ಕೋರ್ಟ್​ಗೆ 3 ಬಾರಿ ಗೈರು; ಶಾಸಕ ಸಾ ರಾ ಮಹೇಶ್​ಗೆ ಸಮನ್ಸ್

| Updated By: guruganesh bhat

Updated on: Oct 04, 2021 | 3:29 PM

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗ್ರಾಮದ ಹೊಸ ರಾಮೇನಹಳ್ಳಿಯ ಲೋಕೇಶ್ ಎಂಬ ವ್ಯಕ್ತಿಯ ವಿರುದ್ಧ ಶಾಸಕ ಸಾ.ರಾ.ಮಹೇಶ್ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷಿ ಹೇಳಲು ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಲಾಗಿದೆ.

ಕೋರ್ಟ್​ಗೆ 3 ಬಾರಿ ಗೈರು; ಶಾಸಕ ಸಾ ರಾ ಮಹೇಶ್​ಗೆ ಸಮನ್ಸ್
ಸಾ ರಾ ಮಹೇಶ್
Follow us on

ಮೈಸೂರು: ಕೊಲೆ ಬೆದರಿಕೆ, ಸಮಾಜದ ಶಾಂತಿ ಕದಡಿದ ಆರೋಪದಡಿ  ಶಾಸಕ ಸಾ.ರಾ.ಮಹೇಶ್‌ ದಾಖಲಿಸಿದ್ದ ಪ್ರಕರಣದಡಿ ಅವರಿಗೆ 8ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಸಮನ್ಸ್ ನೀಡಿದೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗ್ರಾಮದ ಹೊಸ ರಾಮೇನಹಳ್ಳಿಯ ಲೋಕೇಶ್ ಎಂಬ ವ್ಯಕ್ತಿಯ ವಿರುದ್ಧ ಶಾಸಕ ಸಾ.ರಾ.ಮಹೇಶ್ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷಿ ಹೇಳಲು ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಲಾಗಿದೆ.

2021ರ ಫೆಬ್ರವರಿಯಲ್ಲಿ ಶಾಸಕ ಸಾ.ರಾ.ಮಹೇಶ್ ಈ ಕುರಿತು ದೂರು ನೀಡಿದ್ದರು. ಲಕ್ಷ್ಮೀಪುರಂ ಪೊಲೀಸರು ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಆದರೆ ಪ್ರಕರಣದ ವಿಚಾರಣೆಯ ವೇಳೆ ಶಾಸಕ ಸಾ.ರಾ.ಮಹೇಶ್ 3 ಬಾರಿ ಗೈರಾಗಿದ್ದರು. ಹೀಗಾಗಿ ಅಕ್ಟೋಬರ್ 27ರಂದು ಕೋರ್ಟ್‌ಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ.

ಏನಿದು ಪ್ರಕರಣ
ವಿಶ್ವನಾಥ್ ಹಣ ಪಡೆದಿದ್ದಾರೆ ಎಂದು ಶಾಸಕ ಸಾ.ರಾ.ಮಹೇಶ್ ದೂರಿದ್ದರು. ಈ ಆರೋಪವನ್ನು ಪ್ರಶ್ನಿಸಿ ಲೋಕೇಶ್ ಅವರು ಸಾ.ರಾ.ಮಹೇಶ್‌ಗೆ ಪೋನ್ ಮಾಡಿ ಏಕೆ ನೀವು ವಿಶ್ವನಾಥ್ ವಿರುದ್ದ ಈ ರೀತಿ ಆರೋಪ‌ ಮಾಡಿದ್ದೀರಾ? ಎಂದು ಪ್ರಶ್ನಿಸಿ ತರಾಟೆ ತೆಗೆದುಕೊಂಡಿದ್ದರು. ಈ ವಿಚಾರವಾಗಿ ಶಾಸಕ ಸಾ.ರಾ. ಮಹೇಶ್ ಕೊಲೆ ಬೆದರಿಕೆ ಸಮಾಜದ ಶಾಂತಿ ಕದಡಿದ ಆರೋಪದಡಿ ಪ್ರಕರಣ ದಾಖಲಿಸಿದ್ದರು.

ಇದನ್ನೂ ಓದಿ:

 ಅಧಿಕಾರಿಗಳು ನನ್ನನ್ನು ಬ್ಲ್ಯಾಕ್​ಮೇಲ್​ ಮಾಡುವ ಪ್ರಯತ್ನದಲ್ಲಿದ್ದರೆ ಅವರು ತಮ್ಮ ಹಾಳು ಮಾಡಿಕೊಳ್ಳುತ್ತಿದ್ದಾರೆ: ಸಾ ರಾ ಮಹೇಶ್

ನನ್ನ ಕಲ್ಯಾಣ ಮಂಟಪಕ್ಕೆ ಸಿಗುತ್ತಿರುವ ಪ್ರಚಾರ ಕಂಡು ಖುಷಿಯಾಗುತ್ತಿದೆ ಎಂದ ಶಾಸಕ ಸಾ ರಾ ಮಹೇಶ್