Mysore Zoo: ಮಂಗಳವಾರ ರಜೆ ದಿನವೂ ಮೈಸೂರು ಮೃಗಾಲಯ ಓಪನ್​

| Updated By: ವಿವೇಕ ಬಿರಾದಾರ

Updated on: Dec 26, 2023 | 8:31 AM

ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಚಾಮರಾಜೇಂದ್ರ ಮೃಗಾಲಯದ ವಾರದ ರಜೆ ರದ್ದು ಮಾಡಲಾಗಿದೆ. ಹೀಗಾಗಿ ಮೃಗಾಲಯ ಇಂದು (ಡಿ.26) ಸಹ ತೆರೆಯಲಿದೆ. ಹೀಗಾಗಿ ಮೃಗಾಲಯ ಇಂದು (ಡಿ.26) ಸಹ ತೆರೆದಿರಲಿದೆ ಎಂದು ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ಡಿ ಮಹೇಶ್ ಕುಮಾರ್ ಟಿವಿ9 ಡಿಜಿಟಲ್​ಗೆ ಮಾಹಿತಿ ನೀಡಿದ್ದಾರೆ.

Mysore Zoo: ಮಂಗಳವಾರ ರಜೆ ದಿನವೂ ಮೈಸೂರು ಮೃಗಾಲಯ ಓಪನ್​
ಮೈಸೂರು ಮೃಗಾಲಯ
Follow us on

ಮೈಸೂರು, ಡಿಸೆಂಬರ್​​ 26: ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಚಾಮರಾಜೇಂದ್ರ ಮೃಗಾಲಯದ (Mysore Zoo) ವಾರದ ರಜೆ (Weekly Holiday) ರದ್ದು ಮಾಡಲಾಗಿದೆ. ಹೀಗಾಗಿ ಮೃಗಾಲಯ ಇಂದು (ಡಿ.26) ಸಹ ತೆರೆಯಲಿದೆ. ಪ್ರತಿ ಮಂಗಳವಾರ ಮೃಗಾಲಯಕ್ಕೆ ವಾರದ ರಜೆ ಇರುತ್ತದೆ. ಆದರೆ ಈ ಬಾರಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರಿಗೆ ಆಗಮಿಸಿರುವ ಹಿನ್ನೆಲೆಯಲ್ಲಿ ವಾರದ ರಜೆ ರದ್ದು ಮಾಡಿ, ಎಂದಿನಂತೆ ಮೃಗಾಲಯ ತೆರೆದಿರಲಿದೆ ಎಂದು ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ಡಿ ಮಹೇಶ್ ಕುಮಾರ್ ಟಿವಿ9 ಡಿಜಿಟಲ್​ಗೆ ಮಾಹಿತಿ ನೀಡಿದ್ದಾರೆ.

ದಾಖಲೆ ಪ್ರಮಾಣದಲ್ಲಿ ಪ್ರವಾಸಿಗರ ಆಗಮನ

ಸಾಲು ಸಾಲು ರಜೆಯ ಕಾರಣದಿಂದಾಗಿ ಮೃಗಾಲಯಕ್ಕೆ ಶನಿವಾರದಿಂದ ಸೋಮವಾರದವರೆಗೆ ದಾಖಲೆ ಸಂಖ್ಯೆಯಲ್ಲಿ ಅಂದರೆ 1.01 ಲಕ್ಷ ಸಂದರ್ಶಕರು ಭೇಟಿ ನೀಡಿದ್ದರು. ಕಳೆದ ವರ್ಷ ಇದೇ ದಿನಗಳಲ್ಲಿ ಒಟ್ಟು 77,833 ಮಂದಿ ಬಂದಿದ್ದರು.

ಸಂದರ್ಶಕರ ಭೇಟಿ ಅಂಕಿ-ಅಂಶ
2022 2023 ದಿನಾಂಕ
16,682 25,860 ಡಿ.23
26,355 40,761 ಡಿ.24
34,796 35,344 ಡಿ.25
77,833 1,01,96 ಒಟ್ಟು

ಕ್ರಿಸ್‌ಮಸ್‌ ದಿನವಾದ ಸೋಮವಾರ 35,344 ವೀಕ್ಷಕರು ಭೇಟಿ ನೀಡಿದ್ದರು. ಭಾನುವಾರ (ಡಿ.24) ದಾಖಲೆಯ 40,761 ಜನ ಬಂದಿದ್ದರು. 2018ರ ಡಿ.24ರಂದು 40,675 ಸಂದರ್ಶಕರು ಭೇಟಿ ನೀಡಿದ್ದರು ಎಂದು ಮೃಗಾಲಯ ತಿಳಿಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ