ಮೈಸೂರು: ಮೂರು ವರ್ಷಗಳ ಸುದೀರ್ಘ ಅವಧಿಗೆ ಕೆಲಸಕ್ಕೇ ಬಾರದೆ ಅಧಿಕಾರಿಯೊಬ್ಬ ವೇತನ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮೈಸೂರು ಜಿಲ್ಲೆ ಹೆಚ್.ಡಿ. ಕೋಟೆ ಪುರಸಭೆ ಸದಸ್ಯರ ಸಾಮಾನ್ಯ ಸಭೆಯಲ್ಲಿ ಸಾಮಾನ್ಯ ಸಭೆಯಲ್ಲಿ ಈ ಅಕ್ರಮ ಬಟಾಬಯಲಾಗಿದೆ. ಪುರಸಭೆ ಸಂಘಟನಾಧಿಕಾರಿ ಉಮಾಶಂಕರ್ ವಿರುದ್ಧ ಈ ದೂರು ಕೇಳಿಬಂದಿದ್ದು, ಈತ ಆಬ್ಸೆಂಟ್ ಆಗಿದ್ದರೂ ಪ್ರತಿ ತಿಂಗಳೂ 45 ಸಾವಿರ ರೂ. ಪಡೆದಿದ್ದಾರೆ ಎನ್ನಲಾಗಿದೆ.
ಕೆಲಸಕ್ಕೆ ಗೈರು ಹಾಜರಾಗಿದ್ದರೂ ಹೆಚ್.ಡಿ. ಕೋಟೆ ಪುರಸಭೆಯ ಸಂಘಟನಾಧಿಕಾರಿಗೆ ವೇತನ ಪಾವತಿಯಾಗಿದೆ ಎಂದು ಶಾಸಕ ಅನಿಲ್ ಚಿಕ್ಕಮಾದುಗೆ ಪುರಸಭೆ ಸದಸ್ಯರಿಂದ ದೂರು ನೀಡಲಾಗಿದೆ. ಪುರಸಭೆಯ ಸಂಘಟನಾಧಿಕಾರಿ ಎಸ್. ಉಮಾಶಂಕರ್ ವಿರುದ್ಧ ದೂರು ಕೇಳಿಬಂದಿದ್ದು, ಮೂರು ವರ್ಷಗಳ ಕಾಲ ಕರ್ತವ್ಯಕ್ಕೆ ಹಾಜರಾಗದ ಈ ಅಧಿಕಾರಿ ಪ್ರತಿ ತಿಂಗಳು 45 ಸಾವಿರ ರೂ. ಪಡೆದಿದ್ದಾರೆ ಎನ್ನಲಾಗಿದೆ. ದಾಖಲಾತಿ ತಿದ್ದುಪಡಿ ಮಾಡಿ ಹಿರಿಯ ಅಧಿಕಾರಿಯಿಂದ ತಮ್ಮ ಖಾತೆಗೆ ವೇತನ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ವೇತನ ಪಡೆದ ಉಮಾಶಂಕರ್ ವಿರುದ್ಧ ಕ್ರಮಕ್ಕೆ ಆಗ್ರಹ:
ಅಬ್ಸೆಂಟ್ ಆಗಿದ್ದರೂ ಪ್ರತಿ ತಿಂಗಳೂ ವರ್ಷಗಟ್ಟಲೆ ಲಕ್ಷಾಂತರ ರೂಪಾಯಿ ವೇತನ ಪಡೆದ ಉಮಾಶಂಕರ್ ವಿರುದ್ಧ ತನಿಖೆ ನಡೆಸಿ, ಸಂಪೂರ್ಣ ವರದಿ ನೀಡಲು ಶಾಸಕ ಚಿಕ್ಕಮಾದು ಮೇಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಹಿಂದೆ ಇದ್ದ ಪುರಸಭೆ ಮುಖ್ಯಾಧಿಕಾರಿ ವೇತನ ಮಂಜೂರು ಮಾಡಿದ್ದಾರೆ ಎಂದು ಅನುಮಾನ ವ್ಯಕ್ತವಾಗಿದ್ದು, ತಿಂಗಳ ಹಿಂದಷ್ಟೇ ಅಧಿಕಾರ ವಹಿಸಿಕೊಂಡಿರುವ ನೂತನ ಮುಖ್ಯಾಧಿಕಾರಿ ಹೆಗಲಿಗೆ ಹಗರಣದ ತನಿಖೆ ಜವಾಬ್ದಾರಿ ವಹಿಸಲಾಗಿದೆ.
(Mysore HD Kote municipal officer umashankar absent from duty for 3 years but given salary monthly)