Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಕುಮಾರ್ ಬೆಳಗಾವಿ ಬರುವ ವಿಚಾರ ಜಿಲ್ಲೆಯ ಶಾಸಕರಿಗೆ ಗೊತ್ತಿರಲಿಲ್ಲ: ಲಕ್ಷ್ಮಣ ಸವದಿ, ಶಾಸಕ

ಶಿವಕುಮಾರ್ ಬೆಳಗಾವಿ ಬರುವ ವಿಚಾರ ಜಿಲ್ಲೆಯ ಶಾಸಕರಿಗೆ ಗೊತ್ತಿರಲಿಲ್ಲ: ಲಕ್ಷ್ಮಣ ಸವದಿ, ಶಾಸಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 20, 2023 | 2:38 PM

ಶಿವಕುಮಾರ್ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹುಕ್ಕೇರಿಗೆ ಆಗಮಿಸಿದ್ದರು ಮತ್ತು ಅವರ ಪ್ರವಾಸದ ಬಗ್ಗೆ ಬೆಳಗಾವಿಯ ಶಾಸಕರಿಗಾಗಲೀ, ಕಾಂಗ್ರೆಸ್ ಜಿಲ್ಲಾ ಘಟಕದ ಪದಾಧಿಕಾರಿಗಳಿಗಾಗಲೀ ಮಾಹಿತಿ ಇರಲಿಲ್ಲ. ಹಾಗಾಗೇ, ಸತೀಶ್ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ತಮ್ಮ ಕೆಲಸಗಳಲ್ಲಿ ಮಗ್ನರಾಗಿದ್ದರು ಎಂದು ಸವದಿ ಹೇಳಿದರು

ಬೆಳಗಾವಿ: ಅಥಣಿ ಶಾಸಕ ಲಕ್ಷ್ಮಣ ಸವದಿ (Laxman Savadi) ಹೇಳುವ ಪ್ರಕಾರ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮತ್ತು ಸತೀಶ್ ಜಾರಕಿಹೊಳಿ (Satish Jarkiholi) ನಡುವೆ ಯಾವುದೇ ಮನಸ್ತಾಪವಿಲ್ಲ. ಅಥಣಿ ಪಟ್ಟಣದ ತಮ್ಮ ಕಚೇರಿಯಲ್ಲಿ ಇಂದು ಟಿವಿ9 ಕನ್ನಡ ವಾಹಿನಿಯ ಬೆಳಗಾವಿ ವರದಿಗಾರನ ಜೊತೆ ಮಾತಾಡಿದ ಶಾಸಕ, ಅಸಲಿಗೆ ಶಿವಕುಮಾರ್ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹುಕ್ಕೇರಿಗೆ ಆಗಮಿಸಿದ್ದರು ಮತ್ತು ಅವರ ಪ್ರವಾಸದ ಬಗ್ಗೆ ಬೆಳಗಾವಿಯ ಶಾಸಕರಿಗಾಗಲೀ, ಕಾಂಗ್ರೆಸ್ ಜಿಲ್ಲಾ ಘಟಕದ ಪದಾಧಿಕಾರಿಗಳಿಗಾಗಲೀ ಮಾಹಿತಿ ಇರಲಿಲ್ಲ. ಹಾಗಾಗೇ, ಸತೀಶ್ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ತಮ್ಮ ಕೆಲಸಗಳಲ್ಲಿ ಮಗ್ನರಾಗಿದ್ದರು ಎಂದು ಸವದಿ ಹೇಳಿದರು. ಸವದಿ ಸಹ ಶಿವಕುಮಾರ್ ಬೆಳಗಾವಿಗೆ ಬಂದ ದಿನ ಬೆಂಗಳೂರಿಗೆ ಹೋಗಿದ್ರಂತೆ. ಸತೀಶ್ ಮತ್ತು ಶಿವಕುಮಾರ್ ನಡುವಿನ ವಿರಸ, ಮುನಿಸು ಕೇವಲ ಊಹಾಪೋಹ ಮಾತ್ರ, ಶಿವಕುಮಾರ್ ಗೆ ಯಾವುದೇ ಸಚಿವ ಆಥವಾ ಶಾಸಕನ ಜೊತೆ ಮನಸ್ತಾಪವಿಲ್ಲ ಎಂದು ಸವದಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ