Mysuru Dasara Gold Card: ಮೈಸೂರು ದಸರಾ ಗೋಲ್ಡ್ ಕಾರ್ಡ್ ಖರೀದಿಗೆ ಮತ್ತೆ ಅವಕಾಶ

| Updated By: Rakesh Nayak Manchi

Updated on: Oct 21, 2023 | 8:16 PM

ದಸರಾ ಉತ್ಸವವನ್ನು ವೀಕ್ಷಿಸಲು ದೇಶ, ವಿದೇಶಗಳಿಂದ ಆಗಮಿಸುವ ಪ್ರವಾಸಿಗರು ಹಾಗೂ ಸಾರ್ವಜನಿಕರಿಗಾಗಿ ಗೋಲ್ಡ್​​ ಕಾರ್ಡ್​​​ ಸೌಲಭ್ಯವನ್ನು ಜಿಲ್ಲಾಡಳಿತ ನೀಡಿತ್ತು. ಇದೀಗ ಮತ್ತೆ ಗೋಲ್ಡ್ ಕಾರ್ಡ್​ ಖರೀದಿಗೆ ಜಿಲ್ಲಾಧಿಕಾರಿ ಕೆವಿ ರಾಜೇಂದ್ರ ಅವರು ಅವಕಾಶ ನೀಡಿದ್ದು, ನಾಳೆಯಿಂದ ಖರೀದಿಸಬಹುದಾಗಿದೆ.

Mysuru Dasara Gold Card: ಮೈಸೂರು ದಸರಾ ಗೋಲ್ಡ್ ಕಾರ್ಡ್ ಖರೀದಿಗೆ ಮತ್ತೆ ಅವಕಾಶ
ಮೈಸೂರು ದಸರಾ
Follow us on

ಮೈಸೂರು, ಅ.21: ದಸರಾ (Mysuru Dasara) ಉತ್ಸವವನ್ನು ವೀಕ್ಷಿಸಲು ದೇಶ, ವಿದೇಶಗಳಿಂದ ಆಗಮಿಸುವ ಪ್ರವಾಸಿಗರು ಹಾಗೂ ಸಾರ್ವಜನಿಕರಿಗಾಗಿ ಗೋಲ್ಡ್​​ ಕಾರ್ಡ್​​​ ಸೌಲಭ್ಯವನ್ನು ಜಿಲ್ಲಾಡಳಿತ ನೀಡಿತ್ತು. ಇದೀಗ ಮತ್ತೆ ಗೋಲ್ಡ್ ಕಾರ್ಡ್​ ಖರೀದಿಗೆ ಜಿಲ್ಲಾಧಿಕಾರಿ ಕೆವಿ ರಾಜೇಂದ್ರ ಅವರು ಅವಕಾಶ ನೀಡಿದ್ದು, ನಾಳೆಯಿಂದ ಖರೀದಿಸಬಹುದಾಗಿದೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ ಜಿಲ್ಲಾಧಿಕಾರಿ ರಾಜೇಂದ್ರ, ಗೋಲ್ಡ್ ಕಾರ್ಡ್, ಟಿಕೆಟ್‌ಗೆ ಬೇಡಿಕೆ ಹೆಚ್ಚಾದ ಹಿನ್ನೆಲೆ ಮತ್ತೆ ಅವಕಾಶ ನೀಡಲಾಗಿದೆ. ಐತಿಹಾಸಿಕ ಮೈಸೂರು ದಸರಾ ಜಂಬೂಸವಾರಿ ವೀಕ್ಷಣೆ ಹಾಗೂ ಪಂಜಿನ ಕವಾಯತು ವೀಕ್ಷಣೆಗಾಗಿ ಗೋಲ್ಡ್ ಕಾರ್ಡ್, ಟಿಕೆಟ್ ಮಾರಾಟ ಮಾಡಲಾಗುತ್ತಿದೆ.

ಇದನ್ನೂ ಓದಿ: ನಾಗರಬಾವಿಯಲ್ಲಿ ನವರಾತ್ರಿ: ಮೈಸೂರು ದಸರಾ ರೀತಿಯಲ್ಲಿ ತೆರಿಗೆ ಅಧಿಕಾರಿ ಮನೆಯಲ್ಲಿ ಗೊಂಬೆಗಳ ಕಲರವ, ನೀವೂ ನೋಡ ಬನ್ನಿ

ಹೆಚ್ಚಿನ ಆಸನ ವ್ಯವಸ್ಥೆ ಕಲ್ಪಿಸಿ ನಾಳೆ ಗೋಲ್ಡ್ ಕಾರ್ಡ್ ಖರೀದಿಗೆ ಅವಕಾಶ ನೀಡಲಾಗುತ್ತಿದ್ದು, ಬೆಳಗ್ಗೆ 10 ಗಂಟೆಯಿಂದ ವೆಬ್‌ಸೈಟ್‌ ಮೂಲಕ ಖರೀದಿಗೆ ಅವಕಾಶ ನೀಡಲಾಗಿದೆ. ಜಂಬೂಸವಾರಿ ವೀಕ್ಷಣೆ ಹಾಗೂ ಪಂಜಿನ ಕವಾಯತು ವೀಕ್ಷಣೆ ಮಾಡಲು ಇಚ್ಚಿಸುವವರು mysoredasara.gov.in ವೆಬ್‌ಸೈಟ್‌ ಮೂಲಕ ಖರೀದಿ ಮಾಡಬಹುದು.

ಆಸಕ್ತರು ವೆಬ್​ಸೈಟ್​ ಮೂಲಕ ಮಾತ್ರ ಗೋಲ್ಡ್ ಖರೀದಿ ಮಾಡಬಹುದು. ಇತರೆ ಯಾವುದೇ ರೀತಿಯಲ್ಲೂ ಗೋಲ್ಡ್‌ ಕಾರ್ಡ್‌, ಟಿಕೆಟ್ ಮಾರಾಟವಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದಸರಾ ಜಂಬೂಸವಾರಿ ವೀಕ್ಷಣೆಗೆ ಗೋಲ್ಡ್ ಕಾರ್ಡ್ ದರ 6 ಸಾವಿರ ರೂಪಾಯಿ ಆಗಿದ್ದು, ಟಿಕೆಟ್‌ಗೆ 3 ಸಾವಿರ ರೂ. ಮತ್ತು 2 ಸಾವಿರ ರೂ. ನಿಗದಿ ಮಾಡಲಾಗಿದೆ. ಪಂಜಿನ ಕವಾಯಿತು ವೀಕ್ಷಣೆಗೆ 500 ರೂ. ನಿಗದಿ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ