ಮೈಸೂರು: ಹೊಸ ವರ್ಷಾಚರಣೆಗೆ (New Year’s Eve) ಡಿಜೆ (DJ) ಮತ್ತು ಪಟಾಕಿ ಸಿಡಿಸಲು (Firecrackers) ಅವಕಾಶ ಇಲ್ಲ ಎಂದು ಮೈಸೂರು ಪೊಲೀಸ್ ಆಯುಕ್ತ ರಮೇಶ್ ಭಾನೋತ್ (Mysore COP Ramesh Bhanot) ಹೇಳಿದ್ದಾರೆ. ನಗರದಲ್ಲಿ ಪಟಾಕಿ ಸಿಡಿಸುವಂತಿಲ್ಲ. ವಿದ್ಯಾರ್ಥಿನಿಯರ ಹಾಸ್ಟೆಲ್ ಬಳಿ ಅನುಚಿತವಾಗಿ ವರ್ತಿಸಬಾರದು. ವ್ಹೀಲಿಂಗ್, ರಸ್ತೆಯಲ್ಲಿ ಗುಂಪು ಸೇರಿ ಗಲಾಟೆ ಮಾಡುವಂತಿಲ್ಲ. ಕಾನೂನು ನಿಯಮ ಉಲ್ಲಂಘಿಸಿದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹೊಸ ವರ್ಷ ಆಚರಣೆ ತಡಾರಾತ್ರಿವರೆಗೆ ಅವಕಾಶ ನೀಡುವಂತೆ ಒತ್ತಾಯಗಳು ಕೇಳಿಬರುತ್ತಿವೆ. ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಆಯುಕ್ತರು, ರಾತ್ರಿ 1ರವರೆಗೆ ಪಾರ್ಟಿ ಅವಧಿ ವಿಸ್ತರಿಸುವಂತೆ ಮನವಿ ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಸರ್ಕಾರದ ಮಾರ್ಗಸೂಚಿ ಅನ್ವಯ ನಿಯಮ ಜಾರಿಗೊಳಿಸುತ್ತೇವೆ. ಬಹುತೇಕ ಇನ್ನೆರಡು ದಿನಗಳಲ್ಲಿ ಮಾರ್ಗಸೂಚಿ ಬರುವ ನಿರೀಕ್ಷೆ ಇದೆ ಎಂದರು.
ಬಿಜೆಪಿ ನಗರ ಯುವ ಮೋರ್ಚಾ ಅಧ್ಯಕ್ಷ ಕಿರಣ್ ಗೌಡ (BJP City Yuva Morcha President Kiran Gowda) ರೌಡಿ ಶೀಟರ್ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷಣ (M.Lakshman) ಆರೋಪ ಮಾಡಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿದ ಪೊಲೀಸ್ ಆಯುಕ್ತರು, ಕಿರಣ್ ಗೌಡ ಹೆಸರಿನಲ್ಲಿ ರೌಡಿ ಶೀಟರ್ ಇಲ್ಲ. ಕಿರಣ್ ಗೌಡ ಹೆಸರು ರೌಡಿ ಪಟ್ಟಿಯಲ್ಲಿಲ್ಲ. ಆತನ ಮೇಲೆ ಬೇರೆ ಒಂದೆರಡು ಪ್ರಕರಣಗಳಿವೆ ಎಂದರು. ಅಲ್ಲದೆ, ಮೈಸೂರಿನಲ್ಲಿ ರೌಡಿಗಳ ಗಡಿಪಾರಿಗೆ ಮುಂದಾಗಿದ್ದೇವೆ. ಈಗಾಗಲೇ ಇಬ್ಬರನ್ನು ಗಡಿಪಾರು ಮಾಡಲಾಗಿದೆ. ಇನ್ನೂ ಐದು ಮಂದಿ ರೌಡಿಶೀಟರ್‌ಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಆದಷ್ಟು ಬೇಗ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:00 pm, Mon, 26 December 22