AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿರತೆ ಭೀತಿ: ದೊಣ್ಣೆ ಹಿಡಿದುಕೊಂಡು ಬೆಳೆ ಕಟಾವು ಮಾಡುತ್ತಿರುವ ಗಂಡ-ಹೆಂಡತಿ

ಚಿರತೆ ಓಡಾಡಿದ ಮಾಹಿತಿ ತಿಳಿದ ಕೂಲಿಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಬೆಳೆ ಕಟಾವು ಮಾಡಲು ಕೃಷಿಕರು ಪರದಾಡುತ್ತಿದ್ದಾರೆ.

ಚಿರತೆ ಭೀತಿ: ದೊಣ್ಣೆ ಹಿಡಿದುಕೊಂಡು ಬೆಳೆ ಕಟಾವು ಮಾಡುತ್ತಿರುವ ಗಂಡ-ಹೆಂಡತಿ
ಚಿರತೆ ಬೀತಿಯಿಂದ ಕೃಷಿ ಕೆಲಸಗಳಿಗೆ ಬಾರದ ಕೂಲಿಯಾಳುಗಳು; ತೋಟದಲ್ಲಿ ದೊಣ್ಣೆ ಹಿಡಿದುಕೊಂಡು ಬೆಳೆ ಕಟಾವು ಮಾಡುತ್ತಿರುವ ಗಂಡ ಹೆಂಡತಿ Image Credit source: ಸಾಂದರ್ಭಿಕ ಚಿತ್ರ
TV9 Web
| Updated By: Rakesh Nayak Manchi|

Updated on:Dec 03, 2022 | 12:40 PM

Share

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಚೆನ್ನಾಪುರದಲ್ಲಿ ಚಿರತೆ ಪ್ರತ್ಯಕ್ಷ (Leopard spotted) ವಾಗಿರುವುದು ಜನರಲ್ಲಿ ಭೀತಿ ಹೆಚ್ಚಿಸಿದೆ. ಪರಿಣಾಮವಾಗಿ ಕೂಲಿಕಾರ್ಮಿಕರು (Labourers) ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದು, ಕಟಾವಿಗೆ ಬಂದ ಬೆಳೆಗಳನ್ನು ಕಟಾವು ಮಾಡಲು ಕೃಷಿಕರು ಪರದಾಡುವಂತಾಗಿದೆ. ಬೆಟ್ಟದ ತಪಲಿನ ಕಡೆ ಹೊಲಗಳಿರುವ ಕಾರಣ ಕೆಲಸಕ್ಕೆ ಕರೆದರೂ ಕೂಲಿ ಕಾರ್ಮಿಕರು ಬರುತ್ತಿಲ್ಲವೆಂದು ವಿಧಿಯಿಲ್ಲದೆ ದಂಪತಿಗಳೇ ತೋಟಕ್ಕಿಳಿದು ದೊಣ್ಣೆ ಹಿಡಿದುಕೊಂಡು ಬೆಳೆ ಕಟಾವು (Crop Harvesting) ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಚಿರತೆ ದಾಳಿ (Leopard Attack)ಯನ್ನು ತಡೆಯಲು ಗಂಡ ದೊಣ್ಣೆ ಹಿಡಿದುಕೊಂಡು ನಿಂತರೆ ಹೆಂಡತಿ ಕೊಯ್ಲಿಗೆ ಬಂದಿರುವ ರಾಗಿ ಬೆಳೆಗಳನ್ನು ಕಟಾವು ಮಾಡುವಲ್ಲಿ ನಿರತರಾಗಿದ್ದಾರೆ.

ಚಿರತೆ ಆತಂಕದ ‌ನಡುವೆಯು ಪ್ರವಾಸಿಗರ ಹುಚ್ಚಾಟ

ದೊಡ್ಡಬಳ್ಳಾಪುರ ತಾಲೂಕಿನ ಚೆನ್ನಾಪುರ ಬಳಿಯ ಚೆನ್ನಗಿರಿ‌ ಬೆಟ್ಟಕ್ಕೆ ಚಿರತೆ ಭೀತಿಯ ನಡುವೆಯೂ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಯುವಕ ಯುವತಿಯರು ಬೈಕ್​ಗಳಲ್ಲಿ ಬೆಟ್ಟಕ್ಕೆ ಟ್ರಕ್ಕಿಂಗ್ ಬರುತ್ತಿರುವ ಹಿನ್ನೆಲೆ ಅರಣ್ಯ ಇಲಾಖೆಯಿಂದ ಪ್ರವೇಶ ನಿಷೇಧ ಬೋರ್ಡ್ ಅಳವಡಿಕೆ ಮಾಡಲಾಗಿದೆ. ಆದರೂ ಬೆಟ್ಟಕ್ಕೆ ಪ್ರವಾಸಿಗರು ಆಗಮಿಸುತ್ತಿದ್ದಾರೆ.

ರಾಜ್ಯದಲ್ಲಿ ಅದರಲ್ಲೂ ಬೆಂಗಳೂರು, ಮೈಸೂರು ಮತ್ತು ಮಂಡ್ಯದಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಚಿರತೆ ದಾಳಿಗೆ ಸಾಕು ಪ್ರಾಣಿಗಳು ಮಾತ್ರವಲ್ಲದೆ ಜನರ ಕೂಡ ಬಲಿಯಾಗಿದ್ದಾರೆ. ಮೈಸೂರಿನ ಟಿ.ನರಸೀಪುರ ತಾಲೂಕಿನಲ್ಲಿ ಇಬ್ಬರು ಚಿರತೆ ದಾಳಿಗೆ ಬಲಿಯಾಗಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ತಿಮ್ಕಾಪುರ ದಡ ಗ್ರಾಮದಲ್ಲಿ ಚಿರತೆ ದಾಳಿಗೆ ಹಸು ಬಲಿಯಾಗಿದ್ದು, ಹುಣಸೂರು ತಾಲೂಕಿನಲ್ಲಿ ಕಳೆದ ಒಂದು ವಾರದಲ್ಲಿ 7 ಸಾಕು ಪ್ರಾಣಿಗಳು ಹುಲಿ ದಾಳಿಗೆ ಬಲಿಯಾಗಿವೆ. ಕಳೆದ ಒಂದು ವಾರದಿಂದ ಚಿರತೆ ಕಾಡಿನಿಂದ ನಾಡಿಗೆ ಬರುತ್ತಿದ್ದು, ಸ್ಥಳದಲ್ಲಿ ಬೋನು ಇಡುವಂತೆ ಗ್ರಾಮಸ್ಥರ ಅರಣ್ಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಬೆಂಗಳೂರಿನ ತುರಹಳ್ಳಿ ಬಳಿ ಜಿಂಕೆಯನ್ನ ಬೇಟೆಯಾಡಿರುವ ಚಿರತೆ (Leopard hunting deer)ಯ ವಿಡಿಯೋ ವೈರಲ್ (Viral video) ಆದ ನಂತರ ಜನರು ಭಯಭೀತರಾಗಿದ್ದಾರೆ. ಕೆಂಗೇರಿ ಸಮೀಪದ ಕೋಡಿಪಾಳ್ಯ, ಚಟ್ಟಿಪಾಳ್ಯ ನಿವಾಸಿಗಳಲ್ಲಿ ಭೀತಿ ಹೆಚ್ಚಿಸಿದೆ. ತುರಹಳ್ಳಿ ಗ್ರಾಮಕ್ಕೆ ಹೊಂದಿಕೊಂಡು ಕಗ್ಗಲೀಪುರ-ತುರಹಳ್ಳಿ ಅರಣ್ಯ ಪ್ರದೇಶವಿದ್ದು, ಸೋಂಪುರ, ಶ್ರೀನಿವಾಸಪುರ, ಆರ್​.ಆರ್​.ನಗರ, ಮೈಲಸಂದ್ರ, ಕೋಡಿಪಾಳ್ಯ, ಗೆಟ್ಟಿಗರಹಳ್ಳಿಯನ್ನ ಸುತ್ತುವರಿದಿದೆ. ಈ ಅರಣ್ಯ ಪ್ರದೇಶವು 514.26 ಎರಕೆ ವಿಸ್ತೀರ್ಣದಲ್ಲಿದೆ. ಐಟಿಸಿ ಪ್ಯಾಕ್ಟರಿಯಲ್ಲಿ ಚಿರತೆ ಪ್ರತ್ಯಕ್ಷ ಹಿನ್ನೆಲೆ ಚೀತಾ ಕೂಂಬಿಂಗ್ ಮುಂದುವರಿದಿದೆ.

ಮಂಡ್ಯದಲ್ಲಿ ಮನೆ ಮುಂದೆ ಮಲಗಿದ್ದ ಶ್ವಾನದ ಮೇಲೆ ದಾಳಿ ನಡೆಸಿದ್ದ ಚಿರತೆ ಒಂದು ತಿಂಗಳು ಕಳೆದರೂ ಯಾರ ಕಣ್ಣಿಗೂ ಬಿದ್ದಿಲ್ಲ. ಮಳವಳ್ಳಿ ತಾಲೂಕಿನ ದನಗೂರು ಫಾರ್ಮ್ ಹೌಸ್​ನಲ್ಲಿ ಶ್ವಾನದ ಮೇಲಿನ ಚಿರತೆ ದಾಳಿಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳೆದ 15 ದಿನಗಳ ಹಿಂದೆ ನಡೆದ ಈ ಘಟನೆಯಲ್ಲಿ ಚಿರತೆ ದಾಳಿಯಿಂದ ಕೂದಲೆಳೆ ಅಂತದಲ್ಲಿ ಶ್ವಾನ ಪ್ರಾಣಾಪಾಯದಿಂದ ಪಾರಾಗಿತ್ತು.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:14 am, Sat, 3 December 22

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!