ಮೈಸೂರಿನಲ್ಲಿ ಮಹಿಷಾಸುರ ವಿಚಾರವಾಗಿ ಮತ್ತೆ ಸಂಘರ್ಷ: ದಲಿತ ಸಮಿತಿ, ಭಕ್ತರ ನಡುವೆ ಮಾತಿನ ಚಕಮಕಿ
ನಂಜುಂಡೇಶ್ವರ, ಪಾರ್ವತಿ ದೇವರ ಉತ್ಸವ ಮೂರ್ತಿ ಹೊತ್ತವರು ಮಹಿಷಾಸುರ ರಂಗೋಲಿ ತುಳಿದು ಅಳಿಸಿ ಹಾಕುವುದು ವಾಡಿಕೆ. ನಾವು ಮಹಿಷಾಸುರನನ್ನು ರಾಜ ಎಂದು ಪೂಜಿಸುತ್ತೇವೆ. ಇದು ನಮ್ಮ ಭಾವನೆಗೆ ದಕ್ಕೆಯಾಗುತ್ತೆ ಎಂದು ಮುಖಂಡರು ಪಟ್ಟು ಹಿಡಿದಿದ್ದಾರೆ. ತಲತಲಾಂತರದಿಂದ ಈ ಪದ್ದತಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಭಕ್ತರು ಹೇಳಿದ್ದಾರೆ. ಸದ್ಯ ಈ ವಿಚಾರವಾಗಿ ಎರಡು ಗುಂಪುಗಳ ನಡುವೆ ಸಂಘರ್ಷ ಉಂಟಾಗಿದೆ.
ಮೈಸೂರು, ಡಿಸೆಂಬರ್ 26: ಮಹಿಷಾಸುರ (Mahishasura) ವಿಚಾರವಾಗಿ ಮತ್ತೆ ಸಂಘರ್ಷ ಶುರುವಾಗಿದೆ. ನಂಜನಗೂಡು ದೇವಾಲಯದ ಬಳಿ ದಲಿತ ಸಂಘರ್ಷ ಸಮಿತಿ ಹಾಗೂ ನಂಜುಂಡೇಶ್ವರ ಭಕ್ತರ ನಡುವೆ ಮಾತಿನ ಚಕಮಕಿ ಉಂಟಾಗಿದೆ. ನಂಜುಂಡೇಶ್ವರ, ಪಾರ್ವತಿ ದೇವರ ಉತ್ಸವ ಮೂರ್ತಿ ಹೊತ್ತವರು ಮಹಿಷಾಸುರ ರಂಗೋಲಿ ತುಳಿದು ಅಳಿಸಿ ಹಾಕುವುದು ವಾಡಿಕೆ. ನಾವು ಮಹಿಷಾಸುರನನ್ನು ರಾಜ ಎಂದು ಪೂಜಿಸುತ್ತೇವೆ. ಇದು ನಮ್ಮ ಭಾವನೆಗೆ ದಕ್ಕೆಯಾಗುತ್ತೆ ಎಂದು ಮುಖಂಡರು ಪಟ್ಟು ಹಿಡಿದಿದ್ದಾರೆ.
ತಲತಲಾಂತರದಿಂದ ಈ ಪದ್ದತಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಭಕ್ತರು ಹೇಳಿದ್ದಾರೆ. ಸದ್ಯ ಈ ವಿಚಾರವಾಗಿ ಎರಡು ಗುಂಪುಗಳ ನಡುವೆ ಸಂಘರ್ಷ ಉಂಟಾಗಿದೆ.
ಇದನ್ನೂ ಓದಿ: ಅ.13 ರಂದು ಮಹಿಷ ದಸರಾ, ಆಹ್ವಾನ ಪತ್ರಿಕೆ ಬಿಡುಗಡೆ, ಚಾಮುಂಡಿಬೆಟ್ಟಕ್ಕೆ ಮಹಿಷ ಬೆಟ್ಟ ಹೆಸರು
ಪ್ರತಿವರ್ಷ ನಂಜುಂಡೇಶ್ವರ ದೇಗುಲ ಬಳಿ ರಂಗೋಲಿ ಬಿಡಿಸಲಾಗುತ್ತದೆ. ಬಿಡಿಸಿದ ರಂಗೋಲಿಯನ್ನು ಕಾಲಿನಲ್ಲಿ ತುಳಿದು ಅಳಿಸಲಾಗುತ್ತದೆ. ಈ ದಿನವನ್ನು ಅಂದಕಾಸುರ ಸಂಹಾರ ದಿನ ಎಂದು ಆಚರಿಸಲಾಗುತ್ತದೆ. ನಂತರ ತೇರಿನ ಬೀದಿಯಲ್ಲಿ ಉತ್ಸವ ಮೂರ್ತಿ ಮೆರವಣಿಗೆ ಮಾಡಲಾಗುತ್ತೆ. ಆದರೆ ಇದನ್ನು ಮಾಡಬಾರದೆಂದು ದಲಿತ ಮುಖಂಡರಿಂದ ವಿರೋಧ ವ್ಯಕ್ತಪಡಿಸಿದ್ದಾರೆ.
ಮಹಿಷಾ ದಸರಾ ಆಚರಣೆ ವಿಚಾರ ಸಾಕಷ್ಟು ಜಟಾಪಟಿಗೆ ಕಾರಣವಾಗಿತ್ತು. ಇದನ್ನ ವಿರೋಧಿಸಿ ಬಿಜೆಪಿ ಚಾಮುಂಡಿ ಬೆಟ್ಟ ಚಲೋ ಹಮ್ಮಿಕೊಂಡಿತ್ತು. ಆದರೆ ಇಷ್ಟೆಲ್ಲ ವಿವಾದದ ಬೆನ್ನಲ್ಲೆ ಕೆಲವು ಷರತ್ತು ಬದ್ದ ಅನುಮತಿಯಿಂದ ಮಹೋತ್ಸವನ್ನ ನಗರದ ಪುರಭವನದ ಆವರಣದಲ್ಲಿ ಆಚರಣೆ ಮಾಡಲಾಗಿತ್ತು. ಮೊದಲಿಗೆ ನಿರೀಕ್ಷಿತ ಮಟ್ಟದಲ್ಲಿ ಕಾರ್ಯಕ್ರಮಕ್ಕೆ ಜನರು ಬಂದಿದ್ದು ನೋಡಿ ಆಯೋಜಕರು ಖುಷಿಯಾಗಿದ್ದರು.
ಇದನ್ನೂ ಓದಿ: ಅ.15ಕ್ಕೆ ಉಡುಪಿಯಲ್ಲಿ ಮಹಿಷಾ ದಸರಾ ಆಚರಣೆ, ದ್ರಾವಿಡ ದೊರೆ ಮಹಿಷ ಬಗ್ಗೆ ಜಾಗೃತಿ ಕಾರ್ಯಕ್ರಮ
ನಂತರ ಪ್ರೋ ಭಗವಾನ್ ಮಾತುಗಳು ಮತ್ತೆ ವಿವಾದದ ಕಿಡಿ ಹೊತ್ತಿಸಿತ್ತು. ಪ್ರೋ. ಭಗವಾನ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷತೆ ವಹಿಸಿ ಕಾರ್ಯಕ್ರಮದ ಕೊನೆಯಲ್ಲಿ ಮಾಡಿದ ಭಾಷಣ ವಿವಾದ ಎಬ್ಬಿಸಿತ್ತು. ಒಕ್ಕಲಿಗರು ಸಂಸ್ಕೃತಿ ಹೀನಾರು, ಈ ಮಾತನ್ನು ನಾನು ಹೇಳಿಲ್ಲ. ಈ ಮಾತನ್ನು ಕುವೆಂಪುರು ಹೇಳಿದ್ದು. ಈ ಮಾತನ್ನು ನಾನು ಹೇಳಿದ್ರೆ ಹೊಡೆಯೋಕೆ ಬರ್ತಿದ್ರು. ನಿಜ ಹೇಳಿದವರನ್ನು ಯಾರು ಬಿಡಲ್ಲ, ಆದರೆ ನಿಜ ಹೇಳಿಯೇ ಸಾಯಬೇಕು ಅಂತ ಹೇಳಿ ವಿವಾದ ಕಿಡಿ ಹೊತ್ತಿಸಿದ್ದಾರೆ ಎಂದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:27 pm, Tue, 26 December 23