ಮೈಸೂರು: ಗುತ್ತಿಗೆದಾರನಿಗೆ 7 ವರ್ಷಗಳಿಂದ ಬಿಲ್ ಪಾವತಿಸದ ಹಿನ್ನೆಲೆ ಮೈಸೂರು ಡಿಸಿ ಕಚೇರಿ ವಸ್ತುಗಳ ಜಪ್ತಿಗೆ ಲೋಕ ಅದಾಲತ್ ನ್ಯಾಯಾಲಯ ಆದೇಶ ನೀಡಿದೆ. 2013ರಲ್ಲಿ ಅಟಲ್‌ಜಿ ಜನಸ್ನೇಹಿ ಯೋಜನೆಯಡಿ ಡಿಸಿ ಕಚೇರಿಗೆ ಗುತ್ತಿಗೆದಾರ ಯುಪಿಎಸ್ ನೀಡಿದ್ದಾರೆ. UPS ನೀಡಿ 7 ವರ್ಷವಾದ್ರೂ ಜಿಲ್ಲಾಡಳಿತ ಹಣ ಪಾವತಿಸಿಲ್ಲ.
ಈ ಬಗ್ಗೆ ಗುತ್ತಿಗೆದಾರ ಚಿದಂಬರ ಕೋರ್ಟ್ ಮೊರೆಹೋಗಿದ್ದಾರೆ. ಹಣ ಪಾವತಿಸುವಂತೆ ನ್ಯಾಯಾಲಯ ಜಿಲ್ಲಾಡಳಿತಕ್ಕೆ ಸೂಚಿಸಿದೆ. ಆದರೆ ಕೋರ್ಟ್ ಆದೇಶವನ್ನ ನಿರ್ಲಕ್ಷಿಸಿ ಕಳೆದ 7 ವರ್ಷಗಳಿಂದ ಭಾಕಿ ಉಳಿಸಿಕೊಂಡ ಹಣವನ್ನ ಪಾವತಿಸಿಲ್ಲ. ಈ ಹಿನ್ನೆಲೆ ಮೈಸೂರು ಡಿಸಿ ಕಚೇರಿಯಲ್ಲಿನ ವಸ್ತುಗಳನ್ನು ಜಪ್ತಿ ಮಾಡುವಂತೆ ಕೋರ್ಟ್ ಆದೇಶ ನೀಡಿದೆ. ಹೀಗಾಗಿ ಡಿಸಿ ಕಚೇರಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
Published On - 6:49 pm, Mon, 27 January 20