ಚಾಮರಾಜನಗರ: ರಸ್ತೆ, ಬಸ್ ಸಮಸ್ಯೆ ನಡುವೆ ಶಾಲೆಗೆ ಹೋಗಲು ಮಕ್ಕಳಿಗೆ ಚಿರತೆ ಭಯ

ಚಾಮರಾಜನಗರದ ಹೊರವಲಯದಲ್ಲಿರುವ ಆದರ್ಶ ವಿದ್ಯಾಲಯಕ್ಕೆ ಹೋಗುವ ಮಕ್ಕಳಿಗೆ ಬೀದಿ ನಾಯಿಗಳ ಸಮಸ್ಯೆ ಇಲ್ಲದಿದ್ದರೂ ರಸ್ತೆ ಹಾಗೂ ಬಸ್ ಸಮಸ್ಯೆ ಇದೆ. ಇದೀಗ ಚಿರತೆ ಭಯವೂ ಆರಂಭವಾಗಿದೆ.

ಚಾಮರಾಜನಗರ: ರಸ್ತೆ, ಬಸ್ ಸಮಸ್ಯೆ ನಡುವೆ ಶಾಲೆಗೆ ಹೋಗಲು ಮಕ್ಕಳಿಗೆ ಚಿರತೆ ಭಯ
ಚಾಮರಾಜನಗರ: ರಸ್ತೆ, ಬಸ್ ಸಮಸ್ಯೆ ನಡುವೆ ಶಾಲೆಗೆ ಹೋಗಲು ಮಕ್ಕಳಿಗೆ ಚಿರತೆ ಭಯ
Follow us
TV9 Web
| Updated By: Rakesh Nayak Manchi

Updated on: Dec 04, 2022 | 5:14 PM

ಚಾಮರಾಜನಗರ: ಕೆಲವು ಶಾಲೆಗಳ ಸುತ್ತ ಮುತ್ತ ಬೀದಿ ನಾಯಿಗಳ ಹಾವಳಿ ಹೆಚ್ಚಿರುತ್ತದೆ. ಆದರೆ ಈ ಗಡಿ ಜಿಲ್ಲೆ ಶಾಲೆ ಮಕ್ಕಳಿಗೆ ಕಾಡುತ್ತಿರುವುದು ನಾಯಿಗಳ ಭಯ ಅಲ್ಲ. ಚಿರತೆಗಳಂತಹ ಕಾಡು ಪ್ರಾಣಿಗಳ (Leopard menace) ಭಯ. ಈ ಭಯದ ನಡುವೇವು ಮಕ್ಕಳು ಶಾಲೆಗೆ ಹೋಗುತ್ತಿದ್ದು ಅವರಿಗೆ ಸರಿಯಾದ ರಸ್ತೆ, ಬಸ್ ವ್ಯವಸ್ಥೆ ಕೂಡ ಇಲ್ಲ. ಅದಲ್ಲದೆ ಮಕ್ಕಳು ತಮ್ಮ ಜೀವ ಕೈಯಲ್ಲಿ ಹಿಡಿದು ಕಿಲೋಮೀಟರ್​ಗಳಷ್ಟು ದೂರ ನಡೆದುಕೊಂಡು ಭಯದಲ್ಲಿಯೇ ಶಾಲೆ ಸೇರಬೇಕಿದೆ. ಇದು ಚಾಮರಾಜನಗರದ ಹೊರವಲಯದಲ್ಲಿರುವ ಆದರ್ಶ ವಿದ್ಯಾಲಯದ ಮಕ್ಕಳ ಪರಿಸ್ಥಿತಿ. ಈ ಹಿಂದೆ ಆದರ್ಶ ಶಾಲೆಯ (Adarsha vidyalaya) ಹಿಂಬದಿಯಲ್ಲಿರುವ ಮೆಡಿಕಲ್ ಕಾಲೇಜಿನ ಆವರಣದಲ್ಲಿ ಚಿರತೆ (Leopard spotted) ಕಾಣಿಸಿಕೊಂಡಿದ್ದು, ಬಳಿಕ ಮಕ್ಕಳಲ್ಲಿ ಆತಂಕ, ಭಯ ಹೆಚ್ಚಾಗಿದೆ.

ಪ್ರತಿಭಾನ್ವಿತ ಮಕ್ಕಳಿಗೆ ಉಚಿತ ಹಾಗೂ ಉತ್ತಮ ಶಿಕ್ಷಣ ನೀಡಲೆಂದು ಸರ್ಕಾರ ಆದರ್ಶ ವಿದ್ಯಾಲಯ ತೆರೆದಿದೆ. ಆದರೆ ಚಾಮರಾಜನಗರದ ಹೊರವಲದಲ್ಲಿರುವ ಮಲ್ಲಯ್ಯನ ಪುರ ಗ್ರಾಮದ ಸಮೀಪವಿರುವ ಬೆಟ್ಟದ ತಪ್ಪಲಿನಲ್ಲಿರುವ ಈ ಶಾಲೆಗೆ ಸರಿಯಾದ ಬಸ್ ವ್ಯವಸ್ಥೆ, ರಸ್ತೆ ವ್ಯವಸ್ಥೆ ಇಲ್ಲ. ಸುಮಾರು 400 ಹೆಚ್ಚಿನ ಮಕ್ಕಳು ಈ ಶಾಲೆಗೆ ಪ್ರತಿನಿತ್ಯ ಅಕ್ಕ ಪಕ್ಕದ ಗ್ರಾಮಗಳಿಂದ ಬರುತ್ತಿದ್ದು, ಮಕ್ಕಳಿಗೆ ಕೇವಲ ಎರಡು ಬಸ್​ಗಳು ಮಾತ್ರ ಇದೆ.

ಇದನ್ನೂ ಓದಿ: ಚಿರತೆ ಭೀತಿ: ದೊಣ್ಣೆ ಹಿಡಿದುಕೊಂಡು ಬೆಳೆ ಕಟಾವು ಮಾಡುತ್ತಿರುವ ಗಂಡ-ಹೆಂಡತಿ

ಇರುವ ಎರಡು ಬಸ್​ಗಳು ಕೂಡ ಶಾಲೆಯ ಸಮೀಪ ಹೋಗದೆ ಶಾಲೆಯಿಂದ ಒಂದು ಕಿ.ಮೀ. ದೂರವಿರುವ ಮಲ್ಲಯ್ಯನ ಪುರ ಗ್ರಾಮದ ಸಮೀಪಕ್ಕಷ್ಟೆ ಸೀಮಿತವಾಗಿದೆ. ಅಲ್ಲಿಂದ ಮಕ್ಕಳು ಕಾಲ್ನಡಿಗೆಯಲ್ಲಿ ಶಾಲೆ ಸೇರುವುದು ಅನಿವಾರ್ಯವಾಗಿದೆ. ಹೀಗೆ ಹೋಗುವ ಮಕ್ಕಳು ಚಿರತೆ ಭಯದಿಂದಲೇ ಶಾಲೆಗೆ ಹೋಗುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟವರು ಮಕ್ಕಳಿಗೆ ಬಸ್, ರಸ್ತೆಗಳಂತಹ ಮೂಲಭೂತ ಸೌಕರ್ಯಗಳನ್ನಾದರೂ ಕಲ್ಪಿಸಿ ಎಂದು ಪೋಷಕರು ಜನಪ್ರತಿನಿಧಿಗಳಲ್ಲಿ ಮತ್ತು ಅಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಇನ್ನೂ ಚಾಮರಾಜನಗರ ಅಂದರೆ ಅತಿ ಹೆಚ್ಚು ಅರಣ್ಯ ಸಂಪತ್ತು ಹೊಂದಿರುವ ಜಿಲ್ಲೆಯಾಗಿದ್ದು, ಕಾಡುಪ್ರಾಣಿಗಳು ಸಹಜವಾಗಿ ಹೆಚ್ಚಾಗಿಯೇ ಇವೆ. ಅವುಗಳ ಆತಂಕದಲ್ಲಿಯೇ ಜೀವನ ನಡೆಸಲು ಕಷ್ಟ. ಶಾಲಾ ಮಕ್ಕಳು ಕಾಡು ಪ್ರಾಣಿಗಳು ಭಯದಲ್ಲಿಯೇ ಶಾಲೆಗೆ ಹೋಗುತ್ತಿದ್ದಾರೆ. ಬಸ್ ವ್ಯವಸ್ಥೆ ಇಲ್ಲದ ಕಾರಣ ಅದರಲ್ಲಿಯೂ ತುಂಬಾ ಕಷ್ಟ ಪಟ್ಟು ವಿದ್ಯಾರ್ಥಿಗಳು ಬರುತ್ತಿದ್ದು ಒಂದು ಕಿಲೋಮೀಟರ್ ದೂರದಲ್ಲಿಯೇ ಬಸ್ ಇಳಿದು ಶಾಲೆಗೆ ನಡೆದುಕೊಂಡು ಬರಬೇಕಿದೆ. ಭಾರದ ಬ್ಯಾಗ್ ಹೊತ್ತು ಶಾಲೆಗೆ ಹೋಗಲು ಇನ್ನೂ ಕಷ್ಟವಾಗಿತ್ತಿದೆ. ಅಲ್ಲದೇ ಕಳೆದ ಕೆಳ ತಿಂಗಳ ಹಿಂದೆ ಆದರ್ಶ ಶಾಲೆಯ ಹಿಂಬದಿಯಲ್ಲಿರುವ ಮೆಡಿಕಲ್ ಕಾಲೇಜಿನ ಆವರಣದಲ್ಲಿ ಚಿರತೆ ಕಾಣಿಸಿಕೊಂಡಿದ್ದು ಮಕ್ಕಳಿಗೆ ಇನ್ನಷ್ಟು ಭಯ ಹೆಚ್ಚು ಮಾಡಿದೆ. ಆದ್ದರಿಂದ ನಮ್ಮ ಶಾಲೆಗೆ ರಸ್ತೆ ಸಂಪರ್ಕ ಹಾಗೂ ಬಸ್ ವ್ಯವಸ್ಥೆ ಕಲ್ಪಿಸಿ ನಮ್ಮಿಂದ ಭಯ ದೂರ ಮಾಡಿ ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.

ಇದನ್ನೂ ಓದಿ: ಬೀದಿನಾಯಿಗಳ ಅಟ್ಟಹಾಸಕ್ಕೆ ನಲುಗಿದ ಬಳ್ಳಾರಿ ಜನರು, ಗಣಿನಾಡಿನ ಆಸ್ಪತ್ರೆಯಲ್ಲೂ ಸಿಗತ್ತಿಲ್ಲ ಚುಚ್ಚುಮದ್ದು!

ಆದರ್ಶ ವಿದ್ಯಾಲಯದ ಕಡೆಗೆ ಎರಡೇ ಬಸ್ ಇದೆ. ಈ ಎರಡು ಬಸ್​ಗಳಲ್ಲಿ ಸುಮಾರು 400 ಮಕ್ಕಳು ಬರಬೇಕು. ಇಷ್ಟೊಂದು ಮಕ್ಕಳು ಎರಡು ಬಸ್​ಗಳನ್ನು ಹೋಗಲು ಸಾಧ್ಯವಿಲ್ಲ. ಇಂತಹ ಸಮಸ್ಯೆ ನಡುವೆ ಇಲ್ಲಿ ಕಾಡು ಪ್ರಾಣಿಗಳ ಭಯ ಇದೆ. ಹೀಗಾಗಿ ಇನ್ನೊಂದು ಎರಡು ಬಸ್​ಗಳ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ವಿದ್ಯಾರ್ಥಿನಿ ಸಾತ್ವಿಕ ಮನವಿ ಮಾಡಿಕೊಂಡಿದ್ದಾಳೆ.

ಒಟ್ಟಾರೆ ಮಕ್ಕಳು ಪ್ರತಿನಿತ್ಯ ಭಯದಿಂದಲೇ ಶಾಲೆಗೆ ಹೋಗುತ್ತಿದ್ದು ಯಾವ ಸಂದರ್ಭದಲ್ಲಿ ಚಿರತೆಗಳಂತಹ ಕಾಡು ಪ್ರಾಣಿಗಳು ತಮ್ಮ ದಾಳಿ ನಡೆಸುತ್ತವೆ ಎನ್ನುವ ಭಯ ಮಕ್ಕಳಲ್ಲಿ ಕಾಡುತ್ತಲೇ ಇದೆ. ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಮಕ್ಕಳು ನೆಮ್ಮದಿಯಿಂದ ಶಾಲೆಗೆ ಹೋಗಿ ಬರಲು ಒಳ್ಳೆಯ ವ್ಯವಸ್ಥೆ ಕಲ್ಪಿಸಲಿ ಎನ್ನುವುದೇ ನಮ್ಮ ಆಶಯ.

ವರದಿ: ದಿಲೀಪ್ ಚೌಡಹಳ್ಳಿ, ಟಿವಿ9 ಚಾಮರಾಜನಗರ

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?