ಚಾಮುಂಡಿಮೂರ್ತಿಗೆ ಪುಷ್ಪಾರ್ಚನೆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಅಭಿಮನ್ಯು ಸತತ ನಾಲ್ಕನೇ ಬಾರಿಗೆ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತು ಸಾಗಲಿದ್ದಾನೆ. ಜಂಬೂಸವಾರಿಯಲ್ಲಿ 49 ಸ್ತಬ್ದಚಿತ್ರಗಳು, ವಿವಿಧ ಕಲಾತಂಡಗಳು ಭಾಗಿಯಾಗಲಿವೆ. ಜಂಬೂಸವಾರಿ ಅರಮನೆಯಿಂದ ಬನ್ನಿಮಂಟಪದವರೆಗೆ ಸಾಗಲಿದೆ. ದಸರಾ ಜಂಬೂಸವಾರಿಗೆ ಲಕ್ಷಾಂತರ ಜನರು ಸಾಕ್ಷಿಯಾಗಲಿದ್ದಾರೆ.
Published On - 8:06 am, Tue, 24 October 23