ಮೈಸೂರು: ಜಿಲ್ಲೆಯ ಟಿ ನರಸೀಪುರ ತಾಲೂಕಿನಲ್ಲಿ (T Narasipura Taluk) ಯುವತಿಯನ್ನು ಬಲಿ ಪಡೆದ ಚಿರತೆ ಪತ್ತೆ (Leopard found)ಗೆ ಐದು ದಿನಗಳ ಹಿಂದಷ್ಟೇ ಆರಂಭಿಸಿದ ವಿಶೇಷ ಕಾರ್ಯಾಚರಣೆ (Special operation to capture leopard) ಯಾವುದೇ ಫಲ ನೀಡದ ಹಿನ್ನೆಲೆ ಅರಣ್ಯ ಇಲಾಖೆ (Forest Department) ಅಧಿಕಾರಿಗಳು ಬುಧವಾರ ಚಿರತೆ ಪತ್ತೆ ಕಾರ್ಯತಂತ್ರ ಬದಲಿಸಿದ್ದಾರೆ. ಅರಣ್ಯದ ಹೆಚ್ಚುವರಿ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್ ಅವರು ಬುಧವಾರ ಮಧ್ಯಾಹ್ನ ಕಾರ್ಯಾಚರಣೆಗಾಗಿ ಉತ್ತಮ ಗುಣಮಟ್ಟದ ಥರ್ಮಲ್ ಕ್ಯಾಮೆರಾ (Thermal Camera) ಮತ್ತು ಡ್ರೋನ್‌ನೊಂದಿಗೆ ಕಾರ್ಯಾಚರಣೆ ಸ್ಥಳಕ್ಕೆ ಆಗಮಿಸಿದರು. ಹೊಸ ಡ್ರೋನ್‌ನೊಂದಿಗೆ ವಿಶೇಷ ತಂಡಗಳು ಸೋಮವಾರ ಬೆಳಿಗ್ಗೆ ಚಿರತೆ ಒಂದು ಬಾರಿ ಶನಿವಾರ ರಾತ್ರಿ ಒಂದು ಬಾರಿ ಕಾಣಿಸಿಕೊಂಡಿದ್ದು, ಚಿರತೆ ಮಲ ಸಹ ಕಂಡುಬಂದಿದೆ. ಹೀಗಾಗಿ ಒಟ್ಟು ಎರಡು ಬಾರಿ ಚಿರತೆ ಕಾಣಿಸಿಕೊಂಡ ಮಲ್ಲಿಕಾರ್ಜುನಸ್ವಾಮಿ ಬೆಟ್ಟ (Mallikarjunaswamy Hill)ದ ಸುತ್ತಲೂ ತಮ್ಮ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ನಿರ್ಧರಿಸಿವೆ ಎಂದು ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ಅರಣ್ಯ ಇಲಾಖೆ ಈ ರೀತಿಯ ಕ್ಯಾಮೆರಾವನ್ನು ಪ್ರಾಯೋಗಿಕವಾಗಿ ಬಳಸುತ್ತಿದೆ. ಈ ಕಾರ್ಯಾಚರಣೆ ಯಶಸ್ವಿಯಾದರೆ ಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷ ಇರುವ ಇತರೆ ಪ್ರದೇಶಗಳಲ್ಲಿ ಸಂಘರ್ಷ ನಿಭಾಯಿಸಲು ಬಳಸಲಾಗುತ್ತದೆ ಎಂದು ಕುಮಾರ್ ಪುಷ್ಕರ್ ಅವರು ಡೆಕ್ಕನ್ ಹೆರಾಲ್ಡ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ: ರಸ್ತೆ, ಬಸ್ ಸಮಸ್ಯೆ ನಡುವೆ ಶಾಲೆಗೆ ಹೋಗಲು ಮಕ್ಕಳಿಗೆ ಚಿರತೆ ಭಯ
“ನಾವು ಈಗಾಗಲೇ ಹೊಂದಿರುವ ಸಾಮಾನ್ಯ ಕ್ಯಾಮೆರಾ ಒಳಗೊಂಡ ಡ್ರೋನ್ಗಳು ಬೆಳಕಿನ ಸಂಕೇತಗಳನ್ನು ಸ್ವೀಕರಿಸಿ ಅದರ ಆಧಾರದ ಮೇಲೆ ಅದು ಚಿತ್ರಗಳನ್ನು ರಚಿಸುತ್ತದೆ. ಆದರೆ ಥರ್ಮಲ್ ಕ್ಯಾಮೆರಾದ ವಿಷಯದಲ್ಲಿ ಅದು ಜೀವಂತ ವಸ್ತುವಿನ ಚಲನೆ ಇದ್ದಾಗಲೆಲ್ಲಾ ಅದು ಪ್ರಾಣಿಯಾಗಿರಲಿ ಅಥವಾ ಮನುಷ್ಯನಾಗಿರಲಿ, ತಾಪಮಾನದಲ್ಲಿನ ವ್ಯತ್ಯಾಸವನ್ನು ಗುರುತಿಸುತ್ತದೆ. ಅದರ ಆಧಾರದ ಮೇಲೆ ಕ್ಯಾಮೆರಾಗಳು ಅವುಗಳ ಆಕಾರವನ್ನು ಸರಿಯಾಗಿ ತೆಗೆದುಕೊಳ್ಳುತ್ತದೆ. ಇದನ್ನು ಪೊಲೀಸರು ಮತ್ತು ರಕ್ಷಣಾ ಪಡೆಗಳು ಕಣ್ಗಾವಲು ಉದ್ದೇಶಗಳಿಗಾಗಿ ಬಳಸುತ್ತವೆ. ಚಿರತೆ ಪತ್ತೆಗೆ ಇದೇ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಯೋಚಿಸಿದ್ದೇವೆ. ಇದು ಪರಿಣಾಮಕಾರಿಯಾದರೆ ಮಾನವ-ಪ್ರಾಣಿ ಸಂಘರ್ಷವನ್ನು ನಿಭಾಯಿಸಲು ನಾವು ಅದನ್ನು ಬಳಸಬಹುದು. ಶುಕ್ರವಾರದವರೆಗೆ ಇದನ್ನು ಇಲ್ಲಿ ಬಳಸಲಾಗುತ್ತದೆ” ಎಂದರು.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ