Sign In

By signing in or creating an account, you agree with Associated Broadcasting Company's Terms & Conditions and Privacy Policy.

Mysuru Dasara 2023: ಯದುವೀರ್ ಪೂಜೆ ವೀಕ್ಷಿಸಿದ ಮಗ ಆದ್ಯವೀರ್ ಒಡೆಯರ್

Mysuru Dasara 2023: ಯದುವೀರ್ ಪೂಜೆ ವೀಕ್ಷಿಸಿದ ಮಗ ಆದ್ಯವೀರ್ ಒಡೆಯರ್

ದಿಲೀಪ್​, ಚೌಡಹಳ್ಳಿ
| Updated By: ಆಯೇಷಾ ಬಾನು

Updated on: Oct 20, 2023 | 1:31 PM

ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್​ ಅವರು ಮೈಸೂರಿನ ಅರಮನೆಯಲ್ಲಿ ವಿದ್ಯಾದೇವತೆ ಸರಸ್ವತಿಯ ಪೂಜೆ ನೆರವೇರಿಸಿದ್ದಾರೆ. ಅರಮನೆಯ ಗ್ರಂಥಭಂಡಾರ ವೀಣೆಗಳನ್ನು ಇರಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಮೈಸೂರು, ಅ.20: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಆರನೇ ದಿನಕ್ಕೆ ಕಾಲಿಟ್ಟಿದ್ದು ಅರಮನೆಯಲ್ಲಿ ವಿದ್ಯಾದೇವತೆ ಸರಸ್ವತಿಯ ಪೂಜೆ ನೆರವೇರಿದೆ. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್​ ಅವರು ಮೈಸೂರಿನ ಅರಮನೆಯಲ್ಲಿ ವಿದ್ಯಾದೇವತೆ ಸರಸ್ವತಿಯ ಪೂಜೆ ನೆರವೇರಿಸಿದ್ದಾರೆ. ಅರಮನೆಯ ಗ್ರಂಥಭಂಡಾರ ವೀಣೆಗಳನ್ನು ಇರಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಯದವೀರ್ ಒಡೆಯರ್ ಅವರು ಸರಸ್ವತಿ ಪೂಜೆ ನೆರವೇರಿಸಿದ್ದನ್ನು ಪುತ್ರ ಆದ್ಯವೀರ್ ತದೇಕಚಿತ್ತದಿಂದ ವೀಕ್ಷಿಸುತ್ತಿರುವುದು ಮುದ್ದಾಗಿತ್ತು.

ಮೈಸೂರಿನಲ್ಲಿ ಇಂದು ನಡೆಯಲಿರುವ ಕಾರ್ಯಕ್ರಮಗಳ ಪಟ್ಟಿ

ಯುವ ದಸರಾದಲ್ಲಿಂದು ವಿವಿಧ ತಂಡಗಳಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7 ಗಂಟೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಆಲ್ ಓಕೆ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದ್ದು ನಂತರ ಸಲೀಂ ಸುಲೈಮಾನ್ ತಂಡದಿಂದ ಕಾರ್ಯಕ್ರಮ ನಡೆಯಲಿದೆ.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ